Get Updates
Get notified of breaking news, exclusive insights, and must-see stories!

ಪ್ರಧಾನಿ ಮೋದಿ ರೋಡ್‌ ಶೋ ವೇಳೆ ಕುಸಿದ ವೇದಿಕೆ; ಏಳು ಮಂದಿಗೆ ಗಾಯ

ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಬಲ್ಪುರದಲ್ಲಿ ರೋಡ್ ಶೋ ನಡೆಸುವ ಮೂಲಕ ಮಧ್ಯಪ್ರದೇಶದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಪ್ರಧಾನಮಂತ್ರಿಯವರ ರೋಡ್ ಶೋ ನೋಡಲು ಸಾವಿರಾರು ಜನ ಸೇರಿದ್ದರು. ಮೋದಿ ರೋಡ್ ಶೋ ಸಂದರ್ಭದಲ್ಲಿ ಜಬಲ್ಪುರದಲ್ಲಿ ವೇದಿಕೆ ಕುಸಿದ ಪರಿಣಾಮ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಗರ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಪಾಂಡೆ ಘಟನೆಯ ಬಗ್ಗೆ ಮಾಹಿತಿ ನೀಡಿ, 'ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ವೇಳೆ ರಾಂಪುರ-ಗೋರಖ್‌ಪುರ ರಸ್ತೆಯ ರಸ್ತೆ ಬದಿಯಲ್ಲಿ ಸ್ವಾಗತ ವೇದಿಕೆ ನಿರ್ಮಿಸಲಾಗಿತ್ತು. ಪ್ರಧಾನ ಮಂತ್ರಿಯವರ ವಾಹನವು ವೇದಿಕೆಯ ಮುಂದೆ ಹಾದುಹೋದ ತಕ್ಷಣ, ಜನರು ಅವರನ್ನು ನೋಡಲು ವೇದಿಕೆಯ ಮೇಲೆ ಹತ್ತಿದರು, ಇದರಿಂದಾಗಿ ವೇದಿಕೆ ಕುಸಿದಿದೆ.' ಎಂದು ಹೇಳಿದ್ದಾರೆ.

Stage Collapse During PM Modi s Jabalpur Roadshow Leaves Seven Injured

"ಪ್ರಧಾನಿ ಬೆಂಗಾವಲು ಪಡೆ ಮುಂದೆ ಸಾಗಿದ ಕೂಡಲೇ ವೇದಿಕೆ ಕುಸಿದುಬಿತ್ತು. ಈ ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಓರ್ವ ಬಾಲಕಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಮೂಳೆ ಮುರಿತವಾಗಿದೆ. ಮೂವರು ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯಿಂದಾಗಿ ರೋಡ್ ಶೋ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಸಿಬ್ಬಂದಿ ತಕ್ಷಣ ಪರಿಸ್ಥಿತಿಯನ್ನು ಹತೋಟಿಗೆ ತಂದರು" ಎಂದು ಸಿಎಸ್‌ಪಿ ಪಾಂಡೆ ತಿಳಿಸಿದ್ದಾರೆ.

ಮೋದಿಗೆ ಅದ್ದೂರಿ ಸ್ವಾಗತ

ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಲು ಮಧ್ಯಪ್ರದೇಶಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ರೋಡ್ ಶೋ ವೇಳೆ ಜೈ ಶ್ರೀ ರಾಮ್ ಘೋಷಣೆ ಕೂಗುವ ಮೂಲಕ ಮೋದಿ ಅವರಿಗೆ ಬೆಂಬಲ ನೀಡಿದರು.

ಪ್ರಧಾನಿ ಮೋದಿಯವರ ರೋಡ್ ಶೋ ಭಗತ್ ಸಿಂಗ್ ಚೌಕದಿಂದ ಸಂಜೆ 6.40ಕ್ಕೆ ಪ್ರಾರಂಭವಾಯಿತು. ರೋಡ್‌ಶೋ ಸಮಯದಲ್ಲಿ, ಪ್ರಧಾನಿ ವಾಹನದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್, ರಾಜ್ಯ ಸರ್ಕಾರದ ಸಚಿವರು ಮತ್ತು ಸ್ಥಳೀಯ ಶಾಸಕ ರಾಕೇಶ್ ಸಿಂಗ್ ಮತ್ತು ಲೋಕಸಭಾ ಅಭ್ಯರ್ಥಿ ಆಶಿಶ್ ದುಬೆ ಕೂಡ ಇದ್ದರು.

ರೋಡ್‌ಶೋ ವೇಳೆ ರಸ್ತೆಬದಿಯ ಮನೆಗಳ ಬಾಲ್ಕನಿ ಹಾಗೂ ಮೇಲ್ಛಾವಣಿಯಲ್ಲಿ ಹೆಚ್ಚಿನ ಜನರು ಸೇರಿದ್ದರು. ರೋಡ್ ಶೋದ ಹಲವು ಸ್ಥಳಗಳಲ್ಲಿ, ಮಹಿಳೆಯರು ಸಾಂಪ್ರದಾಯಿಕ ನೃತ್ಯ ಮತ್ತು ಪ್ರಧಾನಿ ಮೋದಿಯವರಿಗೆ ಆರತಿ ಬೆಳಗಿದರು.

ಮಧ್ಯಪ್ರದೇಶದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ, ಮಹಾಕೋಶ ಪ್ರದೇಶದ ನಾಲ್ಕು ಲೋಕಸಭಾ ಸ್ಥಾನಗಳು ಸೇರಿದಂತೆ 6 ಸ್ಥಾನಗಳಿಗೆ ಏಪ್ರಿಲ್ 19 ರಂದು ಮತದಾನ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+