ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಏರಿಕೆ -ಇಳಿಕೆ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 01: ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್ ಪಿಜಿ) ಸಿಲಿಂಡರ್ ಬೆಲೆ ಏರಿಕೆಯಾಗಿದ್ದರೆ, ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಸೋಮವಾರ ಇಳಿಕೆ ಮಾಡಲಾಗಿದೆ,

ಸಬ್ಸಿಡಿ ಸಹಿತ ಎಲ್ ಪಿಜಿ ಪ್ರತಿ ಸಿಲಿಂಡರ್ ಬೆಲೆ 1.93 ರು ಏರಿಕೆ ಕಂಡಿದೆ. 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 423.09 ರು ನಷ್ಟಿದೆ. ಈ ಮುಂಚೆ 421.16 ರು ಇತ್ತು. ಜುಲೈ 1 ರಂದು ಎಲ್ ಪಿಜಿ ಸಿಲಿಂಡರ್ ಬೆಲೆ 1.98 ರು ಏರಿಕೆ ಕಂಡಿತ್ತು.

ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ: ವಾರ್ಷಿಕ 12 ಸಿಲಿಂಡರ್ ಕೋಟಾ ನಂತರ ಪಡೆಯುವ 14.2ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ-ಪ್ರತಿ ಸಿಲಿಂಡರ್ ಮೇಲೆ 50.5 ರು ಕಡಿತಗೊಳಿಸಲಾಗಿದೆ.

Subsidised LPG price hiked non-subsidised LPG price cut

ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಎರಡು ಬಾರಿ ಏರಿಕೆ ಮಾಡಲಾಗಿತ್ತು. [ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?]

ಈ ನಡುವೆ ಸೀಮೆಎಣ್ಣೆ ಬೆಲೆ ದೆಹಲಿಯಲ್ಲಿ 15.46 ರು ಪ್ರತಿ ಲೀಟರ್ ನಂತೆ ದೊರೆಯುತ್ತಿದೆ.ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ದೆಹಲಿಯಲ್ಲಿ 537.50 ರು ನಿಂದ 487 ರು ಗೆ ಇಳಿದಿದೆ
ವಿಮಾನ ಇಂಧನ (ಎಟಿಎಫ್) ಬೆಲೆ ಸತತ ಐದನೇ ತಿಂಗಳು ಏರಿಕೆ ಮಾಡಲಾಗಿತ್ತು ಆದರೆ, ಈಗ ಶೇ 4.2ರಷ್ಟು ಇಳಿಕೆ ಕಂಡಿದೆ.

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The oil firms hiked the subsidised LPG price by Rs 1.93 per cylinder and cut prices of non-subsidised LPG, which consumers buy after exhausting their quota of 12, by Rs 50.5 per 14.2-kg cylinder.
Please Wait while comments are loading...