ವರದಕ್ಷಿಣೆ ಕೇಸ್: ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪು

Recommended Video

      ವರದಕ್ಷಿಣೆ ಕೇಸ್ ಬಗ್ಗೆ ಸುಪ್ರೀಕೋರ್ಟ್ ನಿಂದ ಮಹತ್ವದ ತೀರ್ಮಾನ | Oneindia Kannada

      ನವದೆಹಲಿ, ಸೆ 15: ವಧು ಸಿಗೋದೇ ಕಷ್ಟ, ಇನ್ನೆಲ್ಲಿಯ ವರದಕ್ಷಿಣೆ ವಿಚಾರ ಎನ್ನುವ ಕಾಲವಿದು. ಆದರೂ, ಡೌರಿ ಕೇಸ್ ವಿಚಾರದಲ್ಲಿ ಈ ಹಿಂದೆ ತಾನು ನೀಡಿದ್ದ ತೀರ್ಪನ್ನು ಪರಿಷ್ಕರಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

      ವರದಕ್ಷಿಣೆ, ವರದಕ್ಷಿಣೆ ಕಿರುಕುಳ ಸಂಬಂಧ, ಆರೋಪಿ ಮತ್ತು ಆತನ ಕುಟುಂಬದ ಸದಸ್ಯರನ್ನು ಬಂಧಿಸಬೇಕೇ ಅಥವಾ ಬೇಡವೇ ಎನ್ನುವ ವಿಚಾರವನ್ನು, ಪ್ರಕರಣ ದಾಖಲಾಗುವ ಪೊಲೀಸ್ ಸ್ಟೇಷನ್ ನಲ್ಲೇ ನಿರ್ಧಾರವಾಗಲಿ ಎನ್ನುವ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ.

      ಈ ಹಿಂದೆ, ಇಂತಹ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ಇರುವವರನ್ನು ತಕ್ಷಣ ಬಂಧಿಸದೇ, ಕೂಲಂಕುಷ ತನಿಖೆಯ ನಂತರವಷ್ಟೇ ಬಂಧಿಸಬೇಕು ಎನ್ನುವ ಆದೇಶವನ್ನು ಸುಪ್ರೀಂಕೋರ್ಟ್ ನೀಡಿತ್ತು. ಈಗ, ತನ್ನ ಹಳೆಯ ತೀರ್ಪನ್ನು ಪರಿಷ್ಕರಿಸಿ, ಸರ್ವೋಚ್ಚ ನ್ಯಾಯಾಲಯ ಶುಕ್ರವಾರ (ಸೆ 14) ಈ ತೀರ್ಪನ್ನು ನೀಡಿದೆ.

      Supreme Court on Friday (Sep 14) modifies its order on dowry harassment case

      ಐಪಿಸಿ ಸೆಕ್ಷನ್ 498A ಪ್ರಕಾರ ನಾನ್ ಬೇಲೇಬಲ್ ಕೇಸ್ ಇದಾಗಿದ್ದು, ಸ್ಥಳೀಯ ಮ್ಯಾಜಿಸ್ಟ್ರೇಟರ್ ಬೇಲ್ ನೀಡಬೇಕೇ ಅಥವಾ ಬೇಡವೇ ಎನ್ನುವುದನ್ನು ನಿರ್ಧರಿಸಲಿದ್ದಾರೆ ಎಂದು ನ್ಯಾ. ದೀಪಕ್ ಮಿಶ್ರಾ ಅವರ ನ್ಯಾಯಪೀಠ ಈ ಆದೇಶವನ್ನು ನೀಡಿದೆ.

      ಈ ಹಿಂದೆ, ಸೇವೆಯಿಂದ ನಿವೃತ್ತಿಯಾಗಿರುವ ಆದರ್ಶ್ ಕುಮಾರ್ ಗೋಯಲ್ ಅವರಿದ್ದ ನ್ಯಾಯಪೀಠ, ವರದಕ್ಷಿಣೆ ವಿಚಾರದಲ್ಲಿ ತನಿಖೆ ನಡೆಸದೇ ಬಂಧಿಸಬಾರದು ಎನ್ನುವ ಆದೇಶವನ್ನು ನೀಡಿತ್ತು. ವರದಕ್ಷಿಣೆ ನಿಯಂತ್ರಣ ಕಾನೂನು ದುರ್ಬಲವಾಗಿದೆ ಎನ್ನುವ ಕೂಗು ಕೇಳಿಬರುತ್ತಿರುವ ಈ ಹೊತ್ತಿನಲ್ಲಿ, ಸುಪ್ರೀಂಕೋರ್ಟಿನ ಈ ತೀರ್ಪು ಮಹತ್ವ ಪಡೆದುಕೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+