ರಾಜೀವ್‌ ಗಾಂಧಿಗೇ ಇಲ್ಲದ್ದು ಮೋದಿಗೆ ಕೊಡ್ಬೇಕಾ?

spg-protection-to-narendra-modi-not-possible-minister-rpn-singh
ನವದೆಹಲಿ, ನವೆಂಬರ್ 6: ಅತ್ತ ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಪಾಕ್ ನಿರ್ದೇಶಿತ ಉಗ್ರರಿಂದ ಜೀವಬೆದರಿಕೆ ಇದೆ. ಹಾಗಾಗಿ ಅವರಿಗೆ ಗರಿಷ್ಠ ಭದ್ರತೆ ಒದಗಿಸಿ ಎಂದು ಬಿಜೆಪಿ ವಕ್ತಾರ ಜಾವಡೇಕರ್‌ ಆಗ್ರಹಿಸಿದ್ದರೆ ಇತ್ತ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಆರ್ ಪಿಎನ್ ಸಿಂಗ್ ಅದೆಲ್ಲಾ ಆಗಾಕಿಲ್ಲ ಎಂದಿದ್ದಾರೆ.

'1991ರಲ್ಲಿ ಮೊದಲ ಹಂತ ಲೋಕಸಭಾ ಚುನಾವಣೆ ನಡೆದಿತ್ತು. ಮುಂದಿನ ಹಂತದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ನಮ್ಮ ನಾಯಕ, ದಿವಂಗತ ರಾಜೀವ್‌ ಗಾಂಧಿ ಅವರು ಪಾಲ್ಗೊಂಡಿದ್ದರು. ಆದರೂ ಅವರಿಗೆ ಕೇವಲ ಸಬ್‌ ಇನ್ಸ್‌ಪೆಕ್ಟರ್‌ ಮಟ್ಟದ ಭದ್ರತೆಯನ್ನು ನೀಡಲಾಗಿತ್ತು. ಪರಿಣಾಮ ಘನಘೋರವಾಗಿತ್ತು. ಹೀಗಿರುವಾಗ ಮೋದಿಗೆ ಅದಕ್ಕಿಂತ ಹೆಚ್ಚಿನ ಭದ್ರತೆ ನೀಡೋದಕ್ಕೆ ಆಗೋದಿಲ್ಲ'.

'ರಾಜೀವ್ ಗಾಂಧಿಯವರನ್ನೂ ಕೂಡ ಭಯೋತ್ಪಾದಕರು ಟಾರ್ಗೆಟ್ ಮಾಡಿದ್ರು. ಆಗಲೂ ಕೂಡ ಸರ್ಕಾರ ಅವರಿಗೆ ಸಬ್‌ ಇನ್ಸ್‌ಪೆಕ್ಟರ್‌ ಮಟ್ಟದ ಭದ್ರತೆಯನ್ನು ನೀಡಲಾಗಿತ್ತು. ಹೀಗಿರುವಾಗ ಮೋದಿಗೆ ಭಯೋತ್ಪಾದಕರು ಟಾರ್ಗೆಟ್‌ ಮಾಡಿದ್ದಾರೆ ಎಂದು ಹೆಚ್ಚಿನ ಭದ್ರತೆ ನೀಡಲು ಸಾಧ್ಯವಿಲ್ಲ' ಎಂದು ಗೃಹ ಸಚಿವ ಆರ್‌ಪಿಎನ್‌ ಸಿಂಗ್‌ ಬಿಜೆಪಿ ಬೇಡಿಕೆಯನ್ನು ಖಂಡತುಂಡವಾಗಿ ತಿರಸ್ಕರಿಸಿದ್ದಾರೆ.

ಇಂದು ನವದೆಹಲಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಜಾವೇಡ್ಕರ್‌ 'ನರೇಂದ್ರ ಮೋದಿ ಅವರನ್ನು ಉಗ್ರರು ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ಮೋದಿಯವರಿಗೆ ಎನ್‌ ಎಸ್‌ ಜಿ ಮಟ್ಟದ ಹೆಚ್ಚಿನ ಭದ್ರತೆಯನ್ನು ನೀಡಬೇಕು' ಎಂದು ಅಗ್ರಹಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ ಸಚಿವ ಆರ್‌ ಪಿಎನ್‌ ಸಿಂಗ್‌ 'ಈಗಾಗಲೇ ಮೋದಿಗೆ ನೀಡಬಹುದಾದ ಗರಿಷ್ಠ ಭದ್ರತೆಯನ್ನು ನೀಡಲಾಗಿದೆ. ಅದಕ್ಕಿಂತಲೂ ಹೆಚ್ಚಿನ ಭದ್ರತೆಯನ್ನು ನೀಡಲಾಗುವುದಿಲ್ಲ. ದಿವಂಗತ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರಿಗೇ ಸಬ್‌ ಇನ್ಸ್‌‌ಪೆಕ್ಟರ್‌ ಮಟ್ಟದ ಭದ್ರತೆ ನೀಡಲಾಗಿತ್ತು. ಅಷ್ಟಕ್ಕೂ SPG protection ಪ್ರಧಾನಿ ಮತ್ತು ಮಾಜಿ ಪ್ರಧಾನಿಗೆ ಮಾತ್ರ. ಹೀಗಿರುವಾಗ ಮೋದಿಗೆ ಸದ್ಯಕ್ಕಿರುವ ಭದ್ರತೆಗಿಂತಲೂ ಹೆಚ್ಚಿನ ಭದ್ರತೆ ನೀಡಲಾಗುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜೀವ್‌ ಗಾಂಧಿಯವರನ್ನೂ ಕೂಡ ಭಯೋತ್ಪಾದಕರು ಟಾರ್ಗೆಟ್ ಮಾಡಿದ್ರು. ಕೊನೆಗೆ ಭಯೋತ್ಪಾದಕರ ಗುಂಡಿನ ದಾಳಿಗೆ ಅವರು ಎದೆಯೊಡ್ಡಿದ್ರು. ಹೀಗಿದ್ದಾಗ್ಯೂ ಅವರಿಗೆ ಸಬ್‌ ಇನ್ಸ್‌‌ಪೆಕ್ಟರ್‌ ಮಟ್ಟದ ಭದ್ರತೆಯನ್ನು ನೀಡಲಾಗಿತ್ತು. ಹೀಗಿರುವಾಗ ಮೋದಿಗೆ ಹೆಚ್ಚಿನ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ರಾಜೀವ್ ಕಾಲವಾದಾಗ ಏನಾಗಿತ್ತು!?: 1991ರಲ್ಲಿ ಶ್ರೀಪೆರಂಬದೂರಿನಲ್ಲಿ ರಾಜೀವ್ ಹತರಾದ ಹಿಂದಿನ ದಿನವಷ್ಟೇ ಮೊದಲ ಹಂತದಲ್ಲಿ 534 ಕ್ಷೇತ್ರಗಳ ಪೈಕಿ 211 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಗಿದಿತ್ತು. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಾಧನೆ ಕಳಪೆಯಾಗಿತ್ತು. ಅದಾಗುತ್ತಿದ್ದಂತೆ ಉಳಿದ ಕ್ಷೇತ್ರಗಳಿಗೆ ಮತ ನಡೆದಾಗ ರಾಜೀವ್ ಹತ್ಯೆಯ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಒಂದಷ್ಟು ಮತಕ್ಷೇತ್ರಗಳನ್ನು ಬಾಚಿಕೊಂಡಿತ್ತು. ಹಾಗಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದ ನರಸಿಂಹ ರಾಯರಿಗೆ ಬಲವಂತದ ಮಾಘ ಸ್ನಾನವಾಗಿ ಅಧಿಕಾರಕ್ಕೆ ಬಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+