ತಪ್ಪು ಮಾಹಿತಿ ಹರಡುವ ತಾಣಗಳ ನಿರ್ಬಂಧಕ್ಕೆ ಐಟಿ ಸಚಿವಾಲಯದ ಆದೇಶ

ನವದೆಹಲಿ, ಏಪ್ರಿಲ್ 25: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಬಗ್ಗೆ ತಪ್ಪು ಮಾಹಿತಿಯಿಂದ ಕೂಡಿದ ಹಳೆಯ ಅಂಕಿ-ಅಂಶ ಮತ್ತು ದೃಶ್ಯಾವಳಿಗಳನ್ನು ತೆಗೆದು ಹಾಕುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿದೆ.
ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಕೊವಿಡ್-19ಗೆ ಸಂಬಧವಿಲ್ಲದ ಹಳೆಯ, ತಪ್ಪು ಮಾಹಿತಿಯಿಂದ ಕೂಡಿದ ಹಾಗೂ ಸಾಮಾಜಿಕ ಸೂಕ್ಷ್ಮತೆಗೆ ವಿರುದ್ಧವಾಗಿ ಇರುವ 100 ಪೋಸ್ಟ್ ಗಳನ್ನು ತೆಗೆದು ಹಾಕುವಂತೆ ಸಚಿವಾಲಯ ತಿಳಿಸಿದೆ.

ಕೊರೊನಾ ರೋಗಿಗಳಿಗೆ ಮನೆಯಲ್ಲೇ ಆಕ್ಸಿಮೀಟರ್ ತಪಾಸಣೆ ಹೇಗೆ?
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಇಡೀ ದೇಶವೇ ಹೋರಾಡಲು ಶ್ರಮಿಸುತ್ತಿದೆ. ಇಂಥ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಜನರಲ್ಲಿ ಆತಂಕ ಸೃಷ್ಟಿಸುವುದಕ್ಕಾಗಿ ಸಾಮಾಜಿಕ ಜಾಲತಾಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕವಾಗಿ ಭಯವನ್ನು ಹುಟ್ಟಿಸುವ ಹಾಗೂ ಕೊವಿಡ್-19 ವಿರುದ್ಧ ಹೋರಾಡುವಲ್ಲಿ ಅಡ್ಡಿಯಾಗುವಂತಾ ಈ ವರದಿಗಳನ್ನು ತೆಗೆದು ಹಾಕುವಂತೆ ಸಚಿವಾಲಯ ಸೂಚಿಸಿದೆ.

Spreading Misinformation’ About Corona; IT Ministry Order To Social Media cos To Remove 100 Posts

ನಿರ್ದಿಷ್ಟ ವರದಿಗಳನ್ನು ಗುರುತಿಸಿದ ಸಚಿವಾಲಯ:
ಕೇಂದ್ರ ಗೃಹ ಸಚಿವಾಲಯದ ಶಿಫಾರಸ್ಸಿನ ಪ್ರಕಾರ, ದೇಶದಲ್ಲಿ ಕೋಮು ಸಂವೇದನಾಶೀಲತೆ ಕದಡುವ ವರದಿಗಳನ್ನು ಗುರುತಿಸಿ ಅವುಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೊರೊನಾವೈರಸ್ ಪಿಡುಗು ನಿಯಂತ್ರಿಸುವ ಬಗ್ಗೆ ಸಲಹೆ ನೀಡಿದರೆ ಸ್ವಾಗತಿಸಲಾಗುವುದು. ಅದನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಆದರೆ ಸಾಮಾಜಿಕ ಮಾಧ್ಯಮವನ್ನು ಸರ್ಕಾರದ ವಿರುದ್ಧ ಟೀಕೆಗೆ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಆ ಮೂಲಕ ಸಾಮಾಜಿಕ ಜಾಲತಾಣವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯದ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರಕ್ಕೆ ಫ್ಲಾಗ್ ಮಾಡಿದ 50 ಟ್ವೀಟ್ ಸಂದೇಶಗಳನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಸೂಚನೆ ಮೇರೆಗೆ ತೆಗದು ಹಾಕುವುದರ ಜೊತೆಗೆ ನಿರ್ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ 100 ಪೋಸ್ಟ್ ಮತ್ತು ಸಂದೇಶಗಳನ್ನು ತೆಗೆದು ಹಾಕುವುದಕ್ಕೆ ಸೂಚಿಸಲಾಗಿತ್ತು.
ಒಂದು ಮಾಹಿತಿ ಪ್ರಕಾರ, ಟ್ವಿಟ್ಟರ್ ಸಲ್ಲಿಸಿದ ಲುಮೆನ್ ದತ್ತಾಂಶದಲ್ಲಿ ಕೊರೊನಾವೈರಸ್ ಎರಡನೇ ಅಲೆ ಮತ್ತು ಸರ್ಕಾರವು ಸಾಂಕ್ರಾಮಿಕ ಪಿಡುಗು ನಿರ್ವಹಣೆಯಲ್ಲಿ ವಿಫಲವಾಗಿರುವ ಬಗ್ಗೆ ಮಾಹಿತಿಯನ್ನು ಹೊಂದಿರುವ ಕೆಲವು ಯುಆರ್ಎಲ್ ಅನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಇನ್ನೊಂದು ಕಡೆ ಛತ್ತೀಸ್ ಗಢದಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ 22 ಯೋಧರು ಮೃತಪಟ್ಟಿರುವ ಬಗ್ಗೆ ತಪ್ಪು ಸಂದೇಶ ಮತ್ತು ಫೋಟೋ, ದೃಶ್ಯವನ್ನು ಪ್ರಸಾರ ಮಾಡಿದ ಪೋಸ್ಟ್ ಹಾಗೂ ಯುಆರ್ಎಲ್ ಅನ್ನು ತೆಗೆದು ಹಾಕಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+