ಟೊಮೆಟೊ ದರ ಏರಿಕೆ: ಸೂರತ್‌ನಲ್ಲಿ 150 ಕೆಜಿ ಟೊಮೆಟೊ ಕಳ್ಳತನ ಮಾಡಿದ್ದ ವ್ಯಕ್ತಿ ಬಂಧನ
ಅಹಮದಾಬಾದ್, ಜುಲೈ. 11: ಚಿನ್ನ, ಹಣ ಕಳ್ಳತನದ ಸುದ್ದಿಗಳನ್ನು ನೋಡಿ ಸಾಕಾಗಿದ್ದವರಿಗೆ ಈಗ ಟೊಮೊಟೋ ಹೊಸ ಹೊಸ ಸುದ್ದಿಗಳನ್ನು ನೀಡುತ್ತಿದೆ. ದಿನ ದಿನಕ್ಕೆ ತನ್ನ ಬೆಲೆ ಏರಿಸಿಕೊಳ್ಳುತ್ತಿರುವ ಜೊತೆಗೆ ಹಲವರನ್ನು ಕಳ್ಳತನ ಮಾಡುವಂತೆ ಮಾಡುತ್ತಿದೆ. ಕರ್ನಾಟಕದಲ್ಲಿಯೂ ಟೊಮೊಟೋ ದೋಚಿದ್ದ ಘಟನೆಗಳು ವರದಿಯಾ್ ಬೆನ್ನಲ್ಲೆ ಗುಜರಾತ್‌ನಿಂದಲೂ ಅಂತಹದ್ದೆ ಒಂದು ಸುದ್ದಿ ಬಂದಿದೆ.
150 ಕೆಜಿ ಟೊಮೆಟೊ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸೂರತ್ ಕಪೋಡ್ರಾ ಪ್ರದೇಶದಲ್ಲಿ ಅಕ್ಷರ ಡೈಮಂಡ್ ಬಳಿಯ ತರಕಾರಿ ಮಾರುಕಟ್ಟೆಯಿಂದ ಟೊಮೆಟೊ, ಬದನೆ ಮತ್ತು ಬೆಳ್ಳುಳ್ಳಿಯನ್ನು ದರೋಡೆ ಮಾಡಿದ ಬಗ್ಗೆ ದೂರು ಸಲ್ಲಿಸಲಾಗಿದೆ.

ಕಪೋದ್ರಾಣಿ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿ ಮಾಲೀಕರೊಬ್ಬರು ತಮ್ಮ ಅಂಗಡಿಯಿಂದ ಮೂರು ಚೀಲ ಟೊಮೆಟೊ ಕಾಣೆಯಾಗಿದೆ ಎಂದು ದೂರು ದಾಖಲಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನವಾಗಿರುವುದು ಪತ್ತೆಯಾಗಿದೆ. ಯುವಕನೊಬ್ಬ ಅಂಗಡಿಯಿಂದ 150 ಕೆ.ಜಿ.ಗೂ ಅಧಿಕ ಟೊಮೆಟೋಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಘನಶ್ಯಾಮ್ ಎಂದು ಗುರುತಿಸಲಾಗಿದೆ. "ಘನಶ್ಯಾಮ್ ಮೂಲತಃ ಭಾವನಗರ ಜಿಲ್ಲೆಯವರಾಗಿದ್ದು, ಐದು ತಿಂಗಳ ಹಿಂದೆ ಉದ್ಯೋಗಕ್ಕಾಗಿ ಸೂರತ್ ನಗರಕ್ಕೆ ಬಂದಿದ್ದರು. ಆದರೆ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಕೊನೆಗೆ ಕಳ್ಳತನಕ್ಕೆ ಮುಂದಾಗಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಸದ್ಯ ತರಕಾರಿಗಳ ಬೆಲೆ ಏರಿಕೆಯಾಗಿರುವುದರಿಂದ ಮಾರುಕಟ್ಟೆಯ ಒಳಗಿನಿಂದ ಬೆಲೆಬಾಳುವ ತರಕಾರಿಗಳನ್ನು ಕಳ್ಳತನ ಮಾಡುತ್ತಿದ್ದರು. ಇಲ್ಲಿ ಕದ್ದ ಮಾಲನ್ನು ಸ್ಥಳೀಯರಿಗೆ ಕೆಜಿಗೆ 40 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಪೋದ್ರ ಪೊಲೀಸರು ಎಲ್ಲಾ ಕದ್ದ ತರಕಾರಿಗಳನ್ನು ವಶಪಡಿಸಿಕೊಂಡು ಮೂಲ ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಇನ್ನು, ಬೆಂಗಳೂರಿಗೆ ಸಮೀಪದಲ್ಲಿರುವ ರೈತರೊಬ್ಬರ ವಾಹನವು ಆಕಸ್ಮಿಕವಾಗಿ ಕಾರಿಗೆ ಢಿಕ್ಕಿ ಹೊಡೆದಿದ್ದಕ್ಕಾಗಿ ತಾನು ಬೆಳೆದ ಟೊಮೆಟೊ ಪಾವತಿಸಬೇಕಾದ ಘಟನೆ ನಡೆದಿದೆ. ಕಾರಿನಲ್ಲಿದ್ದ ತಮ್ಮ ಒಡೆದ ಕನ್ನಡಿಯನ್ನು ಸರಿ ಮಾಡಿಸಲು ರೈತ ಮಲ್ಲೇಶ್ಬಳಿ ಹಣವಿಲ್ಲ ಎಂದು ತಿಳಿದು, 2.5 ಟನ್ ಟೊಮೊಟೋ ತುಂಬಿದ ಟ್ರಕ್‌ನೊಂದಿಗೆ ಅಪಹರಿಸಿ ಪರಾರಿಯಾಗಿದೆ.
ಚಿಕ್ಕಜಾಲದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಪೊಲೀಸರ ಪ್ರಕಾರ, ಮೂವರ ಕಾರಿಗೆ ಹಾನಿಯಾದ ಅಪಘಾತದ ನಂತರ ರೈತರು ಹಣವನ್ನು ಕೊಡುವುದಿಲ್ಲ ಎಂದು ಟೊಮೆಟೊ ಟ್ರಕ್‌ನೊಂದಿಗೆ ಪರಾರಿಯಾಗಿದ್ದಾರೆ ಎಂದಿದ್ದಾರೆ. ಘಟನೆಯ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಮಲ್ಲೇಶ್ ಅವರು ಶನಿವಾರ ಕೋಲಾರಕ್ಕೆ ಟೊಮೆಟೊ ಲೋಡ್ ಅನ್ನು ಸಾಗಿಸುತ್ತಿದ್ದಾಗ ಆಕಸ್ಮಿಕವಾಗಿ ಲಾರಿ ಡಿಕ್ಕಿ ಹೊಡೆದು ಆರೋಪಿಗಳು ಪ್ರಯಾಣಿಸುತ್ತಿದ್ದ ಕಾರಿನ ಕನ್ನಡಿ ಒಡೆದಿದೆ. ಇದರ ಬೆನ್ನಲ್ಲೇ ರೈತ ಹಾಗೂ ಆತನ ಚಾಲಕನನ್ನು ನಿಂದಿಸಿ ಭಾರೀ ಪ್ರಮಾಣದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇಬ್ಬರ ಬಳಿಯೂ ಹಣವಿಲ್ಲದೇ ಆರೋಪಿಗಳ ಜೊತೆ ಮಾತುಕತೆ ನಡೆಸಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications