ಕಪ್ಪೆ ಬೆವರು ನೆಕ್ಕುತ್ತಿದ್ದಾರೆ ವಿದ್ಯಾರ್ಥಿಗಳು! ಕಾರಣ ವಿಚಿತ್ರ

ನುರಪುರ (ಹಿಮಾಚಲ ಪ್ರದೇಶ), ಡಿಸೆಂಬರ್ 14: ವಿದ್ಯಾರ್ಥಿಗಳು ಕಪ್ಪೆಗಳ ಬೆವರನ್ನು ನೆಕ್ಕುತ್ತಿರುವ ವಿಚಿತ್ರ ಘಟನೆ ಹಿಮಾಚಲ ಪ್ರದೇಶದಲ್ಲಿ ವರದಿಯಾಗಿದೆ.

ಹೌದು, ಇಲ್ಲಿನ ನುರಪುರ ಪ್ರದೇಶದ ಕೆಲವು ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತ್ತಿಗಾಗಿ ಕಪ್ಪೆಗಳ ಬೆವರನ್ನು ನೆಕ್ಕುತ್ತಿದ್ದಾರೆ.

ಮೊದಲು ಕಪ್ಪೆಗಳನ್ನು ಚೆನ್ನಾಗಿ ಆಡಿಸಿ ಅವು ಸುಸ್ತಾಗುವಂತೆ ಮಾಡುತ್ತಾರೆ. ಕಪ್ಪೆಗಳು ದಣಿದು ಅವು ಬೆವರು ಪ್ರಾರಂಭಿಸಿದಾಗ ಅವನ್ನು ಹಿಡಿದು ನೆಕ್ಕುತ್ತಾರೆ. ಅವುಗಳ ಬೆವರು ನೆಕ್ಕಿ ಅಮಲು ಪಡೆಯುತ್ತಿದ್ದಾರೆ ವಿದ್ಯಾರ್ಥಿಗಳು.

Students licking sweat of Frogs to get a high

ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವ ಬಗ್ಗೆ ನುರಪುರ ಕ್ಷೇತ್ರದ ಶಾಸಕರ ರಾಕೇಶ್ ಪಠಾನಿಯಾ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ನುರಪುರ ಬಳಿಯ ಕಾಲೇಜಿನ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಗೆ ಕಪ್ಪೆಯೊಂದಿಗೆ ಆಡದಂತೆ ಹೇಳಿದ್ದಾರೆ, ಇದರಿಂದ ಸಿಟ್ಟಾದ ವಿದ್ಯಾರ್ಥಿ ಪ್ರಾಂಶುಪಾಲರ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆಯ ತನಿಖೆ ನಡೆಸಿದಾಗ ವಿದ್ಯಾರ್ಥಿಗಳು ಕಪ್ಪೆಗಳನ್ನು ಅಮಲಿನ ಪದಾರ್ಥವಾಗಿ ಬೆಳಕಿಗೆ ಬಂದಿರುವುದು ಗೊತ್ತಾಗಿದೆ.

ಕಾಡುಗಳಿಂದ ಆವೃತವಾಗಿರುವ ಹಿಮಾಚಲ ಪ್ರದೇಶದಲ್ಲಿ ಕಪ್ಪೆಗಳು ಯಥೇಚ್ಛವಾಗಿ ದೊರಕುತ್ತವೆ ಹಾಗಾಗಿ ಮಾದಕ ವ್ಯಸನಿಗಳು ಕಡಿಮೆ ಖರ್ಚಿನ ಇವುಗಳನ್ನೇ ಮಾದಕ ವ್ಯಸಕ್ಕೆ ಬಳಸುತ್ತಿದ್ದಾರೆ.

ಕಪ್ಪೆ ನೆಕ್ಕುವ ಪ್ರಕರಣವನ್ನು ಹಿಮಾಚಲ ಪ್ರದೇಶ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಶಾಲಾ-ಕಾಲೇಜುಗಳಿಗೆ ಎಚ್ಚರಿಕೆಗಳನ್ನು ರವಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+