ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ನಲ್ಲಿ ಇಂದಿನಿಂದ ವಿಚಾರಣೆ
ನವದೆಹಲಿ, ಜನವರಿ 17: ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀ ಕೋರ್ಟಿನಲ್ಲಿ ಇಂದಿನಿಂದ(ಮಾ.17) ವಿಚಾರಣೆ ಆರಂಭವಾಗಲಿದೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದು, ಆಧಾರ್ ಮಾಹಿತಿ ಸೋರಿಕೆಯ ಕುರಿತು ವಿಚಾರಣೆ ನಡೆಸಲಿದೆ.
12 ಅಂಕಿಗಳ ಆಧಾರ್ ಸಂಖ್ಯೆಯನ್ನು ಬಹುಮುಖ್ಯ ದಾಖಲೆಗಳೊಂದಿಗೆ ಜೋಡಿಸುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುವ ಸಂಭವವಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದ್ದು, ಆಧಾರ್ ಕಡ್ಡಾಯ ಕ್ರಮವನ್ನು ಸುಪ್ರೀಂ ಕೋರ್ಟ್ ಸ್ವಾಗತಿಸಲಿದೆಯೇ, ಅಥವಾ ಸರ್ಕಾರಕ್ಕೆ ಛೀಮಾರಿ ಹಾಕಲಿದೆಯೇ ಎಂಬುದು ವಿಚಾರಣೆಯ ನಂತರ ತಿಳಿಯಲಿದೆ.

ಸುಪ್ರೀಂ ಕೋರ್ಟಿನಲ್ಲಿ ಆಧಾರ್ ಪ್ರಕರಣ ಇತ್ಯರ್ಥವಾಗಲಿ ಎಂಬ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಆಧಾರ್ ಕಡ್ಡಾಯ ಜೋಡಣೆಯ ನಿಯಮವನ್ನು ಡಿ.31 2017 ರಿಂದ ಮಾರ್ಚ್ 31, 2018 ಕ್ಕೆ ಮುಂದೂಡಿದ್ದನ್ನು ಸ್ಮರಿಸಬಹುದು.












Click it and Unblock the Notifications