ಉದ್ಘಾಟನೆಯಾಗುವ ಮುನ್ನವೇ ವಂದೇ ಭಾರತ್ ಮೇಲೆ ಕಲ್ಲೂ ತೂರಾಟ
ಅಮರಾವತಿ, ಜನವರಿ 12: ಜನವರಿ 19ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುವ ಮುನ್ನವೇ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ವಂದೇ ಭಾರತ್ ರೈಲಿನ ನಿರ್ವಹಣೆ ವೇಳೆ ಬುಧವಾರ ಕಲ್ಲು ತೂರಾಟ ನಡೆದಿದೆ.
ಜನವರಿ 19 ರಂದು ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದರು. ವಿಶಾಖಪಟ್ಟಣಂನ ಕಂಚರಪಾಲೆಂ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕೋಚ್‌ನ ಮೇಲೆ ಕಲ್ಲು ತೂರಿದ್ದರಿಂದ ಗಾಜಿನ ಫಲಕಕ್ಕೆ ಹಾನಿಯಾಗಿದೆ. ಪ್ರಾರಂಭವಾದ ಕೇವಲ ನಾಲ್ಕು ದಿನಗಳಲ್ಲಿ ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ರೈಲಿಗೆ ಕಲ್ಲು ತೂರಾಟ ನಡೆದ ಒಂದು ವಾರದ ನಂತರ ಈ ಘಟನೆ ಸಂಭವಿಸಿದೆ.
ಈ ಬಗ್ಗೆ ಡಿವಿಜನಲ್ ರೈಲ್ವೇ ಮ್ಯಾನೇಜರ್ (ಡಿಆರ್‌ಎಂ) ಅನುಪ್ ಕುಮಾರ್ ಸೇತುಪತಿ ಪ್ರಕಾರ, "ವಂದೇ ಭಾರತ್ ರೈಲು ನಿರ್ವಹಣೆ ಮತ್ತು ರೈಲು ಓಡಾಟಕ್ಕಾಗಿ ವಿಶಾಖಪಟ್ಟಣವನ್ನು ತಲುಪುತ್ತಿದ್ದಂತೆ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದರು. ರೈಲು ಬೋಗಿಗಳು ನಿರ್ವಹಣೆಗಾಗಿ ವಿಶಾಖಪಟ್ಟಣಂ ನಿಲ್ದಾಣ ಕೋಚ್ ಕೇರ್ ಸೆಂಟರ್‌ಗೆ ಹೋಗುತ್ತಿದ್ದಾಗ ರೈಲು ಬೋಗಿಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ತಿಳಿಸಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಿದವರನ್ನು ಕಂಡು ಹಿಡಿಯಲು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಲಾಗುತ್ತಿದೆ ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಅವರು ಹೇಳಿದರು. "ಇದು ಅತ್ಯಂತ ದುರದೃಷ್ಟಕರ ಘಟನೆ. ಕಂಚರಪಾಲೆಂ ಬಳಿ ಅಪರಿಚಿತರು ಬೋಗಿಗೆ ಕಲ್ಲು ತೂರಾಟ ನಡೆಸಿದ್ದರಿಂದ ಹೊಚ್ಚಹೊಸ ವಂದೇ ಭಾರತ್ ರೈಲಿನ ಕೋಚ್ ಗಾಜು ಒಡೆದಿದೆ. ನಾವು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಜನರದ್ದು
ನಮ್ಮ ಆರ್‌ಪಿಎಫ್ ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ. ಒಮ್ಮೆ ಅವರು ಸಿಕ್ಕಿಬಿದ್ದರೆ ಶಿಕ್ಷೆ ನೀಡುತ್ತಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲ್ವೆ ಸಾರ್ವಜನಿಕರ ಹಣಕ್ಕೆ ಸೇರಿದ್ದಾಗಿದೆ. ಕಲ್ಲು ತೂರಾಟದ ಕೆಲಸಗಳನ್ನು ಮಾಡುವ ಜನರಿಗೆ ನಾನು ಮನವಿ ಮಾಡುತ್ತೇನೆ. ಕಿಟಕಿಯ ಗಾಜಿನ ಬೆಲೆ ಸುಮಾರು ಒಂದು ಲಕ್ಷ ಎಂದು ಅಂದಾಜಿಸಲಾಗಿದೆ. ಹಾಗಾಗಿ ಕಲ್ಲು ಎಸೆಯಬೇಡಿ ಎಂದು ಡಿಆರ್‌ಎಂ ಕೋರಿದ್ದಾರೆ.

ಜನವರಿ 3 ರಂದು ಎರಡನೇ ದಾಳಿ
ಇದಕ್ಕೂ ಮುನ್ನ ಜನವರಿ 2 ರಂದು, ಮಾಲ್ಡಾ ಬಳಿಯ ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ರೈಲಿಗೆ ಕಲ್ಲು ತೂರಿದ್ದರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಿಟಕಿ ಗಾಜುಗಳು ಒಡೆದಿದ್ದವು. ಜನವರಿ 3 ರಂದು ಎರಡನೇ ದಾಳಿ ನಡೆದ ಒಂದು ದಿನದ ನಂತರ, ಡಾರ್ಜಿಲಿಂಗ್‌ನ ಫನ್‌ಸಿಡೆವಾ ಪ್ರದೇಶದ ಬಳಿ ಎರಡು ಬೋಗಿಗಳ ಮೇಲೆ ಕಲ್ಲು ತೂರಾಟ ನಡೆದ ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಎರಡು ಕಿಟಕಿ ಗಾಜುಗಳು ಹಾನಿಗೊಳಗಾಗಿದ್ದವು.

ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣದಲ್ಲಿ ₹ 2,400 ಕೋಟಿ ಮೊತ್ತದ ವಿವಿಧ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಮತ್ತು ಹೈದರಾಬಾದ್ ಮತ್ತು ವಿಜಯವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ಸೋಮವಾರ ಬಿಜೆಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸಿಕಂದರಾಬಾದ್ ರೈಲು ನಿಲ್ದಾಣದಿಂದ ಪ್ರಧಾನಿ ಮೋದಿ ಅವರು ರೈಲಿಗೆ ಫ್ಲ್ಯಾಗ್ ಆಫ್ ಮಾಡಲು ನಿರ್ಧರಿಸಿದ್ದರು. ಇದು ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ಸರಿಸುಮಾರು ಎಂಟು ಗಂಟೆಗಳಲ್ಲಿ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿತ್ತು. ರೈಲಿಗೆ ಕಲ್ಪಿಸಲಾದ ಮಧ್ಯಂತರ ನಿಲುಗಡೆಗಳಲ್ಲಿ ವಾರಂಗಲ್, ಖಮ್ಮಂ, ವಿಜಯವಾಡ ಮತ್ತು ರಾಜಮಂಡ್ರಿ ಸೇರಿವೆ.

ದುಷ್ಕರ್ಮಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ
ಯಾರೋ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಇಂದು ಚೆನ್ನೈನಿಂದ ಹೊಚ್ಚ ಹೊಸ ರೈಲು ಬಂದಿತ್ತು. ಘಟನೆ ನಡೆದಾಗ ಪರಿಶೀಲನೆ ನಡೆಸಲಾಯಿತು. ಇದು ಮುಸ್ಸಂಜೆಯಲ್ಲಿ ಘಟನೆ ನಡೆದಿದೆ. ನಮಗೆ ದುಷ್ಕರ್ಮಿಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ, ನಾವು ಘಟನೆಯನ್ನು ಪರಿಶೀಲಿಸುತ್ತಿದ್ದೇವೆ. ಅವರು ಈ ರೀತಿ ವರ್ತಿಸುತ್ತಿದ್ದರೆ, ಅದು ದುರದೃಷ್ಟಕರ ಎಂದು ಡಿಆರ್‌ಎಂ ಅನುಪ್ ಕುಮಾರ್ ಸೇತುಪತಿ ಹೇಳಿದ್ದಾರೆ.












Click it and Unblock the Notifications