ಚುನಾವಣಾಧಿಕಾರಿಯಾಗಿ 'ಬ್ರಹ್ಮ' ಬಿಟ್ಟ ಸ್ಥಾನಕ್ಕೆ ಜೈದಿ
ನವದೆಹಲಿ, ಏ.19: ಭಾರತದ 20ನೇ ಮುಖ್ಯ ಚುನಾವಣಾಧಿಕಾರಿಯಾಗಿ (ಸಿಇಸಿ) ಡಾ. ಸೈಯದ್ ನಸೀಮ್ ಅಹ್ಮದ್ ಜೈದಿ ಅವರು ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ. ಹರಿಶಂಕರ್ ಬ್ರಹ್ಮ ಅವರ ಅಧಿಕಾರ ಅವಧಿ ಶನಿವಾರಕ್ಕೆ ಮುಕ್ತಾಯವಾಗಿತ್ತು.ನಸೀಮ್ ಜೈದಿ ಅವರ ಅವಧಿ 2017ರ ಜುಲೈ ತನಕ ಇದೆ.
ನಜೀಮ್ ತಮ್ಮ 65ನೇ ವಯಸ್ಸಿನಲ್ಲಿ ನಿವೃತ್ತರಾಗಲಿದ್ದಾರೆ. ಚುನಾವಣಾ ಆಯೋಗಕ್ಕೆ ಇನ್ನಿಬ್ಬರು ಆಯುಕ್ತರು ನೇಮಕವಾಗಲಿದ್ದಾರೆ. ಅಲ್ಲಿ ತನಕ ನಜೀಮ್ ಅವರ ಮೇಲೆ ಹೆಚ್ಚಿನ ಹೊಣೆ ಇರುತ್ತದೆ. ಸಾಮಾನ್ಯವಾಗಿ ಚುನಾವಣಾ ಆಯೋಗದ ಆಯುಕ್ತರ ಅವಧಿ ಆರು ವರ್ಷವಾಗಿರುತ್ತದೆ.

ಜೈದಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್ ನಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಕೇಡರ್ ನ 1976ನೇ ಬ್ಯಾಚಿನ ಐಎಎಸ್ ಅಧಿಕಾರಿ ನಸೀಮ್. ನಾಗರಿಕ ವಿಮಾನಯಾನ ಖಾತೆಯ ಕಾರ್ಯದರ್ಶಿಯಾಗಿದ್ದರು. ನಸೀಮ್ 2012ರ ಜು.31ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು. 2012ರ ಆಗಸ್ಟ್ 7ರಿಂದ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ.
Delhi: Syed Nasim Ahmad Zaidi takes charge as the new Chief Election Commissioner pic.twitter.com/yiUJR9q1Ae
— ANI (@ANI_news) April 19, 2015 ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ನಸೀಮ್, ಚುನಾವಣಾ ಆಯೋಗದ ರೂಪು ರೇಷೆ ಸಂಪೂರ್ಣವಾಗಿ ಬದಲಾಯಿಸಿ 10 ರಿಂದ 15 ವರ್ಷಕ್ಕೆ ಸಲ್ಲುವಂತೆ ಕಾರ್ಯತಂತ್ರ ರೂಪಿಸಲಾಗುವುದು. ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ತಂತ್ರಜ್ಞಾನದ ನೆರವು ಪಡೆಯಲಾಗುವುದು ಎಂದರು. ಜೈದಿ ಅವರ ಸುದ್ದಿಗೋಷ್ಠಿ ಪೂರ್ಣ ಪಾಠ ಇಲ್ಲಿದೆ.












Click it and Unblock the Notifications