ಭೀಕರ ಬಿರುಗಾಳಿಗೆ ನೆಲಕಚ್ಚಿದ ಮಹಾಕಾಲ್ ಕಾರಿಡಾರ್‌ನ ಸಪ್ತಋಷಿಗಳ ಪ್ರತಿಮೆಗಳು, ಇಬ್ಬರು ಬಲಿ
ಭೋಪಾಲ್, ಮೇ. 29: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿರುವ ಮಹಾಕಾಲ್ ಲೋಕ ಕಾರಿಡಾರ್ ಭಾನುವಾರ ಮಧ್ಯಾಹ್ನ ಬೀಸಿದ ಬಿರುಗಾಳಿಯಿಂದ ಸಪ್ತಋಷಿಗಳ ಪ್ರತಿಮೆಗಳಿಗೆ ಹಾನಿಯಾಗಿದೆ. ಏಳು ಪ್ರತಿಮೆಗಳಲ್ಲಿ ಆರು ಸ್ಥಳಾಂತರಗೊಂಡಿವೆ ಮತ್ತು ಎರಡು ಹಾನಿಗೊಳಗಾಗಿವೆ. ಇದರ ಜೊತೆಗೆ ಬಿರುಗಾಳಿಗೆ ಇಬ್ಬರು ಬಲಿಯಾಗಿದ್ದಾರೆ.
ಬಿರುಗಾಳಿಯಿಂದ ಪ್ರತಿಮೆಗಳಲ್ಲಿ ಕೆಲವು ನೆಲಕ್ಕೆ ಉರುಳಿದ್ದರಿಂದ ಕೈಗಳು ಮತ್ತು ತಲೆಗಳು ಮುರಿದಿವೆ. 2022 ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಮಹಾಕಾಲ್ ಲೋಕ ದೇವಾಲಯದ ಕಾರಿಡಾರ್‌ನಲ್ಲಿ ಘಟನೆ ಸಂಭವಿಸಿದೆ. ದೇವಾಲಯದ ಕಾರಿಡಾರ್‌ನಲ್ಲಿ ಆರು ಪ್ರತಿಮೆಗಳನ್ನು ಅವುಗಳ ಪೀಠದಿಂದ ಸ್ಥಳಾಂತರಿಸಿರುವುದರಿಂದ ಯಾರಿಗೂ ಗಾಯಗಳಾಗಿಲ್ಲ.

ಉಜ್ಜಯಿನಿ ಜಿಲ್ಲೆಯಲ್ಲಿ ಭಾರಿ ಬಿರುಗಾಳಿ ಬೀಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಉಜ್ಜಯಿನಿ ನಗರದಲ್ಲಿ ಬಿರುಗಾಳಿಗೆ ಮರವೊಂದು ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮತ್ತೋರ್ವ ನಾಗಡಾದಲ್ಲಿ ಮನೆಯ ಗೋಡೆ ಕುಸಿದು ಮೃತಪಟ್ಟಿದ್ದಾನೆ. ಇದೇ ಜಿಲ್ಲೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಸುಮಾರು 50 ಮರಗಳು ಹಾಗೂ ಹಲವು ವಿದ್ಯುತ್ ಕಂಬಗಳು ಧರೆಗುರುಳಿವೆ. ಮಹಾಕಾಲ್ ಲೋಕದಲ್ಲಿ 155 ವಿಗ್ರಹಗಳಿವೆ. ಹಾನಿಗೊಳಗಾದ ಮೂರ್ತಿಗಳನ್ನು ಗುತ್ತಿಗೆದಾರರೇ ದುರಸ್ತಿಗೊಳಿಸುತ್ತಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಉಜ್ಜಯಿನಿ ಜಿಲ್ಲಾಧಿಕಾರಿ ಮತ್ತು ವಿಭಾಗೀಯ ಆಯುಕ್ತರೊಂದಿಗೆ ಈ ಕುರಿತು ಪರಿಶೀಲಿಸುವಂತೆ ತಿಳಿಸಿದ್ದಾರೆ.

"ಸ್ಥಳಾಂತರಗೊಂಡ ಆರು ಪ್ರತಿಮೆಗಳಲ್ಲಿ ಎರಡು ಪೀಠಗಳಿಂದ ಸ್ಥಳಾಂತರಗೊಂಡ ನಂತರ ಹಾನಿಗೊಳಗಾಗಿವೆ. ಈ ಪ್ರತಿಮೆಗಳು ಐದು ವರ್ಷಗಳ ದೋಷದ ಹೊಣೆಗಾರಿಕೆ ಅವಧಿಯ ಆರಂಭಿಕ ಹಂತದಲ್ಲಿದ್ದ ಕಾರಣ, ಅವುಗಳನ್ನು ತಯಾರಿಸಿದ ಮತ್ತು ಸ್ಥಾಪಿಸಿದ ಕಂಪನಿಯು ಅವುಗಳನ್ನು ಶೀಘ್ರದಲ್ಲಿ ಬದಲಾಯಿಸುತ್ತದೆ" ಎಂದು ಉಜ್ಜಯಿನಿ ಜಿಲ್ಲಾಧಿಕಾರಿ ಕುಮಾರ್ ಪುರುಷೋತ್ತಮ್ ಹೇಳಿದ್ದಾರೆ.
"ನಾವು ಕ್ರೇನ್ ಸಹಾಯದಿಂದ ಸ್ಥಳಾಂತರಗೊಂಡ ಮತ್ತು ಹಾನಿಗೊಳಗಾದ ಪ್ರತಿಮೆಗಳನ್ನು ಸ್ಥಳಾಂತರಿಸಿದ್ದೇವೆ. ಅದೇ ಎಫ್‌ಆರ್‌ಪಿ (ಫೈಬರ್-ರೀನ್‌ಫೋರ್ಸ್ಡ್ ಪ್ಲಾಸ್ಟಿಕ್) ವಸ್ತುಗಳಿಂದ ಮಾಡಿದ ಇತರ ಪ್ರತಿಮೆಗಳ ಲೆಕ್ಕಪರಿಶೋಧನೆಯನ್ನು ಶೀಘ್ರವಾಗಿ ಮಾಡಲಾಗುತ್ತದೆ. ಶೀಘ್ರದಲ್ಲೇ ಆರು ಪ್ರತಿಮೆಗಳನ್ನು ಸರಿಪಡಿಸಲಾಗುವುದು" ಎಂದು ಹೇಳಿದ್ದಾರೆ.
ದೇವಸ್ಥಾನದ ಕಾರಿಡಾರ್ ನಿರ್ಮಾಣ ಕಾಮಗಾರಿಯಲ್ಲಿ ಪ್ರಮುಖ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದ್ದು, ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಕಾಂಗ್ರೆಸ್ ಯಾವುದೇ ಸತ್ಯವನ್ನು ನೀಡದೆ ರಾಜಕೀಯ ಮಾಡುತ್ತಿದೆ ಮತ್ತು ಗೊಂದಲವನ್ನು ಹರಡುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ದೇಶದ 12 'ಜ್ಯೋತಿರ್ಲಿಂಗ'ಗಳಲ್ಲಿ ಒಂದಾದ ಮಹಾಕಾಳೇಶ್ವರ ದೇವಸ್ಥಾನದ ಸುತ್ತಲಿನ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಪುನರುಜ್ಜೀವನಗೊಂಡಿರುವ ಹಳೆಯ ರುದ್ರಸಾಗರ ಕೆರೆಯನ್ನು ದೇಶದಲ್ಲೇ ಅತಿ ಉದ್ದದ ಕಾರಿಡಾರ್ ಎಂದು ಹೇಳಲಾಗುತ್ತದೆ. ಸ್ಥಳೀಯ ಹವಾಮಾನ ಪರಿಸ್ಥಿತಿಗಳ ಕುರಿತು ಮಾತನಾಡಿದ ಭಾರತೀಯ ಹವಾಮಾನ ಇಲಾಖೆಯ ಭೋಪಾಲ್ ಕೇಂದ್ರದ ಕರ್ತವ್ಯ ಅಧಿಕಾರಿ ಜೆ ಪಿ ವಿಶ್ವಕರ್ಮ, ಭಾನುವಾರದ ಮುನ್ಸೂಚನೆಯು ಉಜ್ಜಯಿನಿಯ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications