Swati Maliwal: ಕೋರ್ಟ್‌ನಲ್ಲಿ ಸ್ವಾತಿ ಮಲಿವಾಲ್ ಬಿಕ್ಕಿ ಬಿಕ್ಕಿ ಅತ್ತಿದ್ದು ಏಕೆ?
ಸೋಮವಾರ ದೆಹಲಿಯ ತೀಸ್ ಹಜಾರಿ ಕೋರ್ಟ್‌ನಲ್ಲಿ ಆಪ್ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಅರವಿಂದ್ ಕೇಜ್ರಿವಾಲ್ ಪಿಎ ಬಿಭವ್ ಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ವಿಚಾರಣೆಯ ವೇಳೆ ಸ್ವಾತಿ ಕೋರ್ಟ್‌ನಲ್ಲಿ ಹಾಜರಿದ್ದರು.
ಬಿಭವ್ ಕುಮಾರ್ ಅವರ ಪರ ಹಿರಿಯ ವಕೀಲ ಎನ್. ಹರಿಹರನ್ ವಾದ ಮಂಡಿಸಿದರು. ವಿಭವ್ ಕುಮಾರ್ ಜಾಮೀನು ಕುರಿತ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ. ಸ್ವಾತಿ ಮಲಿವಾಲ್ ಅವರ ವಕೀಲರೊಂದಿಗೆ ದೆಹಲಿ ಪೊಲೀಸರು ಕೂಡ ಬಿಭವ್ ಅವರ ಜಾಮೀನನ್ನು ವಿರೋಧಿಸಿ ನಿಲುವನ್ನು ಮಂಡಿಸಿದರು.

ಸ್ವಾತಿ ಕಣ್ಣೀರು ಹಾಕಿದ್ದು ಏಕೆ?
ಸ್ವಾತಿ, ಅರವಿಂದ್ ಕೇಜ್ರಿವಾಲ್ ಮನೆಯಿಂದ ಹೊರ ಬರುತ್ತಿರುವ ವಿಡಿಯೋವನ್ನು ಕೋರ್ಟ್‌ಗೆ ತೋರಿಸಲಾಯಿತು. ಇದೇ ವೇಳೆ ವಿಭವ್ ಪರ ವಕೀಲ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದಾಗ ಸ್ವಾತಿ ಕಣ್ಣುಗಳು ತುಂಬಿಕೊಂಡಿದ್ದವು. ಕೋರ್ಟ್ ಹಾಲ್‌ನಲ್ಲೇ ಸ್ವಾತಿ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು. ಬಳಿಕ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಸ್ವಾತಿ ಗಂಭೀರವಾಗಿ ಆಲಿಸಿದರು.
ವಾದದ ವೇಳೆ ಬಿಭವ್ ಪರ ವಕೀಲರು, ಸ್ವಾತಿಯ ದೇಹದ ಸೂಕ್ಷ್ಮ ಭಾಗಗಳಲ್ಲಿ ಯಾವುದೇ ಪೆಟ್ಟಿನ ಕುರುಹು ಇಲ್ಲ. ಹೀಗಾಗಿ ಹತ್ಯೆಯ ಪ್ರಶ್ನೆಯೇ ಇಲ್ಲ. ಇನ್ನು ಸ್ವಾತಿ ಅವರನ್ನು ನಿರ್ವಸ್ತ್ರಗೊಳಿಸುವ ಯಾವುದೇ ಉದ್ದೇಶ ಇರಲಿಲ್ಲ. ಸ್ವಾತಿ ಮೈಮೇಲಿನ ಗಾಯಗಳು ಸ್ವಯಂ ಪ್ರೇರಿತವಾಗಿವೆ ಎಂದು ವಾದ ಮಂಡಿಸಿದರು. ಇನ್ನು ಸ್ವಾತಿ ಅವರು ಪೂರ್ತಿ ಪ್ಲ್ಯಾನ್ ಮಾಡಿಯೇ ಮೂರು ದಿನಗಳ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವಿಭವ್ ಪರ ವಕೀಲ ವಾದಿಸಿದರು.
ಬಿಭವ್ ಸಾಮಾನ್ಯ ವ್ಯಕ್ತಿಯಲ್ಲ, ಅವರು ಮಂತ್ರಿಗಳಿಗೆ ನೀಡುವ ಸೌಲಭ್ಯಗಳನ್ನು ಬಳಸುತ್ತಾರೆ ಎಂದು ಸ್ವಾತಿ ನ್ಯಾಯಾಲಯಕ್ಕೆ ತಿಳಿಸಿದರು. ಈ ಬಿಭವ್ ಜಾಮೀನು ಪ್ರಕರಣದ ವಿಚಾರಣೆಯನ್ನು ಕೋರ್ಟ್ ಕಾಯ್ದಿರಿಸಿದೆ.

ಬಿಭವ್ ಪರ ವಕೀಲ್ ವಾದವೇನು?
ಈ ಬಗ್ಗೆ ವಾದವನ್ನು ಮಂಡಿಸಿದ ಬಿಭವ್ ಕುಮಾರ್ ವಕೀಲ ಎನ್. ಹರಿಹರನ್, ಸಿಎಂ ಭವನದಿಂದ ಸಿಸಿಟಿವಿಯನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ, ಆದ್ದರಿಂದ ಅದರಲ್ಲಿ ಟೆಂಪರಿಂಗ್ ಅಥವಾ ಟ್ಯಾಂಪರಿಂಗ್ ಮಾಡುವ ಪ್ರಶ್ನೆಯೇ ಇಲ್ಲ. ಬಿಭವ್ ಮೊದಲ ದಿನದಿಂದಲೇ ಪೊಲೀಸ್ ತನಿಖೆಗೆ ಹಾಜರಾಗಿದ್ದಾರೆ. ನಾವು ಜಾಮೀನಿಗೆ ಮಾತ್ರ ಬೇಡಿಕೆ ಇಡುತ್ತಿದ್ದೇವೆ, ಖುಲಾಸೆಗೊಳಿಸುವಂತೆ ಮನವಿ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಸ್ವಾತಿ ಹೇಳಿದ್ದೇನು?
ಇದೇ ವೇಳೆ ಸ್ವಾತಿ ಸಹ ತನ್ನ ಹೇಳಿಕೆಯನ್ನು ಕೋರ್ಟ್ ಮುಂದೆ ಇಟ್ಟರು. ನನ್ನ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಎಪಿಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು ಎಂದು ಸ್ವಾತಿ ಮಲಿವಾಲ್ ನ್ಯಾಯಾಲಯಕ್ಕೆ ತಿಳಿಸಿದರು. ನನ್ನನ್ನು ಬಿಜೆಪಿಯ ಏಜೆಂಟ್ ಎಂದು ಕರೆಯುತ್ತಿದ್ದಾರೆ. ವಿಭವ್‌ರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.












Click it and Unblock the Notifications