ಕರ್ನಾಟಕ ಕಬ್ಬಿಣ ಅದಿರು ಇ- ಹರಾಜು ರದ್ದು ಸಾಧ್ಯವಿಲ್ಲ: ಸುಪ್ರೀಂ
ಕಬ್ಬಿಣ ಅದಿರು ಇ-ಹರಾಜು ಪ್ರಕ್ರಿಯೆ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಕಾರ. ಎಫ್ಐಎಂಐ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸರ್ವೋಚ್ಛ ನ್ಯಾಯಾಲಯ.
ಬೆಂಗಳೂರು, ಆಗಸ್ಟ್ 29: ಸದ್ಯಕ್ಕೆ ಚಾಲ್ತಿಯಲ್ಲಿರುವ ಕಬ್ಬಿಣದ ಅದಿರಿನ ಇ-ಹರಾಜು ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಭಾರತೀಯ ಖನಿಜ ಕೈಗಾರಿಕೆಗಳ ಒಕ್ಕೂಟ (ಎಫ್ಐಎಂಐ) ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Recommended Video

ಕಬ್ಬಿಣ ಅದಿರಿನ ಇ-ಹರಾಜು ಬದಲಿಗೆ ಬೇರೊಂದು ವ್ಯವಸ್ಥೆ ಅಥವಾ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಅನುಮತಿ ನೀಡಬೇಕೆಂದು ಕೋರಿ ನ್ಯಾಯಾಲಯಕ್ಕೆ ವೇದಾಂತ ಹಾಗೂ ಎಫ್ಐಎಂಐ ಮನವಿ ಸಲ್ಲಿಸಿದ್ದವು.

ಸೋಮವಾರ (ಆಗಸ್ಟ್ 28) ಅರ್ಜಿಯ ಬಗ್ಗೆ ತನ್ನ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ಸದ್ಯಕ್ಕೆ ಚಾಲ್ತಿಯಲ್ಲಿರುವ ಇ-ಟೆಂಡರ್ ವ್ಯವಸ್ಥೆಯು ಪಾರದರ್ಶಕವಾಗಿದ್ದು, ಪರಿಣಾಮಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ಇ-ಹರಾಜು ಪದ್ಧತಿಯನ್ನು ಕೈಬಿಟ್ಟು ಬದಲಿ ಮಾರ್ಗಗಳನ್ನು ಕಂಡುಕೊಳ್ಳುವ ಅವಶ್ಯಕತೆ ಕಂಡುಬರುತ್ತಿಲ್ಲ. ಹಾಗಾಗಿ, ವೇದಾಂತ ಹಾಗೂ ಎಫ್ಐಎಂಐ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ ಎಂದು ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ರಂಜನ್ ಗೊಗೈ ಮತ್ತು ನವೀನ್ ಸಿಂಗ್ ಅವರು ತಿಳಿಸಿದರು.
ಕರ್ನಾಟಕದ ಗಣಿಗಾರಿಕೆ ಕ್ಷೇತ್ರದಲ್ಲಿ ವ್ಯಾಪಕ ಅಕ್ರಮಗಳು ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೆಲ ವರ್ಷಗಳ ಹಿಂದೆ ಗಣಿಗಾರಿಕೆಗೆ ಪೂರ್ತಿ ವಿರಾಮ ಹಾಡಿತ್ತು. ಆದರೆ, 2013ರಲ್ಲಿ ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಪ್ರಾಂತ್ಯಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟಿತ್ತಾದರೂ ವರ್ಷಕ್ಕೆ 30 ದಶಲಕ್ಷ ಟನ್ ಗಳನ್ನು ಮೀರಬಾರದೆಂದು ಆದೇಶಿಸಿತ್ತು.












Click it and Unblock the Notifications