Kochi Blast: ಕೇರಳದಲ್ಲಿ ಅನುಮಾನಾಸ್ಪದ ಸ್ಫೋಟ, ಒಬ್ಬ ವ್ಯಕ್ತಿ ಬಲಿ: ಕಾರಣ ತಿಳಿಯಿರಿ
ಕೊಚ್ಚಿ: ಕೇರಳದ ಸಭಾ ಭವನ ಒಂದರಲ್ಲಿ ಇಂದು ಸಂಭವಿಸಿದ ಸ್ಫೋಟಕ್ಕೆ ಓರ್ವ ವ್ಯಕ್ತಿ ಬಲಿಯಾಗಿ, ಸುಮಾರು 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದು ಕಡೆ ಇದೀಗ ಗಾಯಗೊಂಡಿರುವ 20 ಜನರ ಪೈಕಿ, ಹಲವರ ಸ್ಥಿತಿ ಗಂಭೀರ ಎನ್ನಲಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಕೂಡ ಆವರಿಸಿದೆ. ತಕ್ಷಣ ಈ ಸ್ಫೋಟಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಸ್ಫೋಟ ಸಂಭವಿಸಿದ್ದೆ ತಡ ಸ್ಥಳದಲ್ಲಿ ಇದ್ದ ಜನ ಬೆಚ್ಚಿಬಿದ್ದಿದ್ದಾರೆ. ಹಾಗೆ ಕೆಲವರು ಇದೇ ವೇಳೆ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಅಲ್ಲೇ ಓರ್ವ ಮೃತಪಟ್ಟಿದ್ದು, ಇನ್ನು ಗಾಯಗೊಂಡ ಹತ್ತಾರ ಜನರನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹಾಗೇ ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ. ಇದು ಮಾತ್ರ ಅಲ್ಲ, ಸ್ಥಳದಲ್ಲಿ ಹಲವು ಬಾರಿ ಸ್ಫೋಟ ಸಂಭವಿಸಿದ ಎಂಬ ಆರೋಪವೂ ಕೇಳಿಬಂದಿದೆ. ಇದೀಗ ಸ್ಫೋಟದಲ್ಲಿ ಸುಟ್ಟು ಕರಕಲಾದ ದೇವಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ.

ಜೀವ ಭಯದಲ್ಲಿ ಓಡುವಾಗ ಹೊತ್ತಿದ ಬೆಂಕಿ
ದಿಢೀರ್ ಸ್ಫೋಟ ಸಂಭವಿಸಿದರೆ ಯಾರಿಗೆ ತಾನೆ ಭಯ ಆಗದೆ ಇರುವುದಿಲ್ಲ ಹೇಳಿ? ಇದೇ ರೀತಿ ಇಂದು ಸಂಭವಿಸಿದ ಸ್ಫೋಟಗಳು ಕೂಡ ಕೊಚ್ಚಿ ಜನರನ್ನು ಬೆಚ್ಚಿಬೀಳಿಸಿವೆ. ತಕ್ಷಣ, ಎಚ್ಚರಗೊಂಡ ಸಭಾ ಭವನದಲ್ಲಿ ಇದ್ದ ಜನ ಅಲ್ಲಿಂದ ಓಡಿದ್ದಾರೆ. ಆದರೆ ಹೀಗೆ ಓಡುವ ಸಮಯದಲ್ಲಿ ಕೆಲವರಿಗೆ ಬೆಂಕಿ ತಗುಲಿ ಗಾಯವಾಗಿದೆ ಎನ್ನಲಾಗಿದೆ. ಈ ಎಲ್ಲಾ ಕಾರಣದ ಪರಿಣಾಮ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಆವರಿಸಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications