ಇಡಿ ನಿರ್ದೇಶಕರ ಅಧಿಕಾರಾವಧಿ ಕಾನೂನು ಬಾಹಿರ: ಸುಪ್ರೀಂ ಕೋರ್ಟ್‌ ತೀರ್ಪು ಕುರಿತು ಅಮಿತ್‌ ಶಾ ಚರ್ಚಾಸ್ಪದ ಟ್ವೀಟ್‌

ನವದೆಹಲಿ, ಜುಲೈ 11: ಜಾರಿ ನಿರ್ದೇಶನಾಲಯದ ( ಇಡಿ ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಮೂರನೇ ಬಾರಿಯ ಅಧಿಕಾರ ಅವಧಿಯನ್ನು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಜುಲೈ 31 ರ ಒಳಗೆ ತಮ್ಮ ಸ್ಥಾನದಿಂದ ಹೊರನಡೆಯಬೇಕು ಎಂದು ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಸಂಭ್ರಮಿಸುತ್ತಿರುವವರು ಭ್ರಮೆಯಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

ಭ್ರಷ್ಟರು ಮತ್ತು ಕಾನೂನಿ ಬಾಹಿರವಾಗಿ ಕೆಲಸ ಮಾಡುವವರ ದಾಳಿ ಮಾಡಲು ಜಾರಿ ನಿರ್ದೇಶನಾಲಯದ ಅಧಿಕಾರ ಯಾವುಗಲೂ ಒಂದೇ ರೀತಿಯಾಗಿ ಇರಲಿದೆ ಎಂದು ಗೃಹ ಸಚಿವರು ಟ್ವೀಟ್ ಮಾಡಿದ್ದಾರೆ.

Home Minister Amit Shah

ಇಡಿ ಮುಖ್ಯಸ್ಥರು ಯಾರು ಎಂಬುದು ಮುಖ್ಯವಲ್ಲ

ಇಡಿ ಯಾವುದೇ ವ್ಯಕ್ತಿಯನ್ನು ಮೀರಿದ ಸಂಸ್ಥೆಯಾಗಿದೆ. ಅದರ ಪ್ರಮುಖ ಉದ್ದೇಶವನ್ನು ಸಾಧಿಸುವತ್ತ ಗಮನಹರಿಸಿದೆ. ಮನಿ ಲಾಂಡರಿಂಗ್ ಮತ್ತು ವಿದೇಶಿ ವಿನಿಮಯ ಕಾನೂನುಗಳ ಉಲ್ಲಂಘನೆಯ ಅಪರಾಧಗಳ ತನಿಖೆಯಲ್ಲಿ ಅದು ತೊಡಗಿರುತ್ತದೆ ಎಂದು ಶಾ ಹೇಳಿದ್ದಾರೆ.

'ಆದ್ದರಿಂದ, ಇಡಿ ನಿರ್ದೇಶಕರು ಯಾರು ಎಂಬುದು ಅದು ಮುಖ್ಯವಲ್ಲ. ಏಕೆಂದರೆ ಈ ಸ್ಥಾನವನ್ನು ಯಾರು ವಹಿಸಿಕೊಂಡರೂ ದಾಳಿ ಮಾಡುತ್ತಾರೆ. ಅಭಿವೃದ್ಧಿ ವಿರೋಧಿ ಮನಸ್ಥಿತಿಯನ್ನು ಹೊಂದಿರುವ ರಾಜವಂಶಗಳ ಭ್ರಷ್ಟಾಚಾರವನ್ನು ಅವರು ಗಮನಿಸುತ್ತಲೇ ಇರುತ್ತಾರೆ' ಎಂದು ಅಮಿತ್‌ ಶಾ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ನಾಯಕರನ್ನು ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಮಿಶ್ರಾ ಅವರ 3ನೇ ಅವಧಿಗೆ ಕೇಂದ್ರದ ಹೋರಾಟ ಏಕೆ? ಪವನ್ ಖೇರಾ

ಶಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, 'ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಏಜೆನ್ಸಿಯ ಬಗ್ಗೆ ಏಕೆ ಗೃಹ ಸಚಿವರು ಪ್ರತಿಕ್ರಿಯಿಸುತ್ತಿದ್ದಾರೆ' ಎಂದು ಕೇಳಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಇಬ್ಬರು ಮಾತ್ರ ಸಕ್ರಿಯರಾಗಿದ್ದಾರೆ. ಅವರಿಬ್ಬರಿಂದಲೇ ಎಲ್ಲವೂ ನಡೆಯುತ್ತಿದೆ ಎಂಬುದನ್ನು ಇದು ತೋರಿಸುತ್ತಿಲ್ಲವೇ ಎಂದು ಖೇರಾ ಕೇಳಿದ್ದಾರೆ.

ಕೇಂದ್ರದ ಮುಖಕ್ಕೆ ಕಪಾಳಮೋಕ್ಷ ಎಂದ ಕಾಂಗ್ರೆಸ್‌

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮುಖಕ್ಕೆ ಸುಪ್ರೀಂ ಕೋರ್ಟ್‌ ಕಪಾಳ ಮೋಕ್ಷ ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

'ಕೇಂದ್ರದ ನಿರ್ಧಾರವನ್ನು ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್‌ ಮೋದಿ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದೆ. ಇದು ಸರ್ಕಾರದ ಮುಖಕ್ಕೆ ಮಾಡಿದ ಕಪಾಳಮೋಕ್ಷ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ಇದು ನ್ಯಾಯದ ಗೆಲುವು. ರಾಜಕೀಯ ಸೇಡಿಗಾಗಿ ಇಡಿಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದು ಮೋದಿ ಸರ್ಕಾರದ ಹತಾಶ ಮನಸ್ಥಿತಿಯ ಸಂಕೇತವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪು ನಮ್ಮ ನಿಲುವಿಗೆ ಸಮರ್ಥನೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+