ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ ತೆರೆದಿಟ್ಟ ರಹಸ್ಯ: ನೋಟು ರದ್ದು ಬಗ್ಗೆ ಜನ ಏನಂತಾರೆ?

|
Google Oneindia Kannada News

500, 1000 ನೋಟನ್ನು ಕೇಂದ್ರ ಸರಕಾರ ಹಿಂಪಡೆದ ನಿರ್ಧಾರಕ್ಕೆ ಹಳ್ಳಿ-ಪಟ್ಟಣ, ಯುವಕರು-ಹಿರಿಯರು ಎನ್ನದೇ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನು ಖಾತ್ರಿ ಪಡಿಸುವಂತಿದೆ ಹಫಿಂಗ್ ಟನ್ ಪೋಸ್ಟ್- ಸಿ ವೋಟರ್ ನ ಸಮೀಕ್ಷೆ ಫಲಿತಾಂಶ. ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಹತ್ತಿರ ಹತ್ತಿರ ಶೇ 87ರಷ್ಟು ಮಂದಿ ಸರಕಾರದ ನಡೆ ಕಪ್ಪು ಹಣ ಇಟ್ಟುಕೊಂಡವರಿಗೆ ಸರಿಯಾಗಿ ಹೊಡೆತ ಕೊಟ್ಟಿದೆ ಎಂದಿದ್ದಾರೆ.

ಇನ್ನು ಶೇ 85ರಷ್ಟು ಮಂದಿ, ಕಪ್ಪು ಹಣದ ವಿರುದ್ಧ ಮಾಡುತ್ತಿರುವ ಹೋರಾಟ ನೋಡಿದರೆ ಈಗ ಅನುಭವಿಸುತ್ತಿರುವ ತೊಂದರೆ ಪರವಾಗಿಲ್ಲ ಎಂದು ಉತ್ತರಿಸಿದ್ದಾರೆ. ಒಟ್ಟಿನಲ್ಲಿ ಎಲ್ಲ ತೊಂದರೆ, ಆಕ್ಷೇಪಣೆಗಳ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಸಮೀಕ್ಷೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.[ನೋಟು ರದ್ದು ಸಲಹೆಗಾರನಿಗೇ ಸರಕಾರದ ಕ್ರಮ ಖುಷಿ ತಂದಿಲ್ಲ!]

ಈಅ ಸಮೀಕ್ಷೆಯನ್ನು ಸಿ ವೋಟರ್ ನಡೆಸಿರುವುದು ನವೆಂಬರ್ 21ರಂದು. 1212 ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಗ್ರಾಮೀಣ, ಅರೆ ಪಟ್ಟಣಗಳ ಕೆಲವರಿಗೆ ಸಣ್ಣ-ಪುಟ್ಟ ಅಸಮಾಧಾನ ಇರುವುದು ಹೊರತುಪಡಿಸಿದರೆ, ಬಹುತೇಕರಿಗೆ ಈ ಕ್ರಮದ ಬಗ್ಗೆ ಸಂತೋಷ ಇದೆ. ಅಂದಹಾಗೆ ಸಮೀಕ್ಷೆಯಲ್ಲಿ ಗೊತ್ತಾದ ಅಂಶಗಳ ಪ್ರಶ್ನೋತ್ತರಗಳ ವಿವರ ಇಲ್ಲಿದೆ.[ಸಮೀಕ್ಷೆ : ಅಪನಗದೀಕರಣದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ]

ನೋಟು ರದ್ದು ಬಗ್ಗೆ ಒಟ್ಟಾರೆ ನಿಮ್ಮ ಅಭಿಪ್ರಾಯ ಏನು?

ನೋಟು ರದ್ದು ಬಗ್ಗೆ ಒಟ್ಟಾರೆ ನಿಮ್ಮ ಅಭಿಪ್ರಾಯ ಏನು?

ಶೇ 66.30 -ತುಂಬ ಒಳ್ಳೆ ನಡೆ, ಚೆನ್ನಾಗಿ ಜಾರಿಗೆ ಬಂದಿದೆ
ಶೇ 27.40- ತುಂಬ ಒಳ್ಳೆ ನಡೆ, ಕೆಟ್ಟದಾಗಿ ಜಾರಿಯಾಗಿದೆ
ಶೇ 4.80- ಕೆಟ್ಟ ನಡೆ, ಕೆಟ್ಟದಾಗಿ ಜಾರಿಯಾಗಿದೆ
ಶೇ 1.50- ನಂಗೆ ಈ ಬಗ್ಗೆ ಗೊತ್ತಿಲ್ಲ

ನೋಟು ರದ್ದು ನಿರ್ಧಾರದಿಂದ ತೊಂದರೆ ಆಗಿದ್ದು ಯಾರಿಗೆ?

ನೋಟು ರದ್ದು ನಿರ್ಧಾರದಿಂದ ತೊಂದರೆ ಆಗಿದ್ದು ಯಾರಿಗೆ?

ಶೇ 44.1- ಶ್ರೀಮಂತರಿಗೆ
ಶೇ 35.9- ಬಡವರಿಗೆ
ಶೇ 16.3- ಬಡವ-ಶ್ರೀಮಂತ ಇಬ್ಬರಿಗೂ
ಶೇ 3.6- ಗೊತ್ತಿಲ್ಲ

ನೋಟು ರದ್ದು ಜಾರಿ ಬಗ್ಗೆ ಏನಂತೀರಿ?

ನೋಟು ರದ್ದು ಜಾರಿ ಬಗ್ಗೆ ಏನಂತೀರಿ?

ಶೇ 62.9-ಚೆನ್ನಾಗಿ ಆಗಿದೆ
ಶೇ 24-ಓಕೆ
ಶೇ 6.9-ಚೆನ್ನಾಗಿ ಆಗಿಲ್ಲ
ಶೇ 5.6-ಕೆಟ್ಟದಾಗಿ ಆಗಿದೆ
ಶೇ 0.7-ಗೊತ್ತಿಲ್ಲ

ನಿಮ್ಮ ಮೇಲೆ ವೈಯಕ್ತಿಕವಾಗಿ ಹೇಗೆ ಪರಿಣಾಮ ಬೀರಿದೆ?

ನಿಮ್ಮ ಮೇಲೆ ವೈಯಕ್ತಿಕವಾಗಿ ಹೇಗೆ ಪರಿಣಾಮ ಬೀರಿದೆ?

ಶೇ 37.4- ಸ್ವಲ್ಪ ಮಾತ್ರ ಸಮಸ್ಯೆಯಾಗಿದೆ-ಆದರೆ ಸುಲಭವಾಗಿ ಸಂಭಾಳಿಸಬಹುದು
ಶೇ 33.83-ಯಾವುದೇ ಸಮಸ್ಯೆಯೇ ಆಗಿಲ್ಲ
ಶೇ 16.52-ದೊಡ್ಡದಾಗಿ ತೊಂದರೆಯಾಗಿದೆ, ಆದರೆ ನಿಭಾಯಿಸಬಹುದು
ಶೇ 12.61- ನಿಭಾಯಿಸೋಕೆ ಆಗದ ದುರಂತ

ಯೋಜನೆ ಕೈಕೊಟ್ಟಿತಾ, ಸರಕಾರ ಇನ್ನೂ ಚೆನ್ನಾಗಿ ಯೋಜನೆ ಮಾಡಬಹುದಿತ್ತಾ?

ಯೋಜನೆ ಕೈಕೊಟ್ಟಿತಾ, ಸರಕಾರ ಇನ್ನೂ ಚೆನ್ನಾಗಿ ಯೋಜನೆ ಮಾಡಬಹುದಿತ್ತಾ?

ಶೇ 73.5-ಹೌದು
ಶೇ 22-ಇಲ್ಲ
ಶೇ 4.5-ಗೊತ್ತಿಲ್ಲ

ಇಷ್ಟೆಲ್ಲ ಶ್ರಮಪಡುವಷ್ಟು ಈ ಪ್ರಯತ್ನಕ್ಕೆ ಬೆಲೆಯಿದೆಯಾ?

ಇಷ್ಟೆಲ್ಲ ಶ್ರಮಪಡುವಷ್ಟು ಈ ಪ್ರಯತ್ನಕ್ಕೆ ಬೆಲೆಯಿದೆಯಾ?

ಶೇ 84.6-ಹೌದು
ಶೇ 13.3-ಇಲ್ಲ
ಶೇ 2-ಗೊತ್ತಿಲ್ಲ

ಒಂದು ವೇಳೆ ಮೋದಿ ಒತ್ತಡಕ್ಕೆ ಮಣಿದು ನೋಟು ನಿರ್ಧಾರ ವಾಪಸ್ ತಗೊಂಡರೆ?

ಒಂದು ವೇಳೆ ಮೋದಿ ಒತ್ತಡಕ್ಕೆ ಮಣಿದು ನೋಟು ನಿರ್ಧಾರ ವಾಪಸ್ ತಗೊಂಡರೆ?

ಶೇ 61.6-ಮೋದಿಗೆ ಸಿಕ್ಕ ಬೆಂಬಲ ಕುಸಿಯುತ್ತೆ
ಶೇ 17.7- ಮೋದಿಗೆ ಸಿಕ್ಕ ಬೆಂಬಲ ಹೆಚ್ಚುತ್ತದೆ
ಶೇ 10.6-ಯಾವ ಪರಿಣಾಮವೂ ಬೀರುವುದಿಲ್ಲ
ಶೇ 10.1- ಗೊತ್ತಿಲ್ಲ/ಏನೂ ಹೇಳಲಾರೆ

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಸಹಾಯವಾಗುತ್ತಾ?

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಸಹಾಯವಾಗುತ್ತಾ?

ಶೇ 69.50-ಹೌದು
ಶೇ 16.40-ಇಲ್ಲ
ಶೇ 14.10-ಗೊತ್ತಿಲ್ಲ/ಏನೂ ಹೇಳಲಾರೆ

ನೋಟು ರದ್ದು ಯಾವ ಪಕ್ಷದ ಅಭಿಯಾನಕ್ಕೆ ಹಣಕಾಸಿನ ತೊಂದರೆ ಕೊಡುತ್ತೆ? ತೊಂದರೆ ಆದರೆ, ಯಾವ ಪಕ್ಷದ ಮೇಲೆ ಹೆಚ್ಚು ಪ್ರಭಾವ?

ನೋಟು ರದ್ದು ಯಾವ ಪಕ್ಷದ ಅಭಿಯಾನಕ್ಕೆ ಹಣಕಾಸಿನ ತೊಂದರೆ ಕೊಡುತ್ತೆ? ತೊಂದರೆ ಆದರೆ, ಯಾವ ಪಕ್ಷದ ಮೇಲೆ ಹೆಚ್ಚು ಪ್ರಭಾವ?

ಶೇ 43.8- ಗೊತ್ತಿಲ್ಲ/ಏನೂ ಹೇಳಲಾರೆ
ಶೇ 19-ಕಾಂಗ್ರೆಸ್
ಶೇ 10.7-ಇತರ ಪಕ್ಷಗಳಿಗೆ
ಶೇ 10.4-ಬಿಜೆಪಿ
ಶೇ 8.5-ಎಲ್ಲ ಪಕ್ಷಗಳಿಗೂ
ಶೇ 7.5-ಯಾರಿಗೂ ಆಗಲ್ಲ

English summary
The government's demonetisation of Rs 500 and 100 notes gets a huge thumbs up from people across India in a survey. Nearly 87% of respondents felt the move was hurting those with black money, and 85% felt the inconvenience caused by demonetisation was worth the effort of fighting black money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X