ದಸರಾದಲ್ಲಿ ಪ್ರೀತಿಯಿಂದ ಆಡು, ಸನ್ನಿ ಲಿಯೋನ್ 'ಕಾಂಡೋಮ್' ಕಿರಿಕ್

ತನ್ನ ಬೇಕಾಬಿಟ್ಟಿ ಮೈಪ್ರದರ್ಶನದಿಂದ ಪಡ್ಡೆಗಳ ಫೇವರೇಟ್ ಆಗಿರುವ ಸನ್ನಿ ಲಿಯೋನ್, ಕಾಂಡೋಮ್ ಜಾಹೀರಾತು ಒಂದರಲ್ಲಿ ಹಿಂದೂಗಳ ಹಬ್ಬವನ್ನು ಉಲ್ಲೇಖಿಸಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ತನ್ನ ಬೇಕಾಬಿಟ್ಟಿ ಮೈಪ್ರದರ್ಶನದಿಂದ ಪಡ್ಡೆಗಳ ಫೇವರೇಟ್ ಆಗಿರುವ ಸನ್ನಿ ಲಿಯೋನ್, ಕಾಂಡೋಮ್ ಜಾಹೀರಾತು ಒಂದರಲ್ಲಿ ಹಿಂದೂಗಳ ಹಬ್ಬವನ್ನು ಉಲ್ಲೇಖಿಸಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ದೂರು ಸಲ್ಲಿಸಿರುವ ಅಖಿಲ ಭಾರತ ವ್ಯಾಪಾರಿಗಳ ಸಂಘ (CAIT), ಹಿಂದೂಗಳ ಹಬ್ಬ, ಅವರ ಭಾವನೆ ಇದ್ಯಾವುದರ ಪರಿವಿಲ್ಲದೇ, ಹಣಕ್ಕಾಗಿ ಯಾವ ಕೀಳು ಮಟ್ಟಕ್ಕಾದರೂ ಸನ್ನಿ ಲಿಯೋನ್ ಇಳಿಯುತ್ತಾರೆಂದು ಸಂಘ ಸಚಿವರಿಗೆ ಪತ್ರ ಬರೆದಿದೆ.

Sunny Leone condom Navaratri ad in Gujarat, stirs controversy

'ಮನ್ ಫೋರ್ಸ್ ಕಾಂಡೋಮ್' ಪ್ರೊಡಕ್ಟಿನ ರಾಯಭಾರಿಯಾಗಿರುವ ಸನ್ನಿ ಲಿಯೋನ್, ಇತ್ತೀಚಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ " ಈ ನವರಾತ್ರಿಗೆ ಆಡು, ಆದರೆ ಪ್ರೀತಿಯಿಂದ ಆಡು (ಇಸ್ ನವರಾತ್ರಿ ಪರ್ ಖೇಲೋ, ಮಗರ್ ಪ್ಯಾರ್ ಸೇ ಖೇಲೋ ) ಎಂದು ಬರೆಯಲಾಗಿತ್ತು.

ಗುಜರಾತಿನ ಎಲ್ಲಡೆ ಈ ಜಾಹೀರಾತು ರಾರಾಜಿಸುತ್ತಿದ್ದು, ಹಿಂದೂ ಪರ ಸಂಘಟನೆಯ ಜೊತೆ, ವ್ಯಾಪಾರಸ್ಥರೂ ಈ ಜಾಹೀರಾತಿನ ಬಗ್ಗೆ ಅಪಸ್ವರ ಎತ್ತಿದ್ದಾರೆ. ಸಂಸ್ಕೃತಿ, ಭಾವನೆಗಳಿಗೆ ಬೆಲೆಕೊಡದೆ ಲಾಭಕ್ಕಾಗಿ ಅತ್ಯಂತ ಕೀಳುಮಟ್ಟಕ್ಕೆ ಇಳಿಯುವ ಕೆಲಸವಿದು ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.

ಸಚಿವ ಪಾಸ್ವಾನ್ ಅವರಿಗೆ ಬರೆದ ಪತ್ರದಲ್ಲಿ, ಈ ಜಾಹೀರಾತನ್ನು ಈ ಕೂಡಲೇ ಹಿಂದಕ್ಕೆ ಪಡೆಯುವಂತೆ ಸೂಚಿಸಬೇಕು. ಜೊತೆಗೆ, ಇನ್ನು ಮುಂದೆ ಇಂತಹ ತಪ್ಪು ನಡೆಯದಂತೆ ಎಚ್ಚರಿಕೆ ನೀಡಬೇಕೆಂದು ಸಂಘ, ಸಚಿವರಿಗೆ ಪತ್ರದ ಮುಖೇನ ಮನವಿ ಮಾಡಿದೆ.

ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವ ಎಲ್ಲಾ ಜಾಹೀರಾತಿಗೆ ಕೇಂದ್ರ ಸರಕಾರ ಕೆಲವೊಂದು ನಿಯಮಗಳನ್ನು (code of conduct) ರೂಪಿಸಬೇಕು. ಯಾವ ಕೋಮಿನ ಭಾವನೆಗಳಿಗೂ ಧಕ್ಕೆಯಾಗುವಂತಹ ಜಾಹೀರಾತುಗಳಿಗೆ ಇನ್ನು ಮುಂದೆಯಾದರೂ ಕತ್ತರಿ ಬೀಳಲಿ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+