Get Updates
Get notified of breaking news, exclusive insights, and must-see stories!

ಹಿಮಾಚಲದಲ್ಲಿ ಸುಖ್ವಿಂದರ್ ಸುಖು ದುರಾಡಳಿತ: ಈಡೇರದ ಭರವಸೆ, ಜನಸಂಖ್ಯಾ ಒತ್ತಡ, ಹೆಚ್ಚುತ್ತಿರುವ ಡ್ರಗ್ ಹಾವಳಿ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ದುರಾಡಳಿತ, ಈ ಅವಧಿಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣಕ್ಕೆ ಅನೇಕ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸಮರ್ಥ ನಾಯಕತ್ವದ ಮೂಲಕ ಒಂದು ಕಾಲದಲ್ಲಿ ರಾಜ್ಯವನ್ನು ಸಮೃದ್ಧಿಯತ್ತ ತೆಗೆದುಕೊಂಡು ಹೋಗಿದ್ದರು, ಈಗ ನಾಯಕತ್ವ ಜನರಲ್ಲಿ ಅಸಮಾಧಾನ ಹೆಚ್ಚಾಗಲು ಕಾರಣವಾಗುತ್ತಿದೆ, ಇದಕ್ಕೆ ಆಡಳಿತದ ಸಾಲು ಸಾಲು ವೈಫಲ್ಯ, ಬದ್ಧತೆ ಪೂರ್ಣಗೊಳಿಸದಿರುವುದು ಪ್ರಮುಖ ಕಾರಣವಾಗಿದೆ.

ಪ್ರಮುಖ ಭರವಸೆಗಳನ್ನು ಈಡೇರಿಸಿಲ್ಲ

ಸುಖ್ವಿಂದರ್ ಸುಖು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಾಗ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಮಹತ್ವದ ಭರವಸೆಗಳನ್ನು ಕೊಟ್ಟರು, ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡಿದರು ಮತ್ತು ಹಿಮಾಚಲ ಪ್ರದೇಶ ರಾಜ್ಯದ ಆರ್ಥಿಕತೆ ಸದೃಢಗೊಳಿಸುವ ಭರವಸೆ ನೀಡಿದರು. ಆದರೆ ಇವುಗಳಲ್ಲಿ ಹಲವು ಭರವಸೆಗಳು ಈಡೇರಿಲ್ಲ. ಇವುಗಳಲ್ಲಿ ಕಣ್ಣಿಗೆ ರಾಚುವಂತೆ ಕಾಣುತ್ತಿರುವುದು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದ ನಿರುದ್ಯೋಗ ಭತ್ಯೆ ಯೋಜನೆಯ ಅನುಷ್ಠಾನ. ನಿರುದ್ಯೋಗಿಗಳಿಗೆ ಹಣಕಾಸು ನೆರವು ನೀಡಲು ವಿನ್ಯಾಸಗೊಳಿಸಲಾದ ಯೋಜನೆ ಸರಿಯಾದ ಮಾರ್ಗದಲ್ಲಿ ಇನ್ನೂ ಜಾರಿಗೆ ಬಂದಿಲ್ಲ. ಹಾಗೆಯೇ ಪ್ರವಾಸೋದ್ಯಮವನ್ನು ಉತ್ತೇಜಿಸಲು ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಸಂಪರ್ಕ ಅಭಿವೃದ್ಧಿಗೊಳಿಸುವ ಭರವಸೆ ಯಾವುದೇ ಪ್ರಗತಿ ಕಂಡಿಲ್ಲ, ಕೊಟ್ಟ ಭರವಸೆ ಈಡೇರಿಸದ ಸರ್ಕಾರದ ಅಸಮರ್ಥತೆ ಬಗ್ಗೆ ಸಾಮಾನ್ಯ ಜನರು ಹತಾಶರಾಗಿದ್ದಾರೆ.

Sukhvinder Sukhus Misgovernance In Himachal Broken Promises Demographic Tensions Rising Drug Menace

ಆಡಳಿತ ವೈಫಲ್ಯಗಳ ಸರಣಿ

ಕೆಲವು ನಿರ್ದಿಷ್ಟ ಭರವಸೆ ಈಡೇರಿಸದ ಜೊತೆಗೆ ಸುಖು ಆಡಳಿತ ಸರಣಿ ಆಡಳಿತ ವೈಫಲ್ಯ ಎದುರಿಸುತ್ತಿದೆ. ರಾಜ್ಯ ಸಾಮಾನ್ಯ ಸೇವೆಗಳ ನಿರಂತರ ಆಡಚಣೆಗಳಿಗೆ ಸಾಕ್ಷಿಯಾಗಿದೆ, ಇವುಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೇರಿವೆ. ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳಿಲ್ಲ, ಸರ್ಕಾರಿ ಶಾಲೆಗಳು ಶಿಕ್ಷಕರು, ಅನುದಾನ ಕೊರತೆಯನ್ನು ಎದುರಿಸುತ್ತಿವೆ. ರಾಜ್ಯದ ಆಡಳಿತದ ಅವ್ಯವಸ್ಥೆ ಕಾಣುತ್ತಿದೆ, ಅಧಿಕಾರಶಾಹಿಯ ಅಸಮರ್ಥತೆ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಪಣಗೊಳಿಸಿದೆ. ಇದಕ್ಕಿಂತಲೂ ಮುಖ್ಯಮಂತ್ರಿಗಳು ಟೀಕೆಗಳಿಗೆ ಒಳಗಾಗುತ್ತಿರುವುದು ಅಸಮರ್ಥ ಆಡಳಿತಕ್ಕೆ, ಬಿಕ್ಕಟ್ಟುಗಳು ದೊಡ್ಡದಾಗಿ ಬೆಳೆದ ಮೇಲೆ ಅವುಗಳ ಬಗ್ಗೆ ಮಾತನಾಡುತ್ತಿದ್ದಾರೆ, ಮೂಲ ಹಂತದಲ್ಲಿಯೇ ಅವುಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಶಿಮ್ಲಾದಲ್ಲಿನ ಜನಸಂಖ್ಯಾ ಬದಲಾವಣೆ

ಶಿಮ್ಲಾದಲ್ಲಿ ಉಂಟಾಗಿದೆ ಎಂದು ಆರೋಪಿಸಲಾಗುತ್ತಿರುವ ಜನಸಂಖ್ಯಾ ಬದಲಾವಣೆ ರಾಜ್ಯ ಸರ್ಕಾರದ ಉದ್ದೇಶದ ಬಗ್ಗೆ ವಿವಾದವನ್ನು ಹುಟ್ಟುಹಾಕಿದೆ. ಇತ್ತೀಚೆಗೆ ಸ್ಥಳೀಯ ಹಲವಾರು ಜನರ ಗುಂಪು ಶಿಮ್ಲಾದ ಮಸೀದಿಯ ಹೊರಗೆ ಭಾರೀ ಪ್ರತಿಭಟನೆ ನಡೆಸಿತು, ಅಕ್ರಮವಾಗಿ ಇದನ್ನು ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿತು. ಸ್ಥಳೀಯರಲ್ಲದವರ ಜನಸಂಖ್ಯೆ ಶಿಮ್ಲಾ ನಗರದಲ್ಲಿ ಹೆಚ್ಚಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ದೂರಲಾಯಿತು. ಈ ಆರೋಪಗಳನ್ನು ಸರ್ಕಾರ ತಳ್ಳಿ ಹಾಕಿತು, ಶಿಮ್ಲಾದಲ್ಲಿರುವ ಅನೇಕರು ಆಡಳಿತ ಪ್ರದೇಶದ ಪರಂಪರೆ ಮತ್ತು ಸಾಂಸ್ಕೃತಿಕ ಪರಂಪರೆ ಉಳಿಸಲು ಆದ್ಯತೆ ನೀಡುತ್ತಿಲ್ಲ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಗಮನಿಸಬೇಕಾದ ಉದ್ವಿಘ್ನತೆಯನ್ನು ನಗರದಲ್ಲಿ ನಿರ್ಮಾಣ ಮಾಡಿದೆ. ಶಿಮ್ಲಾದ ದೂರದೃಷ್ಟಿಯ, ಭವಿಷ್ಯದ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುವಂತೆ ಮಾಡಿದೆ.

ವಿಧಾನಸಭೆಯಲ್ಲಿ ಮಹತ್ವದ ಚರ್ಚೆ ವೇಳೆ ನಿದ್ದೆಗೆ ಜಾರಿದ್ದ ಸಿಎಂ ಸುಖ್ವಿಂದರ್

ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ವಿಧಾನಸಭೆಯಲ್ಲಿ ಮಹತ್ವದ ಚರ್ಚೆ ನಡೆಯುವಾಗ ನಿದ್ದೆಗೆ ಜಾರಿದ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿತ್ತು. ಇದು ದುರಾಡಳಿತ ಪಟ್ಟಿಗೆ ಹೊಸದಾಗಿ ಸೇರಿಕೊಂಡಿದೆ. ಸರ್ಕಾರದ ಅಲಸ್ಯ, ಉದಾಸೀನತೆಗೆ ಇವು ಸಾಕ್ಷಿಯಾಗಿವೆ. ಸರ್ಕಾರಿ ನೌಕರರ ವೇತನ ಪಾವತಿಗೆ ಒತ್ತಡ ಹೆಚ್ಚಾದ ಸಮಯದಲ್ಲಿಯೇ ವೈರಲ್ ಆದ ಈ ಫೋಟೋ, ವಿಡಿಯೋ ಸರ್ಕಾರದ ವಿರುದ್ಧದ ಅಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಶಿಕ್ಷಕರು, ಆರೋಗ್ಯ ಕಾರ್ಯಕರ್ತರು ಮತ್ತು ಇತರ ಸರ್ಕಾರಿ ನೌಕರರು ಹಲವು ತಿಂಗಳುಗಳಿಂದ ವೇತನ ಪಡೆದಿಲ್ಲ, ಇವು ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಸರಿಯಾದ ಸಮಯಕ್ಕೆ ವೇತನವನ್ನು ಪಾವತಿಸಲು ವಿಫಲವಾದ ಸುಖು ಸರ್ಕಾರದ ಅಸಮರ್ಥತೆ ಸಾರ್ವಜನಿಕ ವಲಯದ ಉದ್ಯೋಗಿಗಳ ಕಠಿಣ ಪರಿಸ್ಥಿತಿಗೆ ಕಾರಣವಾಗಿದೆ, ಸರ್ಕಾರದ ಮೇಲಿನ ವಿಶ್ವಾಸವನ್ನು ಮತ್ತಷ್ಟು ಕುಗ್ಗಿಸಿದೆ.

ಹಿಮಾಚಲದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಹಾವಳಿ

ಸುಖ್ವಿಂದರ್ ಸಿಂಗ್ ಸುಖು ಆಡಳಿತದಲ್ಲಿ ಅಪಾಯಕಾರಿಯಾದ ವಿಚಾರ ಎಂದರೆ ಹಿಮಾಚಲ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಹಾವಳಿ. ಒಂದು ಕಾಲದಲ್ಲಿ ಸೌಂದರ್ಯ ಮತ್ತು ಪ್ರವಾಸೋದ್ಯಮದಿಂದ ಗುರುತಿಸಲಾಗುತ್ತಿದ್ದ ಪ್ರದೇಶ ಈಗ ಮಾದಕ ವಸ್ತುಗಳ ಸಮಸ್ಯೆಗೆ ಸಿಲುಕಿದೆ. ಯುಕವರು ಹೆಚ್ಚಾಗಿ ಈ ಜಾಲಕ್ಕೆ ಸಿಲುಕಿದ್ದು, ಕ್ರಿಮಿನಲ್ ಅಪರಾಧಗಳು ಹೆಚ್ಚಾಗಲು ಕಾರಣವಾಗಿದೆ. ಕುಲು, ಮನಾಲಿ, ಮಂಡಿ ಮುಂತಾದ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಸಾಗಾಟದ ವರದಿಗಳು ಸಾಮಾನ್ಯ ಎಂಬಂತೆ ಆಗಿವೆ. ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರದ ನಡೆ ಟೀಕೆಗೆ ಕಾರಣವಾಗಿದೆ. ಕಾನೂನು ಸುವ್ಯವಸ್ಥೆಯ ಜಾರಿಯ ಪ್ರಯತ್ನ ಬಹಳ ಹಿಂದುಳಿದಿದೆ. ಪುರ್ನವಸತಿ ಕಾರ್ಯಕ್ರಮಗಳು ಸಮರ್ಪಕವಾಗಿಲ್ಲ. ಮಾದಕ ವಸ್ತುಗಳ ಸಮಸ್ಯೆಯನ್ನು ಎದುರಿಸಲು ಸಮಗ್ರ ಕಾರ್ಯತಂತ್ರದ ಕೊರತೆಯು ರಾಜ್ಯದ ಯುವ ಪೀಳಿಗೆಯ ಭವಿಷ್ಯವನ್ನು ಅಪಾಯಕ್ಕೆ ತಳ್ಳಿದೆ. ಮಾದಕ ವಸ್ತುಗಳ ವ್ಯಸನ ಪ್ರಮಾಣ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ.

ಅಂತಿಮ ಷರಾ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸುಖು ಅವಧಿ ದುರಾಡಳಿತ, ಈಡೇರದ ಭರವಸೆಗಳ ಕಾರಣಕ್ಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆ ಸಮಯದಲ್ಲಿ ನೀಡಿದ ಪ್ರಮುಖ ಭರವಸೆ ಈಡೇರಿಸದಿರುವುದು, ಅಕ್ರಮ ನಿರ್ಮಾಣಗಳನ್ನು ತಡೆಯದಿರುವುದು, ಡ್ರಗ್ ಹಾವಳಿ, ಸರ್ಕಾರಿ ನೌಕರರ ವೇತನ ಪಾವತಿ ಸೇರಿ ಕಠಿಣ ಪರಿಸ್ಥಿತಿ ಎದುರಿಸುವಲ್ಲಿ ವಿಫಲವಾದ ಸುಖು ಆಡಳಿತ ಜನರರಲ್ಲಿ ಭರವಸೆ ಮೂಡಿಸಲು ವಿಫಲವಾಗಿದೆ.

ರಾಜ್ಯದ ಯುವಕರು ವಿಶೇಷವಾಗಿ ಹಿಮಾಚಲ ಪ್ರದೇಶ ಸರ್ಕಾರದ ದುರಾಡಳಿತ, ನಿರುದ್ಯೋಗ ಮತ್ತು ಮಾದಕ ವಸ್ತುಗಳ ಹಾವಳಿ ಕಾರಣಕ್ಕೆ ಆಕ್ರೋಶಗೊಂಡಿದ್ದಾರೆ. ಹಿಮಾಚಲ ಪ್ರದೇಶದ ಜನರಲ್ಲಿ ಮುಖ್ಯಮಂತ್ರಿಗಳ ಉತ್ತಮ ಆಡಳಿತ, ಸಾಮರ್ಥ್ಯದ ಮೇಲಿನ ನಂಬಿಕೆ ಹೆಚ್ಚಾಗುವಂತೆ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+