ಗೋವಾ: 88 ಗಣಿಗಾರಿಕೆ ಲೈಸನ್ಸ್ ರದ್ದುಗೊಳಿಸಿದ ಸುಪ್ರೀಂ
ನವದೆಹಲಿ, ಫೆಬ್ರವರಿ 07 : ಗೋವಾ ಸರ್ಕಾರವು 2015ರಲ್ಲಿ ನವೀಕರಿಸಿದ್ದ 88 ಗಣಿ ಸಂಸ್ಥೆಗಳ ಲೈಸನ್ಸ್ ರದ್ದುಗೊಳಿಸಿ ಸುಪ್ರೀಂಕೋರ್ಟ್ ಬುಧವಾರದಂದು ಆದೇಶ ಹೊರಡಿಸಿದೆ.
ಗಣಿ ಹಾಗೂ ಖನಿಜ (ನಿಯಂತ್ರಣ ಹಾಗೂ ಅಭಿವೃದ್ಧಿ) ಕಾಯ್ದೆಯಂತೆ ಗಣಿಗಾರಿಕೆ ಗುತ್ತಿಗೆ ಹರಾಜು ಪ್ರಕ್ರಿಯೆಗೂ ಮುನ್ನ ಗಣಿ ಸಂಸ್ಥೆಗಳಿಗೆ ನೀಡಿದ ಲೈಸನ್ಸ್ ನವೀಕರಿಸಲಾಗಿತ್ತು.
ಕಬ್ಬಿಣ ಹಾಗೂ ಮ್ಯಾಂಗನೀಸ್ ಗಣಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಚಟುವಟಿಕೆಗಳು ಮಾರ್ಚ್ 15ರಿಂದ ಸ್ಥಗಿತಗೊಳ್ಳಲಿದೆ.

2015ರಲ್ಲಿ ಬಿಜೆಪಿ ಸರ್ಕಾರವು ಈ ಎಲ್ಲಾ 88 ಸಂಸ್ಥೆಗಳ ಗಣಿಗಾರಿಕೆ ಪರವಾನಗಿಯನ್ನು 20ವರ್ಷಕ್ಕೆ ನವೀಕರಿಸಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.ಗೋವಾದ ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಜಸ್ಟೀಸ್ ಮದನ್ ಬಿ ಲಾಕೂರ್ ಹಾಗೂ ನ್ಯಾ. ದೀಪಕ್ ಗುಪ್ತಾ ಅವರು ಈ ಬಗ್ಗೆ ಅರ್ಜಿ ಪರಿಶೀಲಿಸಿ, ಸರ್ಕಾರ ಮತ್ತೊಮ್ಮೆ ಗಣಿಗಾರಿಕೆ ಗುತ್ತಿಗೆಯ ಅರ್ಜಿಗಳನ್ನು ಪರೀಕ್ಷಿಸಲಿದೆ ಎಂದು ತಮ್ಮ ಆದೇಶದಲ್ಲಿ ಹೇಳಿದ್ದಾರೆ.












Click it and Unblock the Notifications