ಸರ್ಜಿಕಲ್ ದಾಳಿ: ಹೊಸ ಚರ್ಚೆಗೆ ನಾಂದಿ ಹಾಡಿದ ಸಲ್ಮಾನ್ ಖಾನ್ ಹೇಳಿಕೆ

Written By:
Subscribe to Oneindia Kannada

ನವದೆಹಲಿ, ಅ 1: ಮನಸ್ಸಿಗೆ ತೋಚಿದ್ದನ್ನು ಫಿಲ್ಟರ್ ಇಲ್ಲದೇ ಹೇಳುವ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್, ಪಾಕಿಸ್ತಾನದ ಕಲಾವಿದರು ಉಗ್ರರಲ್ಲ, ಅವರು ಕಲಾವಿದರು ಎಂದು ಹೇಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಉರಿ ದಾಳಿ ಮತ್ತು ಭಾರತೀಯ ವಾಯುಸೇನೆ ಉಗ್ರರನ್ನು ಸಂಹಾರ ಮಾಡಿದ ಬಗ್ಗೆ ಸಂವಾದವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಲ್ಮಾನ್ ಖಾನ್, ಪಾಕಿಸ್ತಾನದ ಕಲಾವಿದರು ಭಯೋತ್ಪಾದಕರಲ್ಲ ಅವರು ಕಲಾವಿದರು ಎಂದು ಹೇಳಿದ್ದಾರೆ. (ಅಣು ಬಾಂಬ್ ಹಾಕಿ ಭಾರತದ ಸರ್ವನಾಶ, ಪಾಕ್)

ಎರಡು ದೇಶದ ನಡುವೆ ಬೇಕಾಗಿರುವುದು ಸೌಹಾರ್ದತೆ ಮತ್ತು ಶಾಂತಿಯೇ ಹೊರತು ಯುದ್ದವಲ್ಲ. ಆದರೆ, ಉರಿಯಲ್ಲಿ ನಮ್ಮ ಸೈನಿಕರ ಮೇಲೆ ದಾಳಿ ನಡೆದ ನಂತರ, ತಕ್ಕ ಪಾಠ ಕಲಿಸಲೇಬೇಕಾಗಿತ್ತು, ಯಾಕೆಂದರೆ ಅವರು ಉಗ್ರರು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಬಾಲಿವುಡ್ ಜಗತ್ತಿನಲ್ಲಿ ಪಾಕಿಸ್ತಾನದ ಕಲಾವಿದರನ್ನು ಬಹಿಷ್ಕರಿಸುವ ಬಗ್ಗೆ ಮಾತನಾಡುತ್ತಿದ್ದ ಸಲ್ಮಾನ್ ಖಾನ್, ಉಗ್ರರನ್ನು ನಾವು ಸದೆಬಡೆದಾಗಿದೆ. ಭಯೋತ್ಪಾದನೆ ಮತ್ತು ಕಲೆ ಎರಡು ಬೇರೆ ಬೇರೆ ವಿಷಯ ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.

IMPAA (ಇಂಡಿಯನ್ ಮೋಶನ್ ಪಿಚ್ಚರ್ ಆರ್ಟಿಸ್ಟ್ ಅಸೋಷಿಯೇಷನ್) ಪಾಕ್ ಕಲಾವಿದರನ್ನು ಮುಂದಿನ ತೀರ್ಮಾನದವರೆಗೆ ಬಹಿಷ್ಕರಿಸಿರುವ ಹಿನ್ನಲೆಯಲ್ಲಿ ನಡೆದ ಸಂವಾದದಲ್ಲಿ ಸಲ್ಮಾನ್ ಖಾನ್ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. (ಉಗ್ರರಿಗೆ, ಬುದ್ದಿಜೀವಿಗಳಿಗೆ 56 ಇಂಚು ಎದೆ ಪ್ರದರ್ಶಿಸಿದ ಮೋದಿ)

ಸಾಮಾಜಿಕ ತಾಣದಲ್ಲಿ ಸಲ್ಮಾನ್ ಖಾನ್ ಅವರನ್ನು ಹುರಿದು ಮುಕ್ಕಿದ ಟ್ವಿಟ್ಟಿಗರು..

ಎರಡು ದೇಶದ ನಡುವೆ ಬೇಕಾಗಿರುವುದು ಶಾಂತಿ

ಎರಡು ದೇಶದ ನಡುವೆ ಬೇಕಾಗಿರುವುದು ಶಾಂತಿ

ಬಾಲಿವುಡ್ ನಿರ್ಮಾಕರ ಸಂಘ ಕೂಡಾ, ಪಾಕ್ ಕಲಾವಿದರನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದೆ. ನಾನು ನನ್ನ ಹೇಳಿಕೆಯನ್ನು ನೀಡಿದ್ದೇನೆ. ನಾನು ಮತ್ತೆ ಮತ್ತೆ ಹೇಳುವುದು ಇಷ್ಟೇ.. ಎರಡು ದೇಶದ ನಡುವೆ ಬೇಕಾಗಿರುವುದು ಯುದ್ದವಲ್ಲ, ಶಾಂತಿ - ಸಲ್ಮಾನ್ ಖಾನ್.

ನಮ್ಮ ಸೈನಿಕರಿಗೆ ನಾನು ಆರ್ಥಿಕ ಸಹಾಯ ಮಾಡುತ್ತೇನೆ

ನಮ್ಮ ಸೈನಿಕರಿಗೆ ನಾನು ಆರ್ಥಿಕ ಸಹಾಯ ಮಾಡುತ್ತೇನೆ

ಸಂವಾದದಲ್ಲಿ ಮಾತನಾಡುತ್ತಾ ಅಕ್ಷಯ್ ಕುಮಾರ್, ಉಗ್ರರ ವಿರುದ್ದ ಹೋರಾಟದಲ್ಲಿ ಹುತಾತ್ಮರಾದ ಎಲ್ಲಾ ಸೈನಿಕರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ, ಉರಿ ದಾಳಿಯಲ್ಲಿ ಮೃತ ಪಟ್ಟವರಿಗೂ ನನ್ನ ಕಿಂಚಿತ್ ಆರ್ಥಿಕ ಸಹಾಯ ಮಾಡುತ್ತೇನೆ ಎಂದಾಗ, 'ಬೀಯಿಂಗ್ ಹ್ಯೂಮನ್' ಎನ್ಜಿಓ ಮೂಲಕ ನಾನೂ ಸಹಾಯ ಮಾಡುತ್ತೇನೆ ಎಂದು ಸಲ್ಮಾನ್ ಹೇಳಿದ್ದಾರೆ.

ಬಾಲಿವುಡ್ ಬ್ಯಾಡ್ ಬಾಯ್

ಪಾಕ್ ಕಲಾವಿದರಿಗೆ ವೀಸಾ ಇದೆ ಎಂದಿದ್ದೀರಿ. ಸಲ್ಮಾನ್ ಖಾನಿಗೂ ಡ್ರೈವಿಂಗ್ ಲೈಸೆನ್ಸ್ ಇದೆಯಲ್ಲಾ...

ಉಗ್ರರ ಮೇಲೆ ದಾಳಿ

ಪಾಕಿಸ್ತಾನದ ಕಲಾವಿದ ಫಾವದ್ ಖಾನ್, ಮೊದಲು ದೇಶ ಎಂದಿದ್ದರು. ಈ ನಾಯಿ ನೋಡಿ ಏನು ಹೇಳುತ್ತಿದೆ

ಸಲ್ಮಾನ್ ಕಲಾವಿದನಿರಬಹುದು

ಬಾಲಿವುಡ್ ನಟ ಸಲ್ಮಾನ್ ಖಾನ್ ಕಲಾವಿದನಿರಬಹುದು, ಆದರೆ ಮೊದಲು ದೇಶ

ಭಾರತ ಮತ್ತು ಪಾಕ್ ಸಂಬಂಧ

ಪಾಕಿಸ್ತಾನದ ಎಲ್ಲಾ ಕಲಾವಿದರನ್ನು ವಾಪಸ್ ಕಳುಹಿಸಲಾಗಿದೆ, ನಿಮ್ಮನ್ನು ಬಿಟ್ಟು

ಸಲ್ಮಾನ್ ನಿಯತ್ತು ಯಾರ ಮೇಲೆ

ಶಾರೂಖ್, ಅಮೀರ್ ನಂತರ ಸಲ್ಮಾನ್ ಖಾನ್ ನಿಯತ್ತು ಯಾರ ಮೇಲೆ ಎನ್ನುವುದು ರುಜುವಾಯಿತು

ಖಾನ್ ಗಳು ದೇಶಭಕ್ತರಲ್ಲ

ಸಲ್ಮಾನ್, ಶಾರೂಖ್, ಅಮೀರ್, ಸೈಫ್ ಇವರೆಲ್ಲಾ ದಾವೂದ್ ಇಬ್ರಾಹಿಂಗೆ ಕೆಲಸ ಮಾಡುವವರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistani actors are artists not terrorists, Bollywood actor Salman Khan reaction on the recent surgical attack on Pakistan.
Please Wait while comments are loading...