ಪತ್ರಕರ್ತನ ಕೆನ್ನೆಗೆ ಸನ್ನಿ ಲಿಯೋನ್ ಬಾರಿಸಿದ್ದೇಕೆ?

Subscribe to Oneindia Kannada

ಅಹಮದಾಬಾದ್, ಮಾರ್ಚ್, 25: ಅಸಭ್ಯ, ಅಶ್ಲೀಲ ಪ್ರಶ್ನೆ ಕೇಳಿದ ಪತ್ರಕರ್ತನ ಕೆನ್ನೆಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಬಾರಿಸಿದ್ದಾರೆ. ಟಿವಿ ವಾಹಿನಿಯ ವರದಿಗಾರನೊಬ್ಬನ ಅಸಭ್ಯ ನಡವಳಿಕೆ ಮತ್ತು ಪ್ರಶ್ನೆಗೆ ಬೇಸತ್ತ ಸನ್ನಿ ಕಪಾಳಮೋಕ್ಷ ಮಾಡಿದ್ದಾರೆ

ಅಷ್ಟಕ್ಕೂ ಪತ್ರಕರ್ತ ಕೇಳಿದ ಪ್ರಶ್ನೆಯಾದರೂ ಏನು? ಕೆನ್ನೆಗೆ ಬಾರಿಸುವಷ್ಟು ಕೋಪ ಬಾಲಿವುಡ್ ಬೆಡಗಿಗೆ ಬಂದಿದ್ದು ಯಾಕೆ ಎಂಬುದಕ್ಕೆಯೂ ಉತ್ತರ ಸಿಕ್ಕಿದೆ. ಹೋಳಿ ಆಚರಣೆ ವೇಳೆ ಗುಜರಾತ್ ಗೆ ಸನ್ನಿ ಲಿಯೋನ್ ಬಂದಾಗ ಇಂಥ ಘಟನೆ ನಡೆದಿದೆ.[ಗ್ಲಾಮರ್ ಗೊಂಬೆ ಸನ್ನಿ ಲಿಯೋನ್ ವಿರುದ್ಧ ಎಫ್ ಐಆರ್]

Sunny Leone

ಕಾಲೇಜು ವಿದ್ಯಾರ್ಥಿಗಳು ಆಯೋಜಿಸಿದ್ದ ಹೋಳಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸನ್ನಿಲಿಯೋನ್ ಗುಜರಾತ್ ಗೆ ಆಗಮಿಸಿದ್ದರು. ಆಕೆ ಉಳಿದು ಕೊಂಡಿದ್ದ ಹೋಟೆಲ್ ನಲ್ಲಿ ಮಾಧ್ಯಮದವರು ಎದುರಾದರು. ಈ ವೇಳೆ ಪತ್ರಕರ್ತ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಸನ್ನಿ ಬೆನ್ನು ಬಿದ್ದ.

'ನೀವು ಹಿಂದೆ ಪಾರ್ನ್ ಸ್ಟಾರ್ ಆಗಿದ್ದವರು, ಈಗ ಬಾಲಿವುಡ್ ನಲ್ಲಿ ನಟನೆ ಮಾಡುತ್ತಿದ್ದೀರಿ. ಅಂದಹಾಗೆ ಈಗ ಒಂದು ರಾತ್ರಿಗೆ ಎಷ್ಟು ಹಣ ಚಾರ್ಜ್ ಮಾಡುತ್ತಿದ್ದೀರಿ ಎಂದೆಲ್ಲಾ ಅಸಂಬದ್ಧ ಪ್ರಶ್ನೆ ಕೇಳಿದ್ದಾನೆ. ಮೊದಲು ಸಾವಧಾನವಾಗೇ ಉತ್ತರಿಸಿದ ಮಾಜಿ ನೀಲಿ ಚಿತ್ರ ತಾರೆ ಅಂತಿಮವಾಗಿ ತಾಳ್ಮೆ ಕಳೆದುಕೊಂಡು ಮುಖಕ್ಕೆ ಬಾರಿಸಿದ್ದಾಳೆ.[ಬಿಕಿನಿಯಲ್ಲಿ ಸನ್ನಿ ಸೊಗಸು]

ಆದರೆ ಈ ವದಂತಿಯನ್ನು ತಳ್ಳಿ ಹಾಕಿರುವ ಸನ್ನಿ ಪತಿ ಡೇನಿಯಲ್ ಹೆಬ್ಬರ್, ಇದೆಲ್ಲಾ ಸುಳ್ಳು. ಸನ್ನಿ ಯಾರ ಕಪಾಳಕ್ಕೂ ಹೊಡೆದಿಲ್ಲ. ಆಕೆ ಹೆಸರಿಗೆ ಹಾಗೂ ವೃತ್ತಿ ಜೀವನಕ್ಕೆ ಧಕ್ಕೆ ತರುಲು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಗುಜರಾತ್ ಪೊಲೀಸರು ಇಂಥ ಪ್ರಕರಣ ದಾಖಲಾದ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood actress Sunny Leone reportedly left a TV channel reporter red-faced for his inappropriate questions at a Holi event in Gujarat on Thursday, March 24. Reportedly, actress also slapped reporter for his obnoxious act. The Indo-Canadian actress had come to city to participate in a Holi event titled 'play Holi with Sunny Leone'. It is learnt that actress performed a dance number that lasted for fifteen minutes.
Please Wait while comments are loading...