ಬಿಹಾರದ ಜಾತಿಗಣತಿ ವರದಿ: ಸುಪ್ರೀಂ ಕೋರ್ಟ್‌ನಲ್ಲಿ ಅಕ್ಟೋಬರ್ 6 ರಂದು ವಿಚಾರಣೆ
ದೆಹಲಿ, ಅಕ್ಟೋಬರ್ 03: ಬಿಹಾರ ಸರ್ಕಾರವು ಜಾತಿ ಸಮೀಕ್ಷೆಯ ಡೇಟಾವನ್ನು ಪ್ರಕಟಿಸಿದ್ದು, ಹಲವು ವಿವಾದಗಳಿಗೆ ಕಾರಣವಾಗಿದೆ. ಇದು ಹಲವು ಕಳವಳ ಮತ್ತು ಕಾನೂನು ಸವಾಲುಗಳನ್ನು ಸೃಷ್ಟಿಸಿದೆ ಎಂದು ವಕೀಲರೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಬಿಹಾರದ ಜಾತಿ ಗಣತಿ ವಿಷಯವನ್ನು ಅಕ್ಟೋಬರ್ 6 ರಂದು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಹೇಳಿದೆ.
ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠದ ಮುಂದೆ ಮಂಡಿಸಲಾಗಿದೆ. ಬಿಹಾರ ಸರ್ಕಾರವು ಈಗಾಗಲೇ ಜಾತಿ ಸಮೀಕ್ಷೆಯ ಡೇಟಾವನ್ನು ಪ್ರಕಟಿಸಿದೆ ಎಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು, ವಿವಿಧ ವಲಯಗಳಿಂದ ಕಳವಳಗಳು ಮತ್ತು ಕಾನೂನು ಸವಾಲುಗಳನ್ನು ಪ್ರೇರೇಪಿಸಿದೆ ಎಂದಿದ್ದಾರೆ.

ಏಕ್ ಸೋಚ್ ಏಕ್ ಪ್ರಯಾಸ್ ಮತ್ತು ಯೂತ್ ಫಾರ್ ಈಕ್ವಾಲಿಟಿ ಸೇರಿ ಮುಂತಾದ ಸಂಘಟನೆಗಳು ಜಾತಿ ಆಧಾರಿತ ಸಮೀಕ್ಷೆಯ ಕಾನೂನು ಬದ್ಧತೆ ಮತ್ತು ರಾಜ್ಯಗಳ ಅಧಿಕಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. 1948 ರ ಜನಗಣತಿ ಕಾಯ್ದೆಯು ದೇಶದಲ್ಲಿ ಕೇಂದ್ರ ಸರ್ಕಾರವೇ ಜನಗಣತಿ ನಡೆಸಬೇಕು ಎಂಬ ವಿಶೇಷಾಧಿಕಾರ ನೀಡಿದೆ. ಹಾಗಿದ್ದಾಗ ರಾಜ್ಯ ಸರ್ಕಾರಗಳು ಜಾತಿಗಣತಿ ನಡೆಸುವ ಹಕ್ಕು ಹೊಂದಿವೆಯೇ ಎಂದು ಪ್ರಶ್ನಿಸಿ, ಕೇಂದ್ರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಮೂಲಕ ಕಾನೂನು ಹೋರಾಟಕ್ಕೆ ಪ್ರವೇಶಿಸಿದೆ.
ಸಾಂವಿಧಾನಿಕ ನಿಬಂಧನೆಗಳು ಮತ್ತು ಅನ್ವಯವಾಗುವ ಕಾನೂನುಗಳಿಗೆ ಅನುಗುಣವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು (ಎಸ್‌ಇಬಿಸಿಗಳು) ಮತ್ತು ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಮೇಲೆತ್ತಲು ಸರ್ಕಾರದ ಬದ್ಧ ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಮೊದಲು ಜಾತಿ ಆಧರಿತ ಸಮೀಕ್ಷೆ ನಡೆಸಲು ಬಿಹಾರ ಸರ್ಕಾರ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ್ದ ಕೋರ್ಟ್, ರಾಜ್ಯಗಳ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಗಳನ್ನು ವಜಾಗೊಳಿಸಿತ್ತು.

ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಾರಂಭಿಸಲು ಬಿಹಾರ ರಾಜ್ಯವು ಸಾಂವಿಧಾನಿಕ ಸಾಮರ್ಥ್ಯವನ್ನು ಹೊಂದಿಲ್ಲ ಮತ್ತು ಜನಗಣತಿ ನಡೆಸುವಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಧಿಕಾರವನ್ನು ಕಸಿದುಕೊಂಡಿದೆ ಎಂದು ಅರ್ಜಿದಾರರು ವಾದಿಸಿದ್ದರು. ಅಲ್ಲದೇ ಜೂನ್ 6, 2022 ರಂದು ಬಿಹಾರ ಸರ್ಕಾರದ ಅಧಿಸೂಚನೆ ಮತ್ತು ನಂತರದ ಮೇಲ್ವಿಚಾರಣೆಗಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇಮಕವು ರಾಜ್ಯ ಮತ್ತು ಒಕ್ಕೂಟದ ನಡುವಿನ ಅಧಿಕಾರ ಹಂಚಿಕೆ ಸೇರಿದಂತೆ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಶಾಸಕಾಂಗ ಸಾಮರ್ಥ್ಯವಿಲ್ಲದೆ ಮತ್ತು ದುರುದ್ದೇಶಪೂರಿತ ಉದ್ದೇಶಗಳಿಂದ ಕೂಡಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಭಾರತದಲ್ಲಿ ಜನಗಣತಿ ನಡೆಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಮಾತ್ರ ಹೊಂದಿದೆ ಎಂದು ಅರ್ಜಿದಾರರು ಒತ್ತಿ ಹೇಳಿದರು. ನಿತೀಶ್ ಕುಮಾರ್ ಆಡಳಿತದ ಆದೇಶದ ಜಾತಿ ಆಧಾರಿತ ಸಮೀಕ್ಷೆಯನ್ನು ವಿರೋಧಿಸಿ ಪಾಟ್ನಾ ಹೈಕೋರ್ಟ್ ಈ ಹಿಂದೆ ಇದೇ ರೀತಿಯ ಅರ್ಜಿಗಳನ್ನು ವಜಾಗೊಳಿಸಿತ್ತು.
ಸಮೀಕ್ಷೆಯು ಬಿಹಾರದ 38 ಜಿಲ್ಲೆಗಳಲ್ಲಿ ಅಂದಾಜು 12.70 ಕೋಟಿ ಜನಸಂಖ್ಯೆಯನ್ನು ಒಳಗೊಂಡಿರುವ ಎಲ್ಲಾ ಜಾತಿಗಳು, ಉಪ-ಜಾತಿಗಳು ಮತ್ತು ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳ ಜನರಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.












Click it and Unblock the Notifications