India Pakistan War: ಪಾಕಿಸ್ತಾನದಿಂದ ಈ ದಾಳಿ ನಡೆದಿಲ್ಲ, ಇದು ಶುದ್ಧ ಸುಳ್ಳು: ಸೇನಾಧಿಕಾರಿ

India Pakistan Tensions: ಭಾರತದ ಸಿಂದೂರ ಆಪರೇಷನ್ ಬಳಿಕ ಪಾಕಿಸ್ತಾನ ಪಂಜಾಬ್, ರಾಜಸ್ಥಾನದ ಗಡಿ ಭಾಗಗಳಲ್ಲಿ ದಾಳಿ ಮುಂದಾಗಿ ವಿಫಲವಾಗಿದೆ. ಈ ಗಡಿಯಲ್ಲಿ ಪಾಕಿಸ್ತಾನ್ ಮಾಡಿದ್ದ 08 ಕ್ಷಿಪಣಿ ದಾಳಿಯನ್ನು ಹತ್ತಿಕ್ಕುವಲ್ಲಿ ಭಾರತ ಮಿಲಿಟರಿ ಪಡೆ ಯಶಸ್ವಿಯಾಗಿದೆ. ಅಲ್ಲದೇ ಆತ್ಮಹತ್ಯಾ ದಾಳಿ ಬಗ್ಗೆ ಪಾಕಿಸ್ತಾನ ಸುಳ್ಳು ಮಾತನಾಡಿದೆ. ಇದೆಲ್ಲ ಸಂಪೂರ್ಣ ಸುಳ್ಳು ಸುದ್ದಿಗಳು ಎಂದು ಭಾರತಿಯ ಮಿಲಿಟರಿ ಮುಖ್ಯಸ್ಥರು ಅಧಿಕೃತಿ ಮಾಹಿತಿ ನೀಡಿದ್ದಾರೆ.

ಭಾರತದ ಪಠಾಣ್‌ಕೋಟ್ ಅಥವಾ ರಾಜೌರಿಯಲ್ಲಿ ಭಯೋತ್ಪಾದಕರು ನಡೆಸಿದ ಆತ್ಮಹತ್ಯಾ ದಾಳಿ ನಡೆದಿದೆ ಎಂಬ ಸುದ್ದಿಗಳು ಬಿತ್ತರವಾಗಿದೆ. ಇದೆಲ್ಲವು ಸಂಪೂರ್ಣವಾಗಿ ಸುಳ್ಳು ಎಂದಿರುವ ಭಾರತವು ಪಾಕಿಸ್ತಾನದ ಮಿಸೈಲ್ ದಾಳಿ ಬಿಟ್ಟು ಬೇರೆ ದಾಳಿಗಳ ಬಗ್ಗೆ ಒಪ್ಪಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿದೆ.

Suicide attacks by terrorists of Pakistan at Pathankot or Rajouri are completely false India

ಪಠಾಣ್‌ಕೋಟ್ ಅಥವಾ ರಾಜೌರಿಯಲ್ಲಿ ಭಯೋತ್ಪಾದಕರು ನಡೆಸಿದ ಆತ್ಮಹತ್ಯಾ ದಾಳಿ ನಡೆದಿದೆ ಎನ್ನಲಾಗಿದೆ. ಇದೆಲ್ಲದರ ಕುರಿತು ಸೇನಾ ಪಡೆ ಪರಿಶೀಲಿಸಿದೆ. ಈ ಸ್ಥಳದಲ್ಲಿ ಯಾವುದೇ ದಾಳಿ ಗುರುತುಗಳು ಪತ್ತೆಯಾಗಿಲ್ಲ. ಇದೆಲ್ಲವು ಸಂಪೂರ್ಣ ಸುಳ್ಳು. ಈ ಪ್ರದೇಶಗಳಲ್ಲಿ ಅಂತಹ ಯಾವುದೇ ಘಟನೆಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ.

ಕ್ಷಿಪಣಿ ದಾಳಿಯನ್ನು ಭಾರತ ಹೊಡೆದುರುಳಿಸಿದ್ದಕ್ಕೆ ಸಾಕ್ಷ್ಯ ಲಭ್ಯವಾಗಿದೆ. ಆದರೆ ಪಾಕಿಸ್ತಾನ ಆತ್ಮಹತ್ಯಾ ದಾಳಿಗೆ ಯಾವುದೇ ಪುರಾವೆಗಳು ಇಲ್ಲ. ಪರಿಶೀಲನೆ ಬಳಿಕವೇ ರಕ್ಷಣಾ ಇಲಾಖೆ ಅಧಿಕಾರಿಗಳು ಮಾಹಿತಿ ಬಹಿರಂಗಪಡಿಸಿದ್ದಾರೆ. ಸದ್ಯ ಭಾರತದಿಂದ ಪಾಕಿಸ್ತಾನದ ಮೇಲೆ #operationsindoor2 ದಾಳಿ ಮುಂದುವರಿದಿದೆ.

ವಿಮಾನಯಾನ ಸಂಸ್ಥೆಗಳಿಗೆ ವಿಶೇಷ ಸೂಚನೆ

ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಗಡಿ ಭಾಗದಲ್ಲಿ ಭಾರತ ಮತ್ತು ಪಾಕಿಸ್ಥಾನ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ದೇಶಾದ್ಯಂತದ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಭದ್ರತಾ ಕ್ರಮಗಳನ್ನು ಹೆಚ್ಚಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿನ ಎಲ್ಲಾ ಪ್ರಯಾಣಿಕರು ಸೆಕೆಂಡರಿ ಲ್ಯಾಡರ್ ಪಾಯಿಂಟ್ ಚೆಕ್ (SLPC) ಗೆ ಒಳಗಾಗುತ್ತಾರೆ. ಟರ್ಮಿನಲ್ ಕಟ್ಟಡಗಳಿಗೆ ಸಂದರ್ಶಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಏರ್ ಮಾರ್ಷಲ್ ಅವರನ್ನು ಅದಕ್ಕೆ ಅನುಗುಣವಾಗಿ ನಿಯೋಜನೆ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮೂಲಗಳು ಮಾಹಿತಿ ನೀಡಿದೆ.

ಸಾವು ನೋವುಗಳಾಗಿಲ್ಲ: ಭಯ ಬೇಡ ಎಂದ ಭಾರತ

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರದಲ್ಲಿರುವ ಸೇನಾ ನೆಲೆಗಳನ್ನು ಗುರಿಯಾಗಿಸಲಾಗಿದೆ. ಈ ಸಂಬಂಧ ಪಾಕಿಸ್ತಾನ ದಾಳಿಗೆ ಮುಂದಾಗಿದೆ. ಆದರೆ ಪಾಕ್‌ನ ಬೆದರಿಕೆ ಮಣಿಸಲಾಗಿದೆ. ಕ್ಷಿಪಣಿ ದಾಳಿಯಲ್ಲಿ ಯಾವುದ ಸಾವು ನೋವು ಸಂಭವಿಸಿಲ್ಲ. ಈ ಬಗ್ಗೆ ಗೊಂದಲ ಅಥವಾ ಭಯ, ಆತಂಕ ಪಡುವ ಅಗತ್ಯವಿಲ್ಲ. ಜನರ ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+