ನ್ಯಾಯಾಂಗ ನಿಂದನೆ; ಯತಿ ನರಸಿಂಘಾನಂದಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ, ಜುಲೈ 08: ಸಂವಿಧಾನ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದ ನಿಂದನೆ ಅರ್ಜಿಯನ್ನು 'ಧರಮ್ ಸಂಸದ್' ನಾಯಕ ಯತಿ ನರಸಿಂಹಾನಂದ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾದ ಬಳಿಕ ಸ್ವಾಮೀಜಿ ಆಕ್ಷೇಪಾರ್ಹವಾದ ಹೇಳಿಕೆಯನ್ನು ನೀಡಿದ್ದರು. ನರಸಿಂಹಾನಂದ್ ವಿರುದ್ಧ ಕ್ರಿಮಿನಲ್ ನಿಂದನೆ ಮೊಕದ್ದಮೆ ಹೂಡುವಂತೆ ಕೋರಿ ಕಾರ್ಯಕರ್ತ ಶಚಿ ನೆಲ್ಲಿ ಸಲ್ಲಿಸಿದ ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಎಂಎಂ ಸುಂದ್ರೇಶ್ ಅವರ ಪೀಠವು ಅವರಿಗೆ ನೋಟಿಸ್ ಜಾರಿ ಮಾಡಿದೆ.

Supreme Court Notice To Dharam Sansad Leader Over Remarks On Constitution

ಸ್ವಾಮೀಜಿ ಯತಿ ನರಸಿಂಹಾನಂದ್ ಅವರ ಹೇಳಿಕೆಯು ಸುಪ್ರೀಂ ಕೋರ್ಟ್‌ನ ಘನತೆಗೆ ಧಕ್ಕೆ ತರುವಂತಹದ್ದಾಗಿದೆ' ಎಂದು ವಾದಿಸಿದ್ದರು. ಸುಪ್ರೀಂ ಕೋರ್ಟ್‌ನ ಘನತೆಗೆ ಧಕ್ಕೆ ತರುವ ಯಾವುದೇ ಯತ್ನ. ಜನತೆ ಇಂತಹ ಸಂಸ್ಥೆಗಳ ಮೇಲೆ ಇಟ್ಟಿರುವ ನಂಬಿಕೆಗೆ ಪೆಟ್ಟುನೀಡಲಿದೆ. ಸ್ವಾಮೀಜಿ ಅವರ ಹೇಳಿಕೆಯು ಇತಿಹಾಸದಲ್ಲಿಯೇ ಅತಿ ನಿಂದನಾತ್ಮಕವಾದುದಾಗಿದೆ' ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ನರಸಿಂಘಾನಂದ ಅವರು ಗಾಜಿಯಾಬಾದ್‌ನ ಡಸ್ನಾ ದೇಗುಲದ ಮುಖ್ಯ ಅರ್ಚಕರಾಗಿದ್ದಾರೆ. ಹರಿದ್ವಾರ ಧರ್ಮ ಸಂಸತ್‌ನಲ್ಲಿ ಮಾಡಿದ್ದ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದರು.

ಯತಿ ನರಸಿಂಗಾನಂದರ ಹೇಳಿಕೆಯು ಸಾಮಾನ್ಯ ಜನರ ಮನಸ್ಸಿನಲ್ಲಿ ಸುಪ್ರೀಂ ಕೋರ್ಟ್‌ನ ಅಧಿಕಾರವನ್ನು ಕಡಿಮೆ ಮಾಡುವ ನೇರ ಪ್ರಯತ್ನವಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ. ಇದು ಖಂಡಿತವಾಗಿಯೂ ಭಾರತದ ಸುಪ್ರೀಂ ಕೋರ್ಟ್‌ನ ತಿರಸ್ಕಾರಕ್ಕೆ ಕಾರಣವಾಗುತ್ತದೆ ಎಂದು ಎಜಿ ಹೇಳಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಜನವರಿ 14 ರಂದು ಟ್ವಿಟರ್‌ನಲ್ಲಿ ವೈರಲ್ ಆಗಿದ್ದ ಸಂದರ್ಶನವೊಂದರಲ್ಲಿ ನರಸಿಂಹಾನಂದ ಅವರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನೆಲ್ಲಿ ಎಜಿಗೆ ಪತ್ರ ಬರೆದಿದ್ದಾರೆ. ನರಸಿಂಹಾನಂದರು ಮಾಡಿರುವ ಹೇಳಿಕೆಗಳು ಸಂಸ್ಥೆಯ ಘನತೆ ಮತ್ತು ಭಾರತದ ಸುಪ್ರೀಂ ಕೋರ್ಟ್‌ನಲ್ಲಿರುವ ಅಧಿಕಾರವನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ ಮತ್ತು ನಿಂದನೀಯ ವಾಕ್ಚಾತುರ್ಯದ ಮೂಲಕ ನ್ಯಾಯದ ಹಾದಿಯಲ್ಲಿ ಹಸ್ತಕ್ಷೇಪ ಮಾಡುವ ನೀಚ ಮತ್ತು ಸ್ಪಷ್ಟ ಪ್ರಯತ್ನವಾಗಿದೆ ಎಂದು ನೆಲ್ಲಿಯವರು ಪತ್ರದಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+