ಇಂಟರ್‌ನೆಟ್ ವಿಷಯದಲ್ಲಿ ಮಣಿಪುರ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್
ಇಂಫಾಲ, ಜುಲೈ. 17: ಜನಾಂಗೀಯ ಸಂಘರ್ಷಗಳಿಂದ ಪೀಡಿತವಾಗಿರುವ ರಾಜ್ಯದಲ್ಲಿ ಸೀಮಿತವಾಗಿ ಇಂಟರ್ನೆಟ್ ಅನ್ನು ಮರುಸ್ಥಾಪಿಸುವಂತೆ ಮಣಿಪುರ ಸರ್ಕಾರಕ್ಕೆ ನಿರ್ದೇಶಿಸಿದ ಮಣಿಪುರ ಹೈಕೋರ್ಟ್‌ನ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಹೈಕೋರ್ಟ್‌ನ ಆದೇಶದ ಅನುಷ್ಠಾನದಲ್ಲಿ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ತಿಳಿಸಲು ಮಣಿಪುರ ರಾಜ್ಯಕ್ಕೆ ಮತ್ತೆ ಹೈಕೋರ್ಟ್ ಅನ್ನು ಸಂಪರ್ಕಿಸಲು ನ್ಯಾಯಾಲಯವು ಸ್ವಾತಂತ್ರ್ಯವನ್ನು ನೀಡಿದೆ. ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಸೀಮಿತ ರೀತಿಯಲ್ಲಿ ರಾಜ್ಯದಲ್ಲಿ ಇಂಟರ್ನೆಟ್ ಮರುಸ್ಥಾಪನೆಗೆ ಅನುಮತಿ ನೀಡಿದ ಮಣಿಪುರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.

ಜುಲೈ 7 ರಂದು, ಮಣಿಪುರ ಹೈಕೋರ್ಟ್ ರಾಜ್ಯದಲ್ಲಿನ ಇಂಟರ್ನೆಟ್ ಲೀಸ್ ಲೈನ್ (ILL) ಮತ್ತು ಫೈಬರ್ ಟು ದಿ ಹೋಮ್ (FTTH) ಸಂಪರ್ಕಗಳ ಮೇಲಿನ ಇಂಟರ್ನೆಟ್ ನಿಷೇಧವನ್ನು ತೆಗೆದುಹಾಕಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಎಲ್ಲಾ ಮಧ್ಯಸ್ಥಗಾರರು ಸೂಚಿಸಿದ ಸುರಕ್ಷತೆಗಳನ್ನು ಅನುಸರಿಸಿದ್ದಾರೆ ಎಂದು ಒಂದು ತಜ್ಞರ ಸಮಿತಿ ಖಚಿತಪಡಿಸಿಕೊಂಡಿದೆ.
ಮಣಿಪುರ ರಾಜ್ಯದ ಸುಪ್ರೀಂ ಕೋರ್ಟ್‌ಗೆ ಹಾಜರಾದ ಎಸ್‌ಜಿ ತುಷಾರ್ ಮೆಹ್ತಾ, "ಯಾವುದೇ ಒಂದು ವದಂತಿಯು ಗಲಭೆಗಳನ್ನು ಹುಟ್ಟುಹಾಕುವ ಸಾಧ್ಯತೆಯಿದೆ. ಇಂಟರ್ನೆಟ್‌ಗೆ ಒಪ್ಪಿಗೆ ನೀಡುವ ಪ್ರಶ್ನೆ ಕೆಲವೊಮ್ಮೆ ತೆರೆದಿರುತ್ತದೆ ಮತ್ತು ಕೆಲವೊಮ್ಮೆ ಇಲ್ಲ. ನನ್ನ ಪ್ರಾರ್ಥನೆಯೆಂದರೇ, ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಇಂಟರ್ನೆಟ್ ಸಮಸ್ಯೆಯನ್ನು ಬಿಡಬಹುದು" ಎಂದಿದ್ದಾರೆ.
ಇದಕ್ಕೆ ಸಿಜೆಐ ಡಿವೈ ಚಂದ್ರಚೂಡ್, ರಾಜ್ಯವು ಮಣಿಪುರದ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ರಾಜ್ಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಬಹುದು ಎಂದು ಹೇಳಿದ್ದಾರೆ. "ಅಂತರ್ಜಾಲಕ್ಕೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಣಿಪುರ ರಾಜ್ಯವು ಮಣಿಪುರದ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುತ್ತದೆ ಎಂದು ಸಾಲಿಸಿಟರ್ ಜನರಲ್ ಸಲ್ಲಿಸಿದ್ದಾರೆ. ಅದಕ್ಕೆ ಸ್ವಾತಂತ್ರ್ಯ ನೀಡಲಾಗಿದೆ" ಎಂದು ಹೇಳಿದ್ದಾರೆ.

ಹೈಕೋರ್ಟ್ ಈ ವಿಷಯವನ್ನು ತೆಗೆದುಕೊಂಡಿರುವುದರಿಂದ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಪ್ರವೇಶಿಸುವುದಿಲ್ಲ ಎಂದು ಸಿಜೆಐ ಹೇಳಿದರು. ಆದರೂ, ಸಾಲಿಸಿಟರ್ ಜನರಲ್ ಅವರು ಹೈಕೋರ್ಟ್‌ನ ಆದೇಶ ಅನುಸರಣೆಗೆ ರಾಜ್ಯದ ವಿರುದ್ಧ ಬಲವಂತದ ಕ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆ ರೀತಿಯ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ ಸಿಐಜೆ, "ಏನಾದರೂ ಸಂಭವಿಸಿದರೆ, ನಾವು ಯಾವಾಗಲೂ ಇಲ್ಲಿದ್ದೇವೆ" ಎಂದು ಹೇಳಿದ್ದಾರೆ.












Click it and Unblock the Notifications