ಫೋಟೋ ತೆಗೆಯದ ವಿದ್ಯಾರ್ಥಿ ಮೇಲೆ ಗೋ ರಕ್ಷಕರ ಅಟ್ಟಹಾಸ
ಹರ್ಯಾಣ, ಜೂನ್ 2: ಕ್ಯಾಮೆರಾ ಹಿಡಿದಿದ್ದ ವಿದ್ಯಾರ್ಥಿಯನ್ನು ಪತ್ರಕರ್ತ ಎಂದುಕೊಂಡ ಗೋ ರಕ್ಷಕರು ಆತ ಫೊಟೋ ತೆಗೆಯಲಿಲ್ಲ ಎಂದು ಥಳಿಸಿದ ಘಟನೆ ಹರ್ಯಾಣದಲ್ಲಿ ನಡೆದಿದೆ.
ಕೇರಳದಲ್ಲಿ ಕರುವಿನ ತಲೆ ಕಡಿದ ಕಾಂಗ್ರೆಸ್ ನಾಯಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಗೋ ರಕ್ಷಾ ಸೇವಾ ದಳದ ಕಾರ್ಯಕರ್ತರು ಹರ್ಯಾಣದ ಸೋನೆಪಾಟ್ ಜಿಲ್ಲೆಯ ಗೋಹಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕ್ಯಾಮೆರಾ ಹಿಡಿದಿದ್ದ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿಯನ್ನು ಪತ್ರಕರ್ತ ಎಂದುಕೊಂಡ ಗೋ ರಕ್ಷಕರು ಆತ ಫೋಟೋ ಕ್ಲಿಕ್ಕಿಸಿಲ್ಲ ಎಂದು ತಗಾದೆ ತೆಗೆದಿದ್ದಾರೆ.

ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದು ಕೊನೆಗೆ ಗೋ ರಕ್ಷಕ ದಳದ ಕಾರ್ಯಕರ್ತರು ವಿದ್ಯಾರ್ಥಿಯನ್ನು ಹಿಗ್ಗಾ ಮಗ್ಗಾ ಥಳಿಸಿದ್ದಾರೆ. ಪರಿಣಾಮ ವಿದ್ಯಾರ್ಥಿ ಶಿವರಾಂ ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಘಟನೆಗೆ 19 ವರ್ಷ ಮೋಹಿತ್ ಪ್ರಮುಖ ಕಾರಣ ಎನ್ನಲಾಗಿದ್ದು ಆತನನ್ನು ಬಂಧಿಸಲಾಗಿದೆ. ಶಿವರಾಂನನ್ನು ಥಳಿಸಿದ ಆತನ ಇನ್ನಿಬ್ಬರು ಸಂಬಂಧಿಕರು ತಲೆ ಮರೆಸಿಕೊಂಡಿದ್ದಾರೆ.












Click it and Unblock the Notifications