• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ದೇಶ ರಕ್ಷಣೆ ಕಾರ್ಯ, ಗಡಿ ಕಾನೂನು ಉಲ್ಲಂಘಿಸಿಲ್ಲ : ಸ್ವಾಮಿ

|

ನವದೆಹಲಿ, ಫೆಬ್ರವರಿ 26: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್ ನಲ್ಲಿ ಅಡಗಿದ್ದ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆ ಇಂದು ನಡೆಸಿದ ವೈಮಾನಿಕ ದಾಳಿ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ದಾಟಿ ಪಾಕಿಸ್ತಾನದ ಗಡಿಯಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯಲಾಗಿದೆ. ಆದರೆ ಇದದಿಂದ ಅಂತಾರಾಷ್ಟ್ರೀಯ ಗಡಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪವನ್ನು ಸ್ವಾಮಿ ತಳ್ಳಿಹಾಕಿದ್ದಾರೆ. ದಾಳಿ ನಡೆದಿರುವುದು ಪಾಕ್ ಆಕ್ರಮಿತ ಕಾಶ್ಮೀರ ನಮ್ಮದೇ ಅಲ್ಲಿ ನಾವೇ ದಾಳಿ ನಡೆಸುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಪುಲ್ವಾಮಾ ಪ್ರತೀಕಾರ LIVE: ನೂರಾರು ಜೈಷ್ ಉಗ್ರರ ಹತ್ಯೆ ಮಾಡಿದ್ದು ಸತ್ಯ

'ಪಾಕ್​ಆಕ್ರಮಿತ ಕಾಶ್ಮೀರವು ಮೊದಲು ನಮ್ಮದೇ ಆಗಿತ್ತು. ಈಗ ಅದು ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿದೆ ಅಷ್ಟೇ ನಮ್ಮದೇ ಜಾಗದಲ್ಲಿ ನಾವು ದಾಳಿ ಮಾಡಿದ್ದೇವೆ. ಇದರಲ್ಲಿ ತಪ್ಪೇನಿಲ್ಲ' ಎಂದು ತಿಳಿಸಿದ್ದಾರೆ.

ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?

ಅದು ಅವರ ಜಾಗವಾಗಿದ್ದರೂ, ನಾವೆಲ್ಲಾ ವಿಶ್ವಸಂಸ್ಥೆಯ ಚಾರ್ಟರ್​ನ ಸ್ವಯಂ ರಕ್ಷಣೆ ಅಡಿಯಲ್ಲಿದ್ದೇವೆ. ನಮ್ಮ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಅವರು, ಸಾವಿರ ಪೀಸ್​ಗಳನ್ನು ಭಾರತಕ್ಕೆ ನೀಡುತ್ತೇವೆ ಎಂದು ಹೇಳಿದ್ದರು. ಹಾಗಾಗಿ ನಮ್ಮ ಸರ್ಕಾರ 1000 ಬಾಂಬ್​ಗಳನ್ನು ಹಾಕಿ ಸರಿಯಾದ ಕೆಲಸವನ್ನೇ ಮಾಡಿದೆ ಎಂದಿದ್ದಾರೆ.

English summary
Senior BJP leader Suramanian Swamy on th cross-LoC strke said that Pakistan Occupied Kashmir is mostly our own territory and that you can always bomb your territory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X