Vande Bharat Express: ಬೆಂಗಳೂರು-ಕೇರಳ ಪ್ರಯಾಣಿಕರಿಗೆ ಶುಭಸುದ್ದಿ, ಇಂದಿನಿಂದ 16 ಬೋಗಿಗಳ ರೈಲು ಸಂಚಾರ

ಬೆಂಗಳೂರು: ಅಂತಾರಾಜ್ಯ ರೈಲುಗಳ ಸಾರಿಗೆ ಸುಧಾರಣೆ, ಹೆಚ್ಚುವರಿ ರೈಲು ಸೇವೆ ಒದಗಿಸುವುದು ಹಾಗೂ ಮೂಲಸೌಕರ್ಯ ಅಭಿವೃದ್ದಿ ರೈಲ್ವೆ ಇಲಾಖೆ ನಿರಂತರ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳನ್ನು (ಆಸನ) ಹೆಚ್ಚಿಸಿ ಇಂದು ಆಗಸ್ಟ್ 17ರಿಂದ ಕಾರ್ಯಾಚರಣೆ ನಡೆಸುತ್ತಿದೆ.

ಬೆಂಗಳೂರು ಮತ್ತು ಕೇರಳ ಕೊಚ್ಚಿ, ಎರ್ನಾಕುಲಂ ಸೇರಿದಂತೆ ವಿವಿಧ ಭಾಗಗಳಿಗೆ ಸಂಚಾರ ಮಾಡುವ ರೈಲು ಪ್ರಯಾಣಿಕರು ಈ ವಂದೇ ಭಾರತ್ ರೈಲಿನಲ್ಲಿ ಸೀಟುಗಳು ಕಡಿಮೆ ಇವೆ ಎಂದು ದೂರಿದ್ದರು. ಅಲ್ಲದೇ ಓಣಂ ಹಬ್ಬ ಪ್ರಯುಕ್ತ ಕೇರಳಕ್ಕೆ ಓಡಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಇದೆಲ್ಲ ಕಾರಣದಿಂದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 08 ಬೋಗಿಗಳು ಇದ್ದ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (26651/ 26651) ಅನ್ನು 16 ಬೋಗಿಗಳಿಗೆ ಹೆಚ್ಚಿಸಲಾಗಿದೆ ಎಂದು 'ಡಿಎಚ್' ವರದಿ ಮಾಡಿದೆ.

Vande Bharat Express

ಹೆಚ್ಚುವರಿ ರೈಲುಗಳ ಅಗತ್ಯತೆ ಇಲ್ಲ

ಇಂದಿನಿಂದ ಬೆಂಗಳೂರಿನಿಂದ ತೆರಳುವ ಎರ್ನಾಕುಲಂ ರೈಲು ದ್ವಿಗುಣ ಸಂಖ್ಯೆ ಆಸನಗಳೊಂದಿಗೆ ಸಂಚಾರ ಮಾಡಲಿದೆ. ಕೇರಳ ಮಾರ್ಗದ 'ವಿಬಿ' ರೈಲಿನ ಬೋಗಿಗಳನ್ನು ಹೆಚ್ಚಿಸಿರುವ ಕಾರಣಕ್ಕೆ ಈ ಮಾರ್ಗದಲ್ಲಿ ಸದ್ಯಕ್ಕೆ ಹೆಚ್ಚುವರಿ ರೈಲುಗಳ ಅಗತ್ಯವಿಲ್ಲ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗರಿಷ್ಠ 1100 ಮಂದಿ ಸಂಚಾರ

ಬೆಂಗಳೂರಿನಿಂದ ಚೆನ್ನೈ, ಹೈದರಬಾದ್, ಕೇರಳ, ಮಹಾರಾಷ್ಟ್ರ ಹೀಗೆ ಅನೇಕ ಭಾಗಗಳಲ್ಲಿ ರೈಲು ಸಂಚಾರ, ಸಾರಿಗೆ ಸುಧಾರಣೆಗೆ ಗಮನ ಹರಿಸಿರುವ ರೈಲ್ವೆ ಇಲಾಖೆಯು ಬೆಂಗಳೂರು ಎರ್ನಾಕುಲಂ ಮಾರ್ಗಕ್ಕೂ ಒತ್ತು ನೀಡಿದೆ. ಈ ರೈಲು ಆರಾಮದಾಯಕ ಪ್ರಯಾಣ, ಅತ್ಯಾಧುನಿಕ ಮೂಲಸೌಕರ್ಯವನ್ನು ಸಾರ್ವಜನಿಕರಿಗೆ ಒದಗಿಸಲಿದೆ. ಮೊದಲು ಎಂಟು ಬೋಗಿಗಳಿದ್ದು, ಸುಮಾರು 500 ಮಂದಿ ಪ್ರಯಾಣಿಸುತ್ತಿದ್ದು, ಇದೀಗ 16 ಬೋಗಿಗಳ ಜೋಡಣೆಯಿಂದಾಗಿ ಸುಮಾರು 1000-1100 ಪ್ರಯಾಣಿಕರು ಏಕಕಾಲಕ್ಕೆ ಸಂಚಾರ ಮಾಡಬಹುದು.

ಬೆಂಗಳೂರಿನಿಂದ ಓಣಂಗೆ ವಿಶೇಷ ರೈಲು ಕಾರ್ಯಾಚರಣೆ

ಕೇರಳದಲ್ಲಿ ಇದೇ ಆಗಸ್ಟ್ 26ರಂದು ಓಣಂ ಹಬ್ಬ ನಡೆಯಲಿದೆ. ಈ ಸಂಬಂಧ ಬೆಂಗಳೂರಿನ ಕಂಟೋನ್ಮೆಂಟ್ ನಿಲ್ದಾಣದಿಂದ ಕಣ್ಣೂರು ನಡುವೆ ವಿಶೇಷ ರೈಲುಗಳ ಸಂಚಾರ ಮಾಡಲಿವೆ. ಆಗಸ್ಟ್ 20 ರಂದು ರಾತ್ರಿ 10.30ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಟು ಮಾರನೇ ದಿನ ಮಧ್ಯಾಹ್ನ 12.30ಕ್ಕೆ ಕಣ್ಣೂರು ನಿಲ್ದಾಣ ತಲುಪುತ್ತದೆ.

ಮರಳಿ ಅದೇ ದಿಕ್ಕಿನಲ್ಲಿ ಆಗಸ್ಟ್ 21ರಂದು ಕಣ್ಣೂರು-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು (06568) ಕಣ್ಣೂರಿನಿಂದ ಸಂಜೆ 4 ಗಂಟೆಗೆ ಹೊರಟು ಮಾರನೇ ದಿನ ಬೆಂಗಳೂರು ನಿಲ್ದಾಣಕ್ಕೆ ಬರಲಿದೆ.

ನಿಲುಗಡೆ ನಿಲ್ದಾಣಗಳು

ಈ ವಿಶೇಷ ರೈಲುಗಳು ಎರಡು ದಿಕ್ಕಿನಲ್ಲಿ ಕೆ.ಆರ್.ಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ತಿರುಪ್ಪೂರ್, ಪಾಲಕ್ಕಾಡ್, ಕೋಜಿಕೊಡ್ ಸೇರಿದಂತೆ ಒಟ್ಟು 14 ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+