ಸೆ.21ರಿಂದ 27ರವರೆಗೂ ಪ್ರತಿದಿನ 6,000 ಕ್ಯೂಸೆಕ್ಸ್ ನೀರು ಹರಿಸಿ
ನವದೆಹಲಿ, ಸೆ. 20: ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಸುಪ್ರೀಂಕೋರ್ಟಿನಲ್ಲಿ ಮಂಗಳವಾರ ಸಂಜೆ ತೀರ್ಪು ಹೊರ ಬಂದಿದ್ದು, ಮತ್ತೊಮ್ಮೆ ಕಾವೇರಿ ನದಿ ನೀರು ನಂಬಿ ಬದುಕುತ್ತಿರುವ ಜನರಿಗೆ ಆಘಾತವಾಗಿದೆ. ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರದ ವಾದ-ಪ್ರತಿವಾದವನ್ನು ಆಲಿಸಿ, ಕೋರ್ಟ್ ಆದೇಶ ನೀಡಿದೆ. ಈ ಕುರಿತಂತೆ ಅಪ್ಡೇಟ್ಸ್ ಇಲ್ಲಿದೆ: [ಕುಡಿಯುವುದಕ್ಕೆ ಮಾತ್ರ ಕಾವೇರಿ: ನಿರ್ಣಯದ ಪೂರ್ಣ ಪಾಠ]
* ಪ್ರತಿ ದಿನ 6,000 ಕ್ಯೂಸೆಕ್ಸ್ ನೀರು ಹರಿಸುವುದು ಕರ್ನಾಟಕಕ್ಕೆ ಹಿನ್ನಡೆ ಎನ್ನಬಹುದು. ಆದರೆ, ಇದಕ್ಕಿಂತ ದೊಡ್ಡ ಆಘಾತವೆಂದರೆ ಕಾವೇರಿ ನಿರ್ವಹಣಾ ಮಂಡಳಿ ರಚನೆ. ಮಂಡಳಿ ರಚನೆಯಾದರೆ, ಕರ್ನಾಟಕ ತನ್ನ ಕಾವೇರಿ ಜಲ ಸಂಪತ್ತಿನ ಮೇಲೆ ಹಿಡಿತ ಕಳೆದುಕೊಳ್ಳಲಿದೆ. [ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?]
* ಸುಪ್ರೀಂಕೋರ್ಟಿನ ಮಂಗಳವಾರ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮೂರು ದಿನ ಅವಕಾಶ ಕರ್ನಾಟಕ ಸರ್ಕಾರಕ್ಕೆ ಸಿಕ್ಕಿದೆ.
* ಕಾವೇರಿ ನೀರು ತಮಿಳುನಾಡಿಗೆ ಯಾವಾಗ ಬಿಡಬೇಕು ಎಂಬುದನ್ನು ಕಾವೇರಿ ನಿರ್ವಹಣಾ ಮಂಡಳಿ ನಿರ್ಧರಿಸಲಿದೆ.
* ಕಾವೇರಿ ನೀರು ಇರುವ ಕೆಆರ್ ಎಸ್, ಹೇಮಾವತಿ, ಕಬಿನಿ, ಹಾರಂಗಿ ಅಣೆಕಟ್ಟಿನ ಮೇಲೆ ನಿಯಂತ್ರಣ ಕಳೆದುಕೊಳ್ಳಲಿರುವ ಕರ್ನಾಟಕ ಸರ್ಕಾರ.
* ಸೆಪ್ಟೆಂಬರ್ 21 ರಿಂದ 27ರ ವರೆಗೂ ಪ್ರತಿದಿನ 6,000 ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ. [ಮೋದಿ ಅವರಿಂದ ಕಾವೇರಿ ವಿವಾದ ಅಂತ್ಯ ಸಾಧ್ಯ : ದೇವೇಗೌಡ]
* ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ಆದೇಶಿಸಿದೆ. ನಾಲ್ಕುವಾರಗಳಲ್ಲಿ ಮಂಡಳಿ ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ.
* ಕಾವೇರಿ ನಿರ್ವಹಣಾ ಮಂಡಳಿ ನೇಮಕದ ಬಗ್ಗೆ ಅಟಾರ್ನಿ ಜನರಲ್ ಅವರ ಸಲಹೆ ಪಡೆಯಲು ಚಿಂತನೆ.
#CauveryIssue #Cauveryverdict #CauveryLastHope ಕಾವೇರಿ ಕೊಳ್ಳದ ಡ್ಯಾಂಗಳ ಸ್ಥಿತಿಗತಿ pic.twitter.com/ZH8et0rcBI
— Suvarna News 24x7 (@suvarnanewstv) September 20, 2016
* ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 48 ನಗರ ಪ್ರದೇಶ, 635 ಗ್ರಾಮೀಣ ಭಾಗಗಳು ಕಾವೇರಿ ಜಲಾನಯನ ಪ್ರದೇಶದ ಮೇಲೆ ಅವಲಂಬಿತವಾಗಿವೆ. ಮೇ 2017ರ ತನಕ 30ಟಿಎಂಸಿಅಡಿ ನೀರಿನ ಅಗತ್ಯವಿದೆ.
* ಮಂಗಳವಾರ ಅಣೆಕಟ್ಟಿನಲ್ಲಿ 87.88 ಅಡಿ ನೀರಿನ ಮಟ್ಟವಿತ್ತು. 120 ಅಡಿ ಗರಿಷ್ಠ ಮಟ್ಟ ಹೊಂದಿದೆ. ಸ್ಟೋರೆಜ್ ಪ್ರಮಾಣ 50.39 ಟಿಎಂಸಿ(ಪೂರ್ತಿ ಪ್ರಮಾಣ 93.47 ಟಿಎಂಸಿ). ಒಳ ಹರಿವು 10,092 ಕ್ಯೂಸೆಕ್ಸ್ ನಷ್ಟಿದೆ.
* ನಮ್ಮ ಪಾಲಿನ ನೀರು ಕೇಳುತ್ತಿದ್ದೇವೆ ಎಂದ ತಮಿಳುನಾಡು, ಮೇಲುಸ್ತುವಾರಿ ಸಮಿತಿಗೆ ತಜ್ಞರು ಇತ್ತೀಚಿನ ವರದಿ ನೀಡಲಿ, ತಾತ್ಕಾಲಿಕ ಆದೇಶ ನೀಡಬೇಡಿ ಎಂದು ನ್ಯಾಯಪೀಠದ ಮುಂದೆ ಕರ್ನಾಟಕದ ಮನವಿ.

* ಕಾವೇರಿ ನ್ಯಾಯಮಂಡಳಿಯಲ್ಲಿ ತಿಂಗಳು ಆಧಾರದ ಮೇಲೆ ನೀರು ಹಂಚಿಕೆಗೆ ಯಾವುದೇ ಸೂತ್ರವಿಲ್ಲ. ತಮಿಳುನಾಡಿನ ರೈತರಿಗೆ ಅಗತ್ಯವಾದ ನೀರು ಹರಿಸಲಾಗಿದೆ ಎಂದು ಕರ್ನಾಟಕ ಪರ ನಾರಿಮನ್ ವಾದ.
* ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡಿನ ವಕೀಲರು, ನ್ಯಾಯಮಂಡಳಿ ಸೂಚನೆ ಪಾಲಿಸುವಂತೆ ಕೇಳಿದ್ದಾರೆ.
* ನ್ಯಾ. ದೀಪಕ್ ಮಿಶ್ರಾ, ನ್ಯಾ. ಲಲಿತ್ ಅವರಿರುವ ವಿಭಾಗೀಯ ಪೀಠದ ಮುಂದೆ ವಿಚಾರಣೆ ಆರಂಭ. ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಉಪಸ್ಥಿತಿ. ಮೊದಲಿಗೆ ಕರ್ನಾಟಕದ ವಕೀಲರಿಂದ ವಾದ ಮಂಡನೆ.
* ಇತ್ತ ಗಡಿಭಾಗ ಅತ್ತಿಬೆಲೆಯಲ್ಲಿ ವೀಕ್ಷಣೆಗೆ ಬಂದು ಹಾಗೆ ತೆರಳಿದ ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ.
* ಈ ಹಿಂದೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ವಿಚಾರಣೆಗೆ ಬಂದಾಗ ತಮಿಳುನಾಡು ಪ್ರತಿ ದಿನ 20,000 ಕ್ಯೂಸೆಕ್ಸ್ ನೀರು ಬೇಕೆಂದು ಮನವಿ ಮಾಡಿತ್ತು. ಆದರೆ, ಪ್ರತಿನಿತ್ಯ 12,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶಿಸಿತ್ತು.
* ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ಪ್ರತಿ ದಿನ(10 ದಿನದ ಮಟ್ಟಿಗೆ) 3,000ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಲಾಗಿದೆ.
* ಸೋಮವಾರ ನವದೆಹಲಿಯ ಶ್ರಮಶಕ್ತಿಯಲ್ಲಿ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಹೊರ ಬಂದ ನಿರ್ಣಯ ಕರ್ನಾಟಕದ ವಿರುದ್ಧ ಹೊರ ಬಂದಿತ್ತು. [ಕಾವೇರಿ ನೀರು ಬಿಡಿ: ಶಶಿಶೇಖರ್]
* ಸೆಪ್ಟೆಂಬರ್ 21ರಿಂದ 30ರ ತನಕ 3,000 ಕ್ಯೂಸೆಕ್ಸ್ ನೀರು ಹರಿಸುವಂತೆ ಸಮಿತಿ ಅಧ್ಯಕ್ಷ ಶಶಿಶೇಖರ್ ಅವರು ಕರ್ನಾಟಕಕ್ಕೆ ಆದೇಶ ನೀಡಿದ್ದರು.[ಮೆಟ್ಟೂರು ಜಲಾಶಯದಿಂದ ನೀರು ಬಿಟ್ಟ ತಮಿಳುನಾಡು]
ಕರ್ನಾಟಕದ ವಾದ: ಈಗಾಗಲೇ ತಮಿಳುನಾಡಿಗೆ 1.60 ಲಕ್ಷ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲಾಗಿದೆ. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಗೆ ಕರ್ನಾಟಕ ಸರ್ಕಾರ ಮನವಿ ಮಾಡಿದೆ. [ಇಂಥವರಿಂದ ಕಾವೇರಿ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೆ?]
ತಮಿಳುನಾಡು ಕೂಡಾ ಈಗ ಸಿಕ್ಕಿರುವ ನೀರಿನ ಪ್ರಮಾನ ಕಡಿಮೆಯಾಗಿದೆ ಎಂದು ವಾದಿಸಿದೆ. ಒಟ್ಟಾರೆ, ಮೇಲುಸ್ತುವಾರಿ ಸಮಿತಿ ನಿರ್ಣಯವನ್ನು ಉಭಯ ರಾಜ್ಯಗಳು ತಿರಸ್ಕರಿಸಿವೆ.[ಕಚೇರಿಗಳಿಗೆ ನಿರಾಳವಾಗಿ ಹೋಗಿ]
Flash : Cauvery waters case- Hearing underway in Supreme Court. MB patil water resources minister also present in court #CauveryIssue
— Oneindia Kannada (@OneindiaKannada) September 20, 2016
ಕರ್ನಾಟಕದಲ್ಲಿ ಪರಿಸ್ಥಿತಿ: ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಸೆ.20, 21ರಂದು ಮದ್ಯದಂಗಡಿಗಳನ್ನು ತೆರೆಯದಂತೆ ಆದೇಶಿಸಲಾಗಿದೆ. ರಾಜ್ಯ ಮೀಸಲು ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ನಗರ ಶಸ್ತ್ರಾಸ್ತ್ರ ಮೀಸಲು ಪಡೆ ಸೇರಿದಂತೆ ಹದಿನೈದು ಸಾವಿರ ಪೊಲೀಸರನ್ನು ಬೆಂಗಳೂರು ನಗರದಲ್ಲಿ ನೇಮಿಸಲಾಗಿದೆ. [ನೀರಿನ ಸಮಸ್ಯೆಗೆ 'ದಿವ್ಯ' ಉಪಾಯ ನೀಡಿದ ರಮ್ಯಾ]
Hate messages reg #CauveryIssue maybe liable for- 120B(conspiracy),153A(promoting enimity),153B &109 IPC for abetment of any resulting crime
— Abhishek Goyal (@goyal_abhei) September 15, 2016
ಸೆ.25ರ ವರೆಗೆ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಹೇರಲಾಗಿದೆ. ಮಂಡ್ಯದಲ್ಲಿ ಕಳೆದ 15 ದಿನಗಳಿಂದ ಜಿ ಮಾದೇಗೌಡ ನೇತೃತ್ವದ ಕಾವೇರಿ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸುತ್ತಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications