ನೀಟ್ ಸುಗ್ರೀವಾಜ್ಞೆಗೆ ತಡೆ ಇಲ್ಲ, ಜುಲೈ 24ಕ್ಕೆ ಪರೀಕ್ಷೆ

Subscribe to Oneindia Kannada

ನವದೆಹಲಿ, ಜುಲೈ, 15: ವೈದ್ಯಕೀಯ ಹಾಗೂ ದಂತವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಏಕರೀತಿಯ ಪ್ರವೇಶ ಪರೀಕ್ಷೆ (ನೀಟ್)ಯನ್ನು ವರ್ಷದ ಮುಂದಕ್ಕೆ ಹಾಕಿ ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅರ್ಧಕ್ಕಿಂತ ಹೆಚ್ಚಿನ ರಾಜ್ಯಗಳು ಪರೀಕ್ಷೆ ನಡೆಸಿದ್ದು ಈಗ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದಿ ನ್ಯಾಯಾಲಯ ಹೇಳಿದೆ.

ಇದರಿಂದಾಗಿ ಜುಲೈ 24ರಂದು ನಿಗದಿಯಾಗಿರುವ ನೀಟ್-2 ಪರೀಕ್ಷೆಗೆ ಎದುರಾಗಿದ್ದ ಆತಂಕ ದೂರಾದಂತಾಗಿದೆ. ನೀಟ್ ಸುಗ್ರೀವಾಜ್ಞೆ ತೆರವುಗೊಳಿಸುವಂತೆ ಕೋರಿ ಸಂಕಲ್ಪ್ ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಗುರುವಾರ ಮಹತ್ವದ ಆದೇಶ ನೀಡಿದೆ.[ವೈದ್ಯಕೀಯ ಪ್ರವೇಶಕ್ಕೆ ನೀಟ್ ಪರೀಕ್ಷೆ ಮಾತ್ರ]

Supreme Court lashes out at NEET ordinance

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅನಿಲ್ ಆರ್. ದವೆ, ಶಿವಕೀರ್ತಿ ಸಿಂಗ್ ಹಾಗೂ ಎ.ಕೆ.ಗೋಯೆಲ್ ನೇತೃತ್ವದ ಪೀಠ, ಸುಗ್ರೀವಾಜ್ಞೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ.[ಸಿಇಟಿ ಬರೆದು ಬಂದ ವಿದ್ಯಾರ್ಥಿಗಳು ಏನಂದ್ರು?]

ನ್ಯಾಯಾಲಯ ಮಧ್ಯ ಪ್ರವೇಶ ಮಾಡಿದರೆ ಮತ್ತಷ್ಟು ಗೊಂದಲಗಳು ಹುಟ್ಟಿಕೊಳ್ಳಬಹುದು. ಈಗಾಗಲೇ ಮೊದಲ ಹಂತದ ನೀಟ್ ನಡೆಸಲಾಗಿದೆ. ಎರಡನೇ ಹಂತದಲ್ಲಿಯೂ ಈ ಬಾರಿ ನೀಟ್ ಪರೀಕ್ಷೆ ನಡೆಯಲಿದೆ. ಜುಲೈ 24 ರ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
supreme court, cet, nda, narendra modi, karnataka, comedk, exam, ಸುಪ್ರೀಂಕೋರ್ಟ್, ಕರ್ನಾಟಕ, ಸಿಇಟಿ, ಕಾಮೆಡ್ ಕೆ
Please Wait while comments are loading...