Srisailam Tragedy: ಶ್ರೀಶೈಲಂನಲ್ಲಿ ಒಂದೇ ಕುಟುಂಬದ ಐವರು ಆತ್ಮಹ*: 3 ದಿನಗಳ ನಂತರ ಈ ಮೂಲಕ ಬೆಳಕಿಗೆ ಬಂದ ಘಟನೆ
Srisailam Tragedy: ಆಂಧ್ರಪ್ರದೇಶದ ಪವಿತ್ರ ಶೈವ ದೇವಾಲಯ ಹಾಗೂ ಜ್ಯೋತಿರ್ಲಿಂಗ ಪುಣ್ಯಕ್ಷೇತ್ರ ಎಂದೇ ಪ್ರಸಿದ್ಧಿ ಗಳಿಸಿರುವ ಶ್ರೀಶೈಲಂನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದೆ. ಶ್ರೀಶೈಲಂನಲ್ಲಿರುವ ಖಾಸಗಿ ಛತ್ರವೊಂದರಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಪಟ್ಟವರನ್ನು ಶ್ರೀ ಸತ್ಯಸಾಯಿ ಜಿಲ್ಲೆಯ ಬಟ್ಟಲಪಲ್ಲಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಕಳೆದ ತಿಂಗಳು 28 ರಂದು ವಡ್ಡೇರಾ ಖಾಸಗಿ ಅನ್ನದಾನ ಸತ್ರಂನ ಕೊಠಡಿ ಸಂಖ್ಯೆ 11 ರಲ್ಲಿ ಆತ್ಮಹತ್ಯೆಗೆ ಶರಣಾದವರು ಬಂದು ನೆಲೆಸಿದ್ದರು. ಕುಟುಂಬದ ಸದಸ್ಯರು ಆರಂಭದ ದಿನಗಳಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವುದು ಹಾಗೂ ದೇವಸ್ಥಾನದ ಪ್ರಸಾದ / ಊಟ ಮಾಡುವ ನಿಯಮಿತ ದಿನಚರಿಯನ್ನು ಅನುಸರಿಸುತ್ತಿದ್ದರು ಎಂದು ಹೇಳಲಾಗಿದೆ.
ನಿತ್ಯವೂ ದೇವಸ್ಥಾನಕ್ಕೆ ಬರುತ್ತಿದ್ದ ಕುಟುಂಬದವರು ಮೂರು ದಿನವಾದರೂ ಕಾಣಿಸಿಕೊಂಡಿಲ್ಲ. ಸತತ ಮೂರು ದಿನಗಳ ಕಾಲ ಕೊಠಡಿ ಲಾಕ್ ಆಗಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ವಿಷಯವು ಅನುಮಾನಕ್ಕೂ ಕಾರಣವಾಗಿದೆ. ಅಲ್ಲದೆ ಕೊಠಡಿಯ ಆವರಣದಿಂದ ಬರುತ್ತಿದ್ದ ಬಲವಾದ ದುರ್ವಾಸನೆಯಿಂದ ಗಾಬರಿಗೊಂಡ ಛತ್ರದ ಸಿಬ್ಬಂದಿ ಕಿಟಕಿಯ ಮೂಲಕ ನೋಡಿದಾಗ ಐವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯರು ಹಾಗೂ ಛತ್ರದ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಡಿಎಸ್ಪಿ ರಾಮಾಂಜಿ ನಾಯಕ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಬಾಗಿಲು ತೆಗೆದಿದೆ. ಕೊಠಡಿಯ ಸ್ನಾನಗೃಹದಲ್ಲಿ ಮೂವರು ಮಹಿಳೆಯರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಇಬ್ಬರು ಪುರುಷರು ಮುಖ್ಯ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗಳಿಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಮೃತರನ್ನು ಸುಧಾಕರ್ (36), ಗೋಗುಳ ಆದಿಲಕ್ಷ್ಮಿ (50), ಮಲ್ಲೇಶ್ವರಿ (45), ಶ್ರೀದೇವಿ (33) ಹಾಗೂ ಮಣಿಕಂಠ (15) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಈ ಕುಟುಂಬದ ಸದಸ್ಯರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು. ಅಲ್ಲದೆ ಹೆಚ್ಚುತ್ತಿರುವ ಸಾಲಗಳಿಂದ ಕುಟುಂಬದ ಸದಸ್ಯರು ಈ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರಬಹುದು ಎಂದು ಹೇಳಲಾಗಿದೆ.
ಮುಂದುವರಿದು ಇಬ್ಬರು ಸಹೋದರಿಯರ ವೈವಾಹಿಕ ಸಮಸ್ಯೆಗಳು, ಅವಿವಾಹಿತ ಸಹೋದರಿಯ ಜವಾಬ್ದಾರಿ ಹಾಗೂ ಭಾರಿ ಸಾಲದ ಹೊರೆ ಕುಟುಂಬವನ್ನು ಸಂಕಷ್ಟಕ್ಕೆ ದೂಡಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು, ಓರ್ವ ಸಹೋದರಿಯ ಹದಿಹರೆಯದ ಮಗನೂ ಸೇರಿದಂತೆ ಕುಟುಂಬದ ಐವರು ಶ್ರೀಶೈಲಂನಲ್ಲಿ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Srisailam Tragedy: ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?
ಇನ್ನು ಈ ಐವರು ಮೃತಪಟ್ಟು ಮೂರು ದಿನಗಳಾದರೂ ವಿಷಯ ತಿಳಿದಿರಲಿಲ್ಲ. ಮೂರು ದಿನಗಳ ನಂತರ ಹೋಟೆಲ್‌ನ ಸಿಬ್ಬಂದಿಗೆ ಅನುಮಾನ ಬಂದಿದೆ. ಅಲ್ಲದೆ ರೂಮ್‌ನಿಂದ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಕಿಟಕಿ ಮೂಲಕ ಪರಿಶೀಲನೆ ಮಾಡಿದಾಗ ಈ ಪ್ರಕರಣವು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.


Click it and Unblock the Notifications
