ಭಾರತದೊಳು ನುಗ್ಗುವ ಉಗ್ರರ ಯತ್ನ ವಿಫಲ, ಬೋಟ್ ಸ್ಫೋಟ

ಪೋರಬಂದರ್(ಗುಜರಾತ್) ಜ.2: ಸ್ಫೋಟಕಗಳಿಂದ ತುಂಬಿದ್ದ ಪಾಕಿಸ್ತಾನದ ದೋಣಿಯೊಂದು ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ. ಲಾಹೋರಿನ ಕೇತಿ ಬಂದರ್ ಮೂಲದ ದೋಣಿ ಇದಾಗಿದ್ದು, ಮೀನುಗಾರಿಕಾ ಬೋಟ್ ನಲ್ಲಿ ನಾಲ್ವರು ಇದ್ದರು ಎಂದು ತಿಳಿದು ಬಂದಿದೆ.

ಪಾಕಿಸ್ತಾನಿ ಮೂಲದ ಉಗ್ರರು 26/11 ಮುಂಬೈ ದಾಳಿ ಮಾದರಿಯಲ್ಲೇ ವಿಧ್ವಂಸಕ ಕೃತ್ಯದ ಸಂಚನ್ನು ರೂಪಿಸಿದ್ದರು. ಹೊಸ ವರ್ಷಾಚರಣೆ ವೇಳೆ ಜಲಮಾರ್ಗದ ಮೂಲಕ ದೇಶದೊಳಗೆ ನುಗ್ಗಲು ಯತ್ನಿಸಿದ್ದರು. ಆದರೆ, ಉಗ್ರರ ಸಂಚನ್ನು ಭಾರತೀಯ ಜಲ ಸೇನೆ ಹಾಗೂ ಕರಾವಳಿ ಕಾವಲು ಪಡೆ ವಿಫಲಗೊಳಿಸಿದೆ. [ಸಾವಿನಲ್ಲೂ ಸಾರ್ಥಕತೆ ಮೆರೆದ ಹುತಾತ್ಮನ ಪತ್ನಿ]

Suspicious Pakistani boat set on fire, sinks off Gujarat coast

ಡಿಸೆಂಬರ್ 31ರಂದು ಪಾಕಿಸ್ತಾನದ ಬೋಟ್ ಗುಜರಾತಿನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿತ್ತು. ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಈ ಬೋಟಿನಲ್ಲಿ ನಾಲ್ವರು ಶಂಕಿತ ಉಗ್ರರಿರುವುದು ಪತ್ತೆಯಾಗಿದೆ. [ಮುಂಬೈ ದಾಳಿ ರುವಾರಿ ಹೆಡ್ಲಿಗೆ 35 ವರ್ಷ ಶಿಕ್ಷೆ]

ಕರಾವಳಿ ಕಾವಲು ಪಡೆ ಈ ಬೋಟನ್ನು ಚೇಸ್ ಮಾಡಿ ಸುತ್ತುವರೆದಿದ್ದಾರೆ. ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಅದರೆ, ಕಾವಲು ಪಡೆಗೆ ಸೊಪ್ಪು ಹಾಕದೆ ಮುಂದೆ ಸಾಗಿದ ಬೋಟು ಕೆಲ ಸಮಯದ ನಂತರ ಬೆಂಕಿಗೆ ಆಹುತಿಯಾಗಿದೆ. ಬೋಟಿನಲ್ಲಿದ್ದ ನಾಲ್ವರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ ಎಂದು ಕಾವಲು ಪಡೆ ಅಧಿಕಾರಿಗಳು ಹೇಳಿದ್ದಾರೆ. [ಓಂಬಳೆ ಸಾಹಸ ಸ್ಮರಣೀಯ]

ಪೋರಬಂದರ್ ನಿಂದ ನೈಋತ್ಯಕ್ಕೆ ಸುಮಾರು 365 ಕಿ.ಮೀ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಈ ಘಟನೆ ಜರುಗಿದೆ. ಜ.1 ರ ಮುಂಜಾನೆ ನಡೆದ ಈ ಘಟನೆ ವಿವರಗಳು ಈಗಷ್ಟೇ ಲಭ್ಯವಾಗಿದೆ. ಬೋಟ್ ಹಾಗೂ ಅದರಲ್ಲಿದ್ದ ನಾಲ್ವರ ವಿವರಗಳು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಅದರೆ, 26/11 ಮಾದರಿಯಲ್ಲಿ ದಾಳಿ ನಡೆಸಲು ಈ ಮೀನುಗಾರಿಕಾ ಬೋಟ್ ಬಳಸಿಕೊಂಡು ಹಂಚು ಹಾಕಿದ್ದರು ಎಂದು ತಿಳಿದು ಬಂದಿದೆ.

ಬೋಟ್ ಟ್ರ್ಯಾಕ್ ಮಾಡಲಾಗಿತ್ತು: ಪಾಕಿಸ್ತಾನದ ಕರಾವಳಿಯನ್ನು ಈ ಶಂಕಿತ ಬೋಟ್ ಬಿಡುತ್ತಿದ್ದಂತೆ National Technical Research Organisation (NTRO) ತಂಡ ಟ್ರ್ಯಾಕ್ ಮಾಡತೊಡಗಿತ್ತು. ಡೊರ್ನಿಯರ್ ಏರ್ ಕ್ರಾಫ್ಟ್ ಬಳಸಿ ಬೋಟ್ ನ ಚಲನವಲನದ ಬಗ್ಗೆ ನಿಗಾವಹಿಸುವಂತೆ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿತ್ತು. ಅದರಂತೆ ಭಾರತದ ಗಡಿ ಪ್ರವೇಶಿಸಿದ ಮೇಲೆ ಬೋಟ್ ವಶಕ್ಕೆ ಪಡೆಯಲು ಕಾವಲು ಪಡೆ ಯತ್ನಿಸಿತ್ತು.

26/11ರಂದು ಪಾಕಿಸ್ತಾನದ ಬೋಟ್ ಮೂಲಕ ಮುಂಬೈ ಕರಾವಳಿಗೆ 10 ಜನ ಉಗ್ರರು ಬಂದಿಳಿದು ಸುಮಾರು 166 ಜನರನ್ನು ಬಲಿ ತೆಗೆದುಕೊಂಡಿದ್ದು ಈಗ ಇತಿಹಾಸ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+