ಸ್ಪುಟ್ನಿಕ್ ವಿ ಲಸಿಕೆ; ದೇಶದಲ್ಲಿ ಲಸಿಕೆಗೆ ಬೇಡಿಕೆ ಹೇಗಿದೆ?

ನವದೆಹಲಿ, ಸೆಪ್ಟೆಂಬರ್ 29: ಭಾರತದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗೆ ನೀಡಿದ್ದ ಬೇಡಿಕೆಯನ್ನು ರದ್ದುಗೊಳಿಸುತ್ತಿರುವುದಾಗಿ ತಿಳಿದುಬಂದಿದೆ. ಸರ್ಕಾರದಿಂದ ಇತರೆ ಲಸಿಕೆಗಳ ಉಚಿತ ಡೋಸ್‌ಗಳ ಪೂರೈಕೆ ಹಾಗೂ ಕೆಲವು ಸೌಲಭ್ಯಗಳ ಕೊರತೆಯಿಂದಾಗಿ ಸ್ಪುಟ್ನಿಕ್ ವಿ ಲಸಿಕೆಗೆ ಬೇಡಿಕೆ ತಗ್ಗಿರುವುದಾಗಿ ವರದಿಯಾಗಿದೆ.

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗೆ ಬೇಡಿಕೆ ಕಡಿಮೆ ಇದ್ದು, ಈ ಲಸಿಕೆಗೆ ಹೆಚ್ಚು ಕೋಲ್ಡ್‌ ಸ್ಟೋರೇಜ್ ಅವಶ್ಯಕತೆ ಇರುವುದಿಂದ ಸ್ಪುಟ್ನಿಕ್ ವಿ ಲಸಿಕೆಯನ್ನು ದೇಶದ ಮೂರು ಅತ್ಯುನ್ನತ ಆಸ್ಪತ್ರೆಗಳು ರದ್ದುಗೊಳಿಸಿವೆ ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಖಾಸಗಿ ಮಾರುಕಟ್ಟೆಯಲ್ಲಿ ಮಾತ್ರ ಈ ಲಸಿಕೆಗಳನ್ನು ಮಾರಾಟ ಮಾಡಲಾಗುತ್ತಿದೆ. 'ಈ ಲಸಿಕೆಯ ಸಂಗ್ರಹಣೆಗೂ ಸಮಸ್ಯೆಯಿರುವ ಕಾರಣ ಈಗಾಗಲೇ ಇಟ್ಟಿದ್ದ 2500 ಡೋಸ್‌ಗಳ ಬೇಡಿಕೆಯನ್ನು ರದ್ದುಗೊಳಿಸಲಾಗಿದೆ' ಎಂದು ಪುಣೆಯ ಭಾರತಿ ವಿದ್ಯಾಪೀಠ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಹಿರಿಯ ವೈದ್ಯಕೀಯ ಅಧಿಕಾರಿ ಜಿತೇಂದ್ರ ಓಸ್ವಾಲ್ ಹೇಳಿದ್ದಾರೆ.

Sputnik V Vaccine Orders Cancelled By Most of the Indian Hospitals

'ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗೆ ಬೇಡಿಕೆ ಉತ್ತಮವಾಗಿಲ್ಲ. ಇದುವರೆಗೂ ಕೇವಲ 1% ಮಂದಿ ಸ್ಪುಟ್ನಿಕ್ ಲಸಿಕೆ ತೆಗೆದುಕೊಳ್ಳಲು ಬಯಸಿದ್ದಾರೆ. ಮೇ ತಿಂಗಳಿನಿಂದ ಕಳೆದ ವಾರದವರೆಗೂ ಖಾಸಗಿ ಆಸ್ಪತ್ರೆಗಳು ಭಾರತದಲ್ಲಿ ನೀಡಲಾಗುವ ಎಲ್ಲಾ ಲಸಿಕೆಗಳಲ್ಲಿ ಕೇವಲ 6% ಮಂದಿಗೆ ಸ್ಪುಟ್ನಿಕ್ ವಿ ಲಸಿಕೆ ನೀಡಲಾಗಿದೆ. ಸರ್ಕಾರ ಖಾಸಗಿಯಾಗಿ, ದೇಶೀಯ ಉತ್ಪಾದನೆಯ ಕಾಲು ಭಾಗ ಖರೀದಿಗೆ ಮುಕ್ತಗೊಳಿಸಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾರತ ಸ್ಪುಟ್ನಿಕ್ ವಿ ಲಸಿಕೆಯ ಪ್ರಮುಖ ಉತ್ಪಾದನಾ ದೇಶವಾಗಿದೆ. ವರ್ಷಕ್ಕೆ ಸುಮಾರು 850 ಮಿಲಿಯನ್ ಡೋಸ್‌ಗಳ ಉತ್ಪಾದನೆ ಮಾಡುವ ಯೋಜನೆ ಹೊಂದಿದೆ. ದೇಶೀಯವಾಗಿ ಇದರ ಉತ್ಪಾದನೆ ಕಡಿಮೆಯಾದರೆ ಬೇರೆ ದೇಶಗಳಿಗೆ ರಫ್ತನ್ನು ಹೆಚ್ಚಿಸಬಹುದು ಎಂಬ ಅಂದಾಜಿದೆ.

ಸ್ಪುಟ್ನಿಕ್ ವಿ ಲಸಿಕೆಯ ಭಾರತೀಯ ವಿತರಕ ಡಾ. ರೆಡ್ಡಿ ಲ್ಯಾಬೊರೇಟರೀಸ್ ಲಿಮಿಟೆಡ್‌ ಆಗಿದೆ. ಜೂನ್ ಆರಂಭದಿಂದ ಕೇವಲ 943000 ಡೋಸ್‌ಗಳ ಸ್ಪುಟ್ನಿಕ್ ವಿ ಲಸಿಕೆಯನ್ನು ಆಸ್ಪತ್ರೆಗಳು ನೀಡಿವೆ.

Sputnik V Vaccine Orders Cancelled By Most of the Indian Hospitals

ಭಾರತದಲ್ಲಿ ನೀಡಲಾಗುತ್ತಿರುವ ಆಸ್ಟ್ರಾಜೆನೆಕಾ ಲಸಿಕೆಯನ್ನು ಸಾಮಾನ್ಯ ರೆಫ್ರಿಜೆರೇಟರ್‌ಗಳಲ್ಲಿ ಸಂಗ್ರಹಿಸಬಹುದು. ಸ್ಪುಟ್ನಿಕ್‌-ವಿಗೆ -18 ಡಿಗ್ರಿ ಸೆಲ್ಸಿಯಸ್ ತಾಪಮಾನದ ಅಗತ್ಯವಿದೆ. ಇದರೊಂದಿಗೆ ಈ ಲಸಿಕೆ ಖಾಸಗಿ ಮಾರುಕಟ್ಟೆಯಲ್ಲಿ ಆಸ್ಟ್ರಾಜೆನೆಕಾಗಿಂತ 47% ಹೆಚ್ಚು ದುಬಾರಿ ಎನ್ನಲಾಗಿದೆ. ಈ ಹಲವು ಕಾರಣದಿಂದಾಗಿ ಸ್ಪುಟ್ನಿಕ್ ವಿ ಲಸಿಕೆಗೆ ಬೇಡಿಕೆಯೂ ಕುಸಿದಿದೆ ಎನ್ನಲಾಗಿದೆ.

ಕೋವಿಶೀಲ್ಡ್‌ ಭಾರತದಲ್ಲಿ ಶೇ 88ರಷ್ಟು ಪೂರೈಕೆಯಾಗಿದ್ದರೆ, ಭಾರತ್‌ ಬಯೋಟೆಕ್‌ ಲಸಿಕೆಯು ಕೋವ್ಯಾಕ್ಸಿನ್ ಅನ್ನು ಜನವರಿ ಮಧ್ಯದಿಂದ ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಭಾರತದಲ್ಲಿ ಅನುಮೋದನೆ ಪಡೆದ ಮೂರನೇ ಲಸಿಕೆ ಸ್ಪುಟ್ನಿಕ್ ವಿ ಆಗಿದೆ.

ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಹೇಗಿದೆ?:
ದೇಶದಲ್ಲಿ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 256 ದಿನಗಳಾಗಿದ್ದು, 87 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

ಭಾರತದಲ್ಲಿ ಈವರೆಗೂ 87,61,89,412 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದ್ದು, ದೇಶದಲ್ಲಿ 64,25,70,102 ಮಂದಿಗೆ ಮೊದಲ ಡೋಸ್ ಹಾಗೂ 23,36,19,310 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೂ 84,70,41,325 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+