Get Updates
Get notified of breaking news, exclusive insights, and must-see stories!

Places of Worship Act: ಪೂಜಾ ಸ್ಥಳಗಳ ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್‌ ಮಹತ್ವದ ಆದೇಶ

1991ರ ಪೂಜಾ ಸ್ಥಳಗಳ ಕಾಯ್ದೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಮಹತ್ವದ ಸೂಚನೆ ನೀಡಿದೆ. ಈ ಕಾನೂನಿನ ಸಿಂಧುತ್ವವನ್ನು ನಿರ್ಧರಿಸುವವರೆಗೆ ಯಾವುದೇ ಹೊಸ ದಾವೆಗಳನ್ನು ಸ್ವೀಕರಿಸುವಂತಿಲ್ಲ ಎಂದು ದೇಶದಾದ್ಯಂತ ಎಲ್ಲ ಸಿವಿಲ್ ನ್ಯಾಯಾಲಯಗಳಿಗೆ ಹೇಳಿದೆ. ನಾವು ಪೂಜಾ ಸ್ಥಳಗಳ ಕಾಯ್ದೆಯನ್ನು ನಿರ್ಧರಿಸುವವರೆಗೆ ಎಲ್ಲ ಸಮೀಕ್ಷೆಗಳನ್ನು ನಿಲ್ಲಿಸಿ ಎಂದೂ ಖಡಕ್‌ ಆಗಿ ಹೇಳಿದೆ.

ದೇಶದಾದ್ಯಂತ ಸಿವಿಲ್ ನ್ಯಾಯಾಲಯಗಳು ಯಾವುದೇ ಪೂಜಾ ಸ್ಥಳದ ಮಾಲೀಕತ್ವ ಅಥವಾ ಅದರ ಶೀರ್ಷಿಕೆಯನ್ನು ಪ್ರಶ್ನಿಸಿ ಹೊಸ ದಾವೆಗಳನ್ನು ನೋಂದಾಯಿಸುವುದನ್ನು ನಿರ್ಬಂಧಿಸಿದೆ. ಮುಂದಿನ ಆದೇಶದವರೆಗೆ ವಿವಾದಿತ ಧಾರ್ಮಿಕ ಸ್ಥಳಗಳ ಸಮೀಕ್ಷೆಗಳು ಬೇಡ ಎಂದು ಆದೇಶಿಸಿದೆ. ಭಾರತದಲ್ಲಿ ಪೂಜಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದ ಹೊಸ ಅರ್ಜಿಗಳ ನೋಂದಣಿ ಮಾಡದಂತೆಯೂ ಹೇಳಿದೆ.

Supreme Court s Directive On 1991 Places Of Worship Act No New Claims Allowed

ನಿನ್ನೆ ಪೂಜಾ ಸ್ಥಳಗಳ ಕಾಯ್ದೆಯ-1991 ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು. ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ಸಂಜಯ್ ಕುಮಾರ್, ಕೆ.ವಿ.ವಿಶ್ವನಾಥನ್ ನೇತೃತ್ವದ ತ್ರಿಸದಸ್ಯ ಪೀಠ ಇವುಗಳ ವಿಚಾರಣೆ ನಡೆಸಿ ಈ ರೀತಿ ನಿರ್ಣಯ ಪ್ರಕಟಿಸಿದೆ.

ಈ ವಿಷಯವು ನ್ಯಾಯಾಲಯದ ಮುಂದಿರುವ ವಿಷಯವಾಗಿರುವುದರಿಂದ ನಾವು ಅದನ್ನು ಪರಿಗಣಿಸುತ್ತೇವೆ. ಹೊಸ ಮೊಕದ್ದಮೆಗಳನ್ನು ಸಲ್ಲಿಸಬಹುದಾದರೂ, ಯಾವುದೇ ದಾವೆಗಳನ್ನು ದಾಖಲಿಸಲಾಗುವುದಿಲ್ಲ. ಈ ನ್ಯಾಯಾಲಯದ ಮುಂದಿನ ಆದೇಶದವರೆಗೆ ಯಾವುದೇ ಪ್ರಕ್ರಿಯೆಗಳನ್ನು ಕೈಗೊಳ್ಳಬಾರದು ಎಂದು ಹೇಳಿದೆ. ಅಲ್ಲದೆ ಬಾಕಿ ಉಳಿದಿರುವ ಮೊಕದ್ದಮೆಗಳಲ್ಲಿ ಯಾವುದೇ ನ್ಯಾಯಾಲಯವು ಮಧ್ಯಂತರ ಆದೇಶ ಅಥವಾ ಅಂತಿಮ ಆದೇಶಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Supreme Court s Directive On 1991 Places Of Worship Act No New Claims Allowed

2025ರ ಫೆಬ್ರವರಿ 17ರಂದು ಸುಪ್ರೀಂಕೋರ್ಟ್‌ ಮುಂದಿನ ವಿಚಾರಣೆಯನ್ನು ನಡೆಸುವುದಾಗಿ ತಿಳಿಸಿದೆ. ಅಲ್ಲದೆ ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರವು ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಮನಗಂಡಿರುವ ಕೋರ್ಟ್‌, ನಾಲ್ಕು ವಾರಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಅಲ್ಲಿವರೆಗೆ ಕಾನೂನಿನ ಸಿಂಧುತ್ವವನ್ನು ನಿರ್ಧಾರ ಆಗುವವರೆಗೆ ಯಾವುದೇ ಹೊಸ ದಾವೆಗಳನ್ನು ಸ್ವೀಕರಿಸದಂತೆ ಸುಪ್ರೀಂ ಕೋರ್ಟ್​ ಹೇಳಿದೆ.

ಏನಿದು ಪೂಜಾ ಸ್ಥಳಗಳ ಕಾಯ್ದೆ?: 1947ರ ಆಗಸ್ಟ್ 15ಕ್ಕಿಂತ ಮೊದಲಿನ ಧಾರ್ಮಿಕ ಸ್ಥಳಗಳನ್ನು ಬದಲಾಯಿಸುವಂತಿಲ್ಲ ಹಾಗೂ ಆ ಪೂಜಾ ಸ್ಥಳಗಳನ್ನು ಯಥಾಸ್ಥಿತಿಯಲ್ಲೇ ಮುಂದುವರೆಸುವಂತೆ ಪೂಜಾ ಸ್ಥಳಗಳ ಕಾಯ್ದೆ ಹೇಳಿತ್ತು. ಇದನ್ನು ಧಾರ್ಮಿಕ ಹಕ್ಕಿನ ಉಲ್ಲಂಘನೆ ಹಾಗೂ ಈ ಕಾಯ್ದೆ ಏಕಪಕ್ಷೀಯ ಎಂದು ಬಿಜೆಪಿ ನಾಯಕರು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದರು. ಸದ್ಯ ಇದರ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ನಡೆಸುತ್ತಿದೆ.

ರಾಮಮಂದಿರ ಚಳವಳಿಯ ಸಮಯದಲ್ಲಿ ಆಗಿನ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ಕಾಯ್ದೆಯನ್ನು ತಂದಿತ್ತು. ಈ ಕಾನೂನಿನಂತೆ ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಇರುವ ಯಾವುದೇ ಪೂಜಾ ಸ್ಥಳವನ್ನು ಪರಿವರ್ತಿಸುವುದನ್ನು ನಿಷೇಧಿಸುತ್ತದೆ ಮತ್ತು ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಅದು ಅಸ್ತಿತ್ವದಲ್ಲಿದ್ದಂತೆಯೇ ನಿರ್ವಹಿಸಬೇಕು ಎಂದು ಹೇಳಿತ್ತು. ಆದರೆ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿಗೆ ವಿವಾದವನ್ನು ಇದರ ವ್ಯಾಪ್ತಿಯಿಂದ ಹೊರಗೆ ಇಡಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+