Delhi Air: ಎಎಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ, GRAP-IV ಮುಂದುವರಿಸಲು ನಿರ್ದೇಶನ
ನವದೆಹಲಿ, ನವೆಂಬರ್ 18: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹವಾಮಾನ ಭಾರೀ ಪ್ರಮಾಣದಲ್ಲಿ ಹದಗೆಟ್ಟಿದೆ. ಗಾಳಿಯ ಗುಣಮಟ್ಟ ಕಳಪೆ ಮಟ್ಟ ದಾಟಿದೆ. ಈ ಕುರಿತ ಪ್ರಕರಣವನ್ನು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಲ್ಲಿನ ನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತು. ರಾಜ್ಯ ಎಎಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ದೆಹಲಿ ಗುಣಮಟ್ಟ ಸುಧಾರಣೆಗೆ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಸ್ಟೇಜ್ IV (GRAP-IV) ಅನುಷ್ಠಾನವನ್ನು ಮುಂದುವರಿಸಬೇಕು ಎಂದು ನಿರ್ದೇಶಿಸಿತು.
ದೆಹಲಿಯಲ್ಲಿ ವಾಯು ಮಾಲಿನ್ಯವಾಗದಂತೆ ತಡೆಯಬೇಕಾದ ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ (CAQM) ಆಯೋಗವು ಪ್ರೊಟೋಕಾಲ್‌ನಂತೆ ಕ್ರಮ ಜಾರಿಗೊಳಿಸದೇ ಗಾಳಿಯ ಗುಣಮಟ್ಟ ಸೂಚ್ಯಂಕ ಮಿತಿ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ದೆಹಲಿಯಲ್ಲಿ ನವೆಂಬರ್ 12ರಂದು AQI 400 ದಾಟಿತ್ತು. ಗುಣಮಟ್ಟ ನಿಯಂತ್ರಿಸುವ GRAP-3 ಅನ್ನು ನವೆಂಬರ್ 14 ರಿಂದ ಅನುಷ್ಠಾನಗೊಳಿಸಲಾಯಿತು. AQI ನವೆಂಬರ್ 17ರಂದು 450 ದಾಟಿದ್ದು, ಕಳಪೆ ಆಗಿದೆ. ಇಂದು ಸೋಮವಾರದಿಂದ (ನವೆಂಬರ್ 18) GRAP-4 ಜಾರಿಗೆ ತರಲಾಗಿದೆ.
ನಿಯಮಗಳ ಪ್ರಕಾರ ಆಯೋಗವು (CAQM) ವಾಯು ಮಾಲಿನ್ಯಗೊಳ್ಳುವವರೆಗೆ ಕಾಯುವ ಬದಲು ಗಾಳಿ ಗುಣಮಟ್ಟ ಹಾಳಾಗದಂತೆ ತಡೆಗಟ್ಟುವ ಕ್ರಮ ಕೈಗೊಳ್ಳಬೇಕಿತ್ತು ಎಂದು ನ್ಯಾಯಾಲಯ ತಿಳಿಸಿದೆ. ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದೆ.
ಇದೆಲ್ಲ ನೋಡಿದರೆ ಆಯೋಗವು ನಗರದ ಗಾಳಿ ಗುಣಮಟ್ಟ (AQI) ಹಾಳಾಗುವವರೆಗೆ ಕಾದು ಸುಧಾರಣೆಗೆ ಮುಂದಾಗಲು ನಿರ್ಧರಿಸಿದಂತಿದೆ. ಇದರಿಂದಲೇ ಗುಣಮಟ್ಟ ನಿಯಂತ್ರಣ ಹಂತ 3 ಮತ್ತು ಹಂತ 4 ರ ಅನುಷ್ಠಾನವು ತಡವಾಗಿದೆ. ಆಯೋಗದ ವಿಳಂಬ ನೀತಿ ತಪ್ಪು ಎಂದು ಕೋಟಿ ತಿಳಿಸಿತು.
ನವದೆಹಲಿಯ AQI ಮಿತಿ ಹೆಚ್ಚಾಗದಂತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ GRAP III ಅಥವಾ GRAP IV ಅನುಷ್ಠಾನಕ್ಕೆ ತರಬೇಕಿತ್ತು. ಆಯೋಗದ, ಸರ್ಕಾರ ವಿಳಂಬ ನೀತಿ ಕಾರ್ಯವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ನ್ಯಾಯಪೀಠ ಗಮನಿಸಿತು.
ದೆಹಲಿ ಗಾಳಿಯ ಗುಣಮಟ್ಟವು 450 ಕ್ಕಿಂತ ಕಡಿಮೆ ಆದರೂ ಕೋರ್ಟ್ ಮುಂದಿನ ಆದೇಶಗಳನ್ನು ಜಾರಿಗೊಳಿಸುವವರಿಗೆ ನ್ಯಾಯಾಲಯವು ಗಮನಿಸುತ್ತದೆ ಎಂದಿದೆ.
ಆಯೋಗವು ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಚಟುವಟಿಕೆಗಳನ್ನು, ವಾಹನ ಬಳಕೆಗಳ ಮೇಲೆ ಹಲವು ನಿರ್ಬಂಧ ವಿಧಿಸುವ ಕೆಲಸ ಮಾಡುತ್ತದೆ. ನಗರದ ಗಾಳಿ ಹದಗೆಡುತ್ತಿರುವ ಹಂತ ಒಂದು ಹಾಗೂ ಎರಡು ಅಡಿಯಲ್ಲಿ ಈ ನಿರ್ಬಂಧ ವಿಧಿಸುತ್ತದೆ. ಗಾಳಿ ಮಾಲಿನ್ಯ ಕಡಿಮೆಆಗದೇ ಕಳಪೆ ಮಟ್ಟ ಹೆಚ್ಚಾದಾಗ ಆಯೋಗವು ಹಂತ ಮೂರು ಮತ್ತು ಹಂತ ನಾಲ್ಕರ ನಿಯಂದಂತೆ ನಿರ್ಬಂಧ ನೀಡುತ್ತದೆ.
ಸದ್ಯ ಸುಪ್ರಿಂ ಕೋರ್ಟ್ ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಹಂತ ನಾಲ್ಕನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚನೆ ನೀಡಿ ಆದೇಶಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಮೇಲ್ವಿಚಾರಣೆ ಮಾಡಲು ತಕ್ಷಣವೇ ತಂಡಗಳನ್ನು ರಚಿಸಬೇಕೆಂದು ಹೇಳಿದೆ.












Click it and Unblock the Notifications