"ಕೊರೊನಾ ಲಸಿಕೆ ಅಭಾವಕ್ಕೆ ರಾಜ್ಯ ಸರ್ಕಾರಗಳೇ ಹೊಣೆ"
ನವದೆಹಲಿ,
ಮೇ 27: ದೇಶದಲ್ಲಿ ಕೊರೊನಾ ಸೋಂಕಿಗೆ ಲಸಿಕೆಗಳ ಅಭಾವ ಎದುರಾಗಿದೆ. ಆದರೆ ಲಸಿಕೆಗಳ ಅಸಮರ್ಪಕತೆ ಕುರಿತು ತಿಳಿದಿದ್ದರೂ ರಾಜ್ಯಗಳು ಹೆಚ್ಚಿನ ಮಟ್ಟದಲ್ಲಿ ಲಸಿಕೆ ಒದಗಿಸುವಂತೆ ಒತ್ತಾಯಿಸುತ್ತಿವೆ ಎಂದು ಭಾರತದ ಕೋವಿಡ್ 19 ಉನ್ನತ ಸಲಹೆಗಾರ, ನೀತಿ ಆಯೋಗ ಸದಸ್ಯ ಡಾ. ವಿ.ಕೆ ಪೌಲ್ ಹೇಳಿದ್ದಾರೆ. id="toptextpromo"> id='are-slot-1' class='oiad oi-axt oiadv'>ದೇಶದಲ್ಲಿನ
ಕೊರೊನಾ ಲಸಿಕೆಗಳ ಲಭ್ಯತೆ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರದಿಂದ ರಾಜ್ಯಗಳಿಗೆ ಈ ಬಾರಿ ಜನವರಿ ತಿಂಗಳಿನಿಂದ ಏಪ್ರಿಲ್ ತಿಂಗಳವರೆಗೂ ಲಸಿಕೆ ಪೂರೈಕೆ ಉತ್ತಮವಾಗಿತ್ತು. ಆದರೆ ಮೇ ತಿಂಗಳಿನಲ್ಲಿ ಪೂರೈಕೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಲಸಿಕೆಗಳ ಪೂರೈಕೆ ಸಂಬಂಧ ಕೇಂದ್ರ ಸರ್ಕಾರ ತನ್ನೆಲ್ಲಾ ಪ್ರಯತ್ನಗಳನ್ನು ಮಾಡಿದೆ. ಲಸಿಕೆ ಉತ್ಪಾದಕರನ್ನು ಗುರುತಿಸುವುದು, ಅನುಮೋದನೆ, ಉತ್ಪಾದನೆ ಹೆಚ್ಚಳ, ವಿದೇಶಿ ಲಸಿಕೆಗಳಿಗೆ ಅನುಮೋದನೆ ಈ ಎಲ್ಲಾ ದಾರಿಗಳಲ್ಲಿಯೂ ಪ್ರಯತ್ನಿಸಿದೆ ಎಂದು ಸಮರ್ಥಿಸಿಕೊಂಡರು. ಕೊರೊನಾ ಲಸಿಕೆಗಳ ಸತ್ಯಾ ಮಿಥ್ಯದ ಕುರಿತು ದಾಖಲೆ ಬಿಡುಗಡೆ ಮಾಡುವ ಸಂದರ್ಭ ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ... id='are-slot-2' class='oiad oi-axt oiadv'>
"ರಾಜ್ಯಗಳಿಗೆ ತನ್ನ ಸಂಗ್ರಹದಲ್ಲಿದ್ದ ಲಸಿಕೆಗಳನ್ನು ನೀಡಿದೆ"
"ತುರ್ತು ಅಗತ್ಯವಿರುವವರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ತನ್ನ ಸಂಗ್ರಹದಲ್ಲಿದ್ದ ಎಲ್ಲಾ ಲಸಿಕೆಗಳನ್ನು ಸರಬರಾಜು ಮಾಡಿದೆ. ಈ ವಿಷಯ ರಾಜ್ಯಗಳಿಗೂ ತಿಳಿದಿದೆ. ರಾಜ್ಯಗಳಿಗೂ ತಮ್ಮ ಕೋರಿಕೆ ಮೇಲೆ, ತಾವಾಗಿಯೇ ಲಸಿಕೆ ಖರೀದಿಸಲು ಸೂಚಿಸಿದೆ. ದೇಶದ ಲಸಿಕೆ ಉತ್ಪಾದನಾ ಸಾಮರ್ಥ್ಯದ ಕುರಿತು ರಾಜ್ಯ ಸರ್ಕಾರಗಳಿಗೆ ತಿಳಿದಿದೆ. ವಿದೇಶಗಳಿಂದ ಲಸಿಕೆ ಪೂರೈಸಿಕೊಳ್ಳುವ ಕಷ್ಟಗಳ ಕುರಿತು ಅರಿವಿದೆ. ಆದರೂ ಕೇಂದ್ರದ ಮೇಲೆ ಒತ್ತಡವಿದೆ" ಎಂದು ಹೇಳಿದರು.

"ಇಡೀ ವಿಶ್ವದಲ್ಲೇ ಲಸಿಕೆ ಅಭಾವವಿದೆ"
ಮೂರು ತಿಂಗಳಿನಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಕೊರೊನಾ ವಿರುದ್ಧದ ಹೋರಾಟದಲ್ಲಿದ್ದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯನ್ನು ಸಮರ್ಪಕವಾಗಿ ಕೊಡದ ರಾಜ್ಯಗಳು ಲಸಿಕಾ ಕೇಂದ್ರಗಳನ್ನು ತೆರೆದವು ಹಾಗೂ ವಿಕೇಂದ್ರೀಕರಣ ಮಾಡಿದವು. ಆರೋಗ್ಯ ರಾಜ್ಯದ ವಿಷಯವಾಗಿದೆ ಮತ್ತು ರಾಜ್ಯಗಳ ಮನವಿ ಮೇರೆಗೆ ಉದಾರೀಕೃತ ಲಸಿಕಾ ನೀತಿಯಂತೆ, ಲಸಿಕೆ ವಿಷಯದಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಲಾಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಲಸಿಕೆಗಳ ಲಭ್ಯತೆ ಕುರಿತು ಮೊದಲ ದಿನದಿಂದಲೇ ರಾಜ್ಯಗಳಿಗೆ ಹೇಳುತ್ತಾ ಬಂದಿದ್ದೇವೆ. ಇಡೀ ವಿಶ್ವದಲ್ಲಿಯೇ ಲಸಿಕೆಗಳ ಪೂರೈಕೆ ಕಡಿಮೆಯಾಗಿವೆ. ಅವುಗಳನ್ನು ಕಡಿಮೆ ಅವಧಿಯಲ್ಲಿ ಉತ್ಪಾದಿಸುವುದು ಸುಲಭವಲ್ಲ ಎಂದು ಹೇಳಿದ್ದಾರೆ.

ಮೇ ತಿಂಗಳಲ್ಲಿ ಲಸಿಕೆ ನೀಡಿದ ಪ್ರಮಾಣ ಇಳಿಕೆ
ಮೇ ತಿಂಗಳಿನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಅನುಮತಿ ನೀಡಲಾಯಿತು. ಏಪ್ರಿಲ್ ಮೊದಲ ವಾರದಲ್ಲಿ ನೀಡಿದ ಲಸಿಕೆ ಪ್ರಮಾಣವು 2.5 ಕೋಟಿ ಡೋಸ್‌ಗಳಿತ್ತು. ಇದು ಮೇ ಮೊದಲ ವಾರಕ್ಕೆ 1.2 ಕೋಟಿಗೆ ಇಳಿಯಿತು. ಮೇ 22-28ರಲ್ಲಿ 87 ಲಕ್ಷಕ್ಕೆ ಇಳಿಯಿತು ಎಂದು ತಿಳಿಸಿದ್ದಾರೆ. ಈ ತಿಂಗಳು ಕೋವಿಶೀಲ್ಡ್ ಎರಡನೇ ಡೋಸ್ ಅನ್ನು ಮೂರು ತಿಂಗಳು ವಿಳಂಬಗೊಳಿಸಲು ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದರು.

"ವಿಜ್ಞಾನಿಗಳ ಮಾಹಿತಿ ಆಧರಿಸಿ ಮಕ್ಕಳಿಗೆ ಲಸಿಕೆ ಪ್ರಯೋಗ"
ಈ ಅಕ್ಟೋಬರ್ ವೇಳೆಗೆ ಕೇಂದ್ರ ಹತ್ತು ಕೋಟಿ ಡೋಸ್ ಗಳ ಕೋವ್ಯಾಕ್ಸಿನ್ ಲಸಿಕೆಗಳನ್ನು ಪಡೆಯಲಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಉತ್ಪಾದನೆಯನ್ನು ತಿಂಗಳಿಗೆ ಒಂದು ಕೋಟಿಯಷ್ಟು ಏರಿಸಿ ಅಕ್ಟೋಬರ್ ವೇಳೆಗೆ 10 ಕೋಟಿಗೆ ಲಭ್ಯವಾಗುವಂತೆ ಹೆಚ್ಚಿಸಲಾಗುವುದು. ಸೆರಂ ಇನ್‌ಸ್ಟಿಟ್ಯೂಟ್ ಕೂಡ ಸರ್ಕಾರದ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಹೆಚ್ಚಿಸಿದ್ದು, ತಿಂಗಳಿಗೆ 6.5 ಕೋಟಿ ಡೋಸ್‌ಗಳಿಂದ 11.0ಕೋಟಿ ಡೋಸ್‌ಗಳಿಗೆ ಉತ್ಪಾದನೆ ಹೆಚ್ಚಿಸಿದೆ ಎಂದು ಮಾಹಿತಿ ನೀಡಿದರು.
ಮಕ್ಕಳ ಮೇಲಿನ ಲಸಿಕೆ ಪ್ರಯೋಗ ಶೀಘ್ರವೇ ಆರಂಭವಾಗಲಿದೆ. ಆದರೆ ಮಕ್ಕಳಿಗೆ ಮೂರನೇ ಅಲೆಯಲ್ಲಿ ಕೊರೊನಾ ಸೋಂಕು ತಗುಲುತ್ತದೆ ಎಂಬ ಆತಂಕಕಾರಿ ಸುದ್ದಿಗಳ ಆಧಾರದ ಮೇಲೆ ಲಸಿಕೆ ನೀಡಲು ಸಾಧ್ಯವಿಲ್ಲ. ವಿಜ್ಞಾನಿಗಳು ನೀಡುವ ಮಾಹಿತಿ ಆಧಾರದ ಮೇಲೆ ಈ ಪ್ರಯೋಗ ನಡೆಸಲಾಗುವುದು ಎಂದು ತಿಳಿಸಿದರು.












Click it and Unblock the Notifications