ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕ್ತಾ ಕಪೂರ್ 'XXX' ವೆಬ್ ಸೀರೀಸ್: ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

|
Google Oneindia Kannada News

ನವದೆಹಲಿ, ಅ. 14: ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಮಾಪಕಿ ಏಕ್ತಾ ಕಪೂರ್ ಅವರ ವೆಬ್ ಸೀರೀಸ್ 'XXX' ನಲ್ಲಿ ಆಕ್ಷೇಪಾರ್ಹ ವಿಷಯ ಕುರಿತು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಏಕ್ತಾ ಕಪೂರ್ ಅವರು ಈ ದೇಶದ ಯುವ ಪೀಳಿಗೆಯ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದೆ.

ಆಕೆಯ ಒಟಿಟಿ ಪ್ಲಾಟ್‌ಫಾರ್ಮ್ ಆಲ್ಟ್ ಬಾಲಾಜಿಯಲ್ಲಿ ಪ್ರಸಾರವಾದ ವೆಬ್ ಸರಣಿಯಲ್ಲಿ ಸೈನಿಕರನ್ನು ಅವಮಾನಿಸಿದ ಮತ್ತು ಅವರ ಕುಟುಂಬದವರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಹೊರಡಿಸಲಾದ ಬಂಧನ ವಾರಂಟ್‌ಗಳನ್ನು ಪ್ರಶ್ನಿಸಿ ಏಕ್ತಾ ಕಪೂರ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ಜೊತೆಗೆ ಇನ್ನು ಮುಂದೆ ಯಾವುದೇ ಮನವಿಗಳೊಂದಿಗೆ ತಮ್ಮ ಬಳಿಗೆ ಬರದಂತೆ ನಿರ್ಮಾಪಕಿ ಏಕ್ತಾ ಕಪೂರ್‌ಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್, ಇಂತಹ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಿದರೆ ವೆಚ್ಚವನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಕಿರುತೆರೆಯ ಜನಪ್ರಿಯ ನಿರ್ಮಾಪಕಿ ವಿರುದ್ಧ ಬಂಧನ ವಾರೆಂಟ್ಕಿರುತೆರೆಯ ಜನಪ್ರಿಯ ನಿರ್ಮಾಪಕಿ ವಿರುದ್ಧ ಬಂಧನ ವಾರೆಂಟ್

ವೆಬ್ ಸೀರೀಸ್ 'XXX' ಎರಡನೇ ಸೀಸನ್‌ನಲ್ಲಿ ಯೋಧನ ಪತ್ನಿಗೆ ಸಂಬಂಧಿಸಿದ ಹಲವು ಆಕ್ಷೇಪಾರ್ಹ ದೃಶ್ಯಗಳನ್ನು ಒಳಗೊಂಡಿತ್ತು ಎಂದು ಮಾಜಿ ಸೈನಿಕ ಶಂಭು ಕುಮಾರ್‌ ಸಲ್ಲಿಸಿದ್ದ ದೂರಿನ ಮೇರೆಗೆ ಬಿಹಾರದ ಬೇಗುಸರಾಯ್‌ನ ವಿಚಾರಣಾ ನ್ಯಾಯಾಲಯ ಏಕ್ತಾ ಕಪೂರ್ ವಿರುದ್ಧ ವಾರಂಟ್‌ ಹೊರಡಿಸಿತ್ತು.

ಜನರಿಗೆ ಯಾವ ರೀತಿಯ ಆಯ್ಕೆ ನೀಡುತ್ತಿದ್ದೀರಿ?

ಜನರಿಗೆ ಯಾವ ರೀತಿಯ ಆಯ್ಕೆ ನೀಡುತ್ತಿದ್ದೀರಿ?

"ಇಂಥ ವಿಷಯಗಳಲ್ಲಿ ಏನಾದರೂ ಮಾಡಬೇಕು. ನೀವು ಈ ದೇಶದ ಯುವ ಪೀಳಿಗೆಯ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದೀರಿ. ಓಟಿಟಿ ವಿಷಯಗಳು ಎಲ್ಲರಿಗೂ ಲಭ್ಯವಿದೆ. ನೀವು ಜನರಿಗೆ ಯಾವ ರೀತಿಯ ಆಯ್ಕೆಯನ್ನು ಒದಗಿಸುತ್ತಿದ್ದೀರಿ?. ಇದಕ್ಕೆ ವಿರುದ್ಧವಾಗಿ ನೀವು ಯುವಕರ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದೀರಿ" ಎಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿಟಿ ರವಿಕುಮಾರ್ ಅವರ ಪೀಠ ಹೇಳಿದೆ.

ಏಕ್ತಾ ಕಪೂರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಪಾಟ್ನಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಶೀಘ್ರದಲ್ಲೇ ವಿಚಾರಣೆಗೆ ಪಟ್ಟಿ ಮಾಡುವ ಭರವಸೆ ಇಲ್ಲ ಎಂದು ಹೇಳಿದ್ದಾರೆ.

ಇದೇ ಪ್ರಕರಣದಲ್ಲಿ ಈ ಹಿಂದೆ ರಕ್ಷಣೆ ನೀಡಿದ್ದ ನ್ಯಾಯಾಲಯ

ಇದೇ ಪ್ರಕರಣದಲ್ಲಿ ಈ ಹಿಂದೆ ರಕ್ಷಣೆ ನೀಡಿದ್ದ ನ್ಯಾಯಾಲಯ

ಏಕ್ತಾ ಕಪೂರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ಈ ಹಿಂದೆಯೂ ಇದೇ ವಿಷಯದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ರಕ್ಷಣೆ ನೀಡಿದ್ದನ್ನು ಉಲ್ಲೇಖಿಸಿ ಮತ್ತೆ ಬಂಧನದ ವಿರುದ್ಧ ರಕ್ಷಣೆ ನೀಡುವಂತೆ ನ್ಯಾಯಾಲಯವನ್ನು ಕೋರಿದರು.

ಜೊತೆಗೆ ವಕೀಲರು ಏಕ್ತಾ ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಸಮರ್ಥಿಸಿದ್ದಾರೆ. ಪ್ರಶ್ನೆಯಲ್ಲಿರುವ ವಿಷಯವು ಚಂದಾದಾರಿಕೆ ಆಧಾರಿತವಾಗಿದೆ ಎಂದು ವಾದಿಸಿದ್ದಾರೆ.

'ಈ ನ್ಯಾಯಾಲಯವು ಧ್ವನಿ ಇಲ್ಲದವರಿಗಾಗಿ ಕೆಲಸ ಮಾಡುತ್ತದೆ'

'ಈ ನ್ಯಾಯಾಲಯವು ಧ್ವನಿ ಇಲ್ಲದವರಿಗಾಗಿ ಕೆಲಸ ಮಾಡುತ್ತದೆ'

ಏಕ್ತಾ ಕಪೂರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು, ಏಕ್ತಾ ಕಪೂರ್ ಪರ ವಾದ ಮಂಡಿಸಿದ ಮುಕುಲ್ ರೋಹಟಗಿ ವಿರುದ್ಧ ಬೇಸರ ವ್ಯಕ್ತಪಡಿಸಿದೆ. ಈ ವಿಧಾನ ಸರಿಯಲ್ಲ. ಇಂತಹ ಅರ್ಜಿಯನ್ನು ಸಲ್ಲಿಸುವುದಕ್ಕಾಗಿ ನಾವು ನಿಮ್ಮ ಮೇಲೆ ವೆಚ್ಚವನ್ನು ವಿಧಿಸುತ್ತೇವೆ. ನಿಮ್ಮ ಕಕ್ಷಿದಾರರು ಬಳಿ ಹಣವಿರಬಹುದು. ಆಕೆ ಸಮರ್ಥ ವಕೀಲರನ್ನು ನೇಮಿಸಿಕೊಳ್ಳಬಹುದು. ಆದರೆ, ಈ ನ್ಯಾಯಾಲಯವು ಧ್ವನಿ ಇರುವವರಿಗೆ ಅಲ್ಲ. ಈ ನ್ಯಾಯಾಲಯವು ಧ್ವನಿ ಇಲ್ಲದವರಿಗಾಗಿ ಕೆಲಸ ಮಾಡುತ್ತದೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಈ ಜನರಿಗೆ ನ್ಯಾಯ ಸಿಗದಿದ್ದರೆ ಈ ಶ್ರೀಸಾಮಾನ್ಯನ ಪರಿಸ್ಥಿತಿಯನ್ನು ಯೋಚಿಸಿ ಎಂದು ತಿಳಿಸಿದೆ.

ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಬಿಹಾರದ ಮಾಜಿ ಯೋಧನ ದೂರು

ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಬಿಹಾರದ ಮಾಜಿ ಯೋಧನ ದೂರು

ಸುಪ್ರೀಂ ಕೋರ್ಟ್ ಅರ್ಜಿಯನ್ನು ಬಾಕಿ ಉಳಿಸಿಕೊಂಡಿದೆ ಮತ್ತು ಪಾಟ್ನಾ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆಯ ಸ್ಥಿತಿಯನ್ನು ಪರಿಶೀಲಿಸಲು ಸ್ಥಳೀಯ ವಕೀಲರನ್ನು ನಿಯೋಜಿಸಬಹುದು ಎಂದು ಸೂಚಿಸಿದೆ.


ಬಿಹಾರದ ಬೇಗುಸರಾಯ್‌ನ ವಿಚಾರಣಾ ನ್ಯಾಯಾಲಯವು ಮಾಜಿ ಸೈನಿಕ ಶಂಭು ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಏಕ್ತಾ ಕಪೂರ್ ವಿರುದ್ಧ ವಾರಂಟ್ ಹೊರಡಿಸಿತ್ತು.


ಮಾಜಿ ಯೋಧ ಶಂಭುಕುಮಾರ್ ಅವರು 2020 ರ ದೂರಿನಲ್ಲಿ, ಆಪಾದಿತ ಸರಣಿ 'XXX' (ಸೀಸನ್-2) ನಲ್ಲಿ ಸೈನಿಕನ ಹೆಂಡತಿಗೆ ಸಂಬಂಧಿಸಿದ ಹಲವಾರು ಆಕ್ಷೇಪಾರ್ಹ ದೃಶ್ಯಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

English summary
Supreme Court friday warned the filmmaker Ekta Kapoor for polluting minds of the young generation and told to not come to them with any more pleas. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X