Maternity Leave: ಹೆರಿಗೆ ರಜೆ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

Maternity Leave: ಹೆರಿಗೆ ರಜೆಯು ಹೆರಿಗೆ ಸೌಲಭ್ಯಗಳ ಅವಿಭಾಜ್ಯ ಅಂಗ ಆಗಿದೆ. ಅಲ್ಲದೆ, ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಪ್ರಮುಖ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ಹೇರಿಗೆ ರಜೆಯ ಬಗ್ಗೆ ತಮಿಳುನಾಡಿನ ಸರ್ಕಾರಿ ಶಿಕ್ಷಕಿಯೊಬ್ಬರು ಎರಡನೇ ಮದುವೆಯಾಗಿ ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಹೆರಿಗೆ ರಜೆ ನೀಡಲು ನಿರಾಕರಿಸಲಾಗಿತ್ತು.

ಶಿಕ್ಷಕಿಯು ಮೊದಲ ಮದುವೆ ಆಗಿದ್ದಾಗ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. ಬಳಿಕ ಎರಡನೇ ವಿವಾಹ ಆದ ಮೇಲೆ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ರಜೆ ನೀಡಲು ಸಾಧ್ಯವಿಲ್ಲ ಎಂದಿದ್ದ ಶಿಕ್ಷಣ ಇಲಾಖೆ, ಹೆರಿಗೆ ರಜೆ ನೀಡಲು ನಿರಾಕರಿಸಿತ್ತು ಎಂದು ಆರೋಪಿಸಲಾಗಿದೆ.

Supreme Court important order on maternity leave

ಶಿಕ್ಷಣ ಇಲಾಖೆಯ ಧೋರಣೆಯ ವಿರುದ್ಧ ಶಿಕ್ಷಕಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್‌ ಓಕಾ ಮತ್ತು ನ್ಯಾಯಮೂರ್ತಿ ಉಜ್ವಲ್‌ ಭೂಯಾನ್‌ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ಯಾವುದೇ ಸಂಸ್ಥೆಯು ಮಹಿಳೆಯರ ಹೆರಿಗೆ ರಜೆಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಅರ್ಜಿಯಲ್ಲಿ ಶಿಕ್ಷಕಿ ಮೊದಲ ಎರಡು ಮಕ್ಕಳನ್ನು ಹಡೆದ ಸಮಯದಲ್ಲಿ ತಾವು ನೌಕರಿಯಲ್ಲಿ ಇರಲಿಲ್ಲ. ಆಗ ಯಾವುದೇ ಹೆರಿಗೆ ರಜೆ ಅಥವಾ ಹೆರಿಗೆಗೆ ಸಂಬಂಧಿಸಿದ ಪ್ರಯೋಜನೆಗಳನ್ನು ಪಡೆದಿಲ್ಲ. ಎರಡನೇ ವಿವಾಹವಾದ ಬಳಿಕ ನಾನು ನೌಕರರಿಗೆ ಸೇರಿದೆ. ಈಗ ಹೆರಿಗೆ ರಜೆಯನ್ನು ಪಡೆಯುವ ಹಕ್ಕು ನನಗಿದೆ. ಆದರೆ, ಇಲಾಖೆ ಹೆರಿಗೆ ರಜೆ ನೀಡಲು ನಿರಾಕರಿಸುತ್ತಿದೆ ಎಂದು ವಾದಿಸಿದ್ದರು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಕೆ.ವಿ.ಮುತ್ತುಕುಮಾರ್‌, ತಮಿಳುನಾಡಿನ ಹೆರಿಗೆ ಸೌಲಭ್ಯಗಳಿಗೆ ಸಂಬಂಧಿಸಿದಂತೆ ನಿಬಂಧನೆಹಳ ಅಡಿಯಲ್ಲಿ ಶಿಕ್ಷಕಿ ಈ ಹಿಂದೆ ಯಾವುದೇ ಸೌಲಭ್ಯಗಳನ್ನು ಪಡೆದಿಲ್ಲ. ಈಗ ಅವರಿಗೆ ಹೆರಿಗೆ ರಜೆ ನೀಡದಿರುವ ಸರ್ಕಾರದ ನಿರ್ಧಾರವು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯದ ಗಮನ ಸೆಳದರು. ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಹೆರಿಗೆ ಸೌಲಭ್ಯಗಳ ವ್ಯಾಪ್ತಿಯನ್ನು ವಿಸ್ತರಿಸಿದೆ. ಹೆರಿಗೆ ರಜೆಯನ್ನು ಈಗ ಮೂಲಭೂತ ಸಂತಾನೋತ್ಪತ್ತಿ ಹಕ್ಕುಗಳ ಭಾಗವಾಗಿ ಗುರುತಿಸಲಾಗುತ್ತದೆ ಎಂದು ಹೇಳಿದೆ.

ಈ ಹಿಂದೆ ಹೆರಿಗೆ ರಜೆ ನೀತಿಯಡಿಯಲ್ಲಿ ಯಾವುದೇ ಮಹಿಳೆ ಮಗುವನ್ನು ಹೆತ್ತ ನಂತರ 12 ವಾರದೊಳಗೆ ಪಾವತಿಸಿದ ಹೆರಿಗೆ ರಜೆಯನ್ನು ಪಡೆಯಲು ಅವಕಾಶವಿತ್ತು. 2017ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಹೆರಿಗೆ ಸೌಲಭ್ಯ ಕಾಯ್ದೆಗೆ ಗಮನಾರ್ಹ ತಿದ್ದುಪಡಿಗಳನ್ನು ಮಾಡಲಾಗಿದ್ದು, ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆಯನ್ನು 26 ವಾರಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಮಗುವನ್ನು ದತ್ತು ಪಡೆದ ಮಹಿಳೆಯರು ಸಹ 12 ವಾರಗಳ ಹೆರಿಗೆ ರಜೆಯನ್ನು ಪಡೆಯಲು ಅವಕಾಶ ಇದೆ.

ಭಾರೀ ಚರ್ಚೆಗೆ ಕಾರಣವಾಗಿದ್ದ ಈ ರಜೆ ವಿಚಾರ: ಪ್ರಮುಖ ಹಬ್ಬ-ಹರಿದಿನಗಳಂದು ಎಲ್ಲಾ ಸರ್ಕಾರಿ ಉದ್ಯೋಗಿಗಳು ಹಾಗೂ ಖಾಸಗಿ ಕಚೇರಿಯ ಉದ್ಯೋಗಿಗಳಿಗೂ ರಜೆ ನೀಡಲಾಗುತ್ತದೆ. ಆದರೆ, ಇತ್ತೀಗಷ್ಟೇ ರಂಜಾನ್‌ ಮುಗಿಯುವವರೆಗೂ ಪ್ರತಿದಿನ ಮುಸ್ಲಿಂ ಸಮುದಾಯದವರಿಗೆ ಒಂದು ಗಂಟೆ ರಿಲೀಫ್‌ ನೀಡಿ ಎಂದು ಮುಸ್ಲಿಂ ಸಮುದಾಯ ಮನವಿ ಮಾಡಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+