ಅಬ್ಬಬ್ಬಾ!ರಾಜಮಂಡ್ರಿಯಲ್ಲಿ ತಯಾರಾಗಿದೆ 8ಸಾವಿರ ಕೆಜಿ ಲಡ್ಡು
ರಾಜಮಂಡ್ರಿ, ಸೆಪ್ಟೆಂಬರ್, 16 : ಆಂಧ್ರಪ್ರದೇಶದ ಬೇಕರಿಯೊಂದು ಗಣೇಶೋತ್ಸವಕ್ಕೆ ದೈತ್ಯಗಾತ್ರದ ಲಡ್ಡು ತಯಾರು ಮಾಡಿದೆ. ಈ ದೈತ್ಯ ಗಾತ್ರದ ಲಡ್ಡು ಐದನೇ ಬಾರಿ ಗಿನ್ನೆಸ್ ದಾಖಲೆ ಸೇರುವುದಕ್ಕೆ ತವಕಿಸುತ್ತಿದೆ.
ರಾಜಮಂಡ್ರಿಯ ಶ್ರೀ ಭಕ್ತಾಮಜನೇಯ ಸ್ವೀಟ್ಸ್ ಮಾಲಿಕ ಸಾಲ್ದಿ ವೆಂಕಟೇಶ್ವರ ರಾವ್ ಸತತ ನಾಲ್ಕು ವರ್ಷಗಳ ಕಾಲದ ಸತತ ಪ್ರಯತ್ನದಿಂದ 8,000 ಕೆಜಿಯ ದೈತ್ಯ ಲಡ್ಡು ಸಿದ್ಧಗೊಂಡಿದೆ. ಈ ಬೇಕರಿ ಈಗಾಗಲೇ ಲಡ್ಡು ತಯಾರಿಕೆಯಲ್ಲಿ ನಾಲ್ಕು ಬಾರಿ ಗಿನ್ನೆಸ್ ದಾಖಲೆ ಮಾಡಿದೆ.[ನಮ್ಮ ಸನಾತನ ಸಂಸ್ಕೃತಿ ಹಾಳು ಮಾಡುತ್ತಿರುವವರು ಯಾರು?]

8 ಸಾವಿರ ಗಾತ್ರದ ಲಡ್ಡುಗೆ ಈ ಬಾರಿ 'ನವ್ಯಾಂದ್ರ ಲಡ್ಡು' ಎಂದು ನಾಮಕರಣ ಮಾಡಲಾಗಿದೆ. ಬುಧವಾರ ವಿಶಾಖ ಪಟ್ಟಣಂನ ಗಜುವಾಕ ಪ್ರದೇಶದಲ್ಲಿ ಪ್ರತಿಷ್ಠಪಿಸಲಾಗುತ್ತಿರುವ 80 ಅಡಿ ಎತ್ತರದ ಗಣೇಶ ಮೂರ್ತಿಯ ಕಾರ್ಯಕ್ರಮಕ್ಕಾಗಿ ಇದನ್ನು 12 ಕಾರ್ಮಿಕರು, ಕೇವಲ 8 ತಾಸುಗಳಲ್ಲಿ ಸಿದ್ಧಪಡಿಸಿದ್ದಾರೆ ಎಂದುಬೇಕರಿ ಮಾಲೀಕ ವೆಂಕಟೇಶ್ವರ ತಿಳಿಸಿದ್ದಾರೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ಒಡಿಶಾದಿಂದಲೂ ಗಣೇಶ ಹಬ್ಬಕ್ಕೆ ದೈತ್ಯ ಗಾತ್ರದ ಲಡ್ಡುವಿಗೆ ಆಹ್ವಾನ ಬಂದ್ದು, ವಿಜಯವಾಡ ದಂಡಿ ಸೇವಾ ಸಮಿತಿಗೆ 6,400 ಕೆಜಿ ತೂಕದ ಲಡ್ಡು ತಯಾರಿಕೆ ಕಾರ್ಯನಡೆಯುತ್ತಿದ್ದು, ಲಡ್ಡು ವಿತರೆಣಾ ಸಮಿತಿಗೆ 40 ಜನರನ್ನು ನೇಮಿಸಲಾಗಿದೆ.
2011ರಲ್ಲಿ 5,570, 2012ರಲ್ಲಿ 6,599, 2013ರಲ್ಲಿ 7, 132, ಹಾಗೂ ಕಳೆದ ವರ್ಷ 7,858 ಕೆ.ಜಿ ತೂಕದ ಲಡ್ಡು ಮಾಡಲಾಗಿತ್ತು ಎಂದು ಗಿನ್ನೆಸ್ ದಾಖಲೆ ಪುಸ್ತಕ ಸೇರಲು ಹವಣಿಸುತ್ತಿರುವ ಬೇಕರಿ ಮಾಲೀಕರು ತಿಳಿಸಿದರು.












Click it and Unblock the Notifications