ಗಾಂಜಾದ ಔಷಧೀಯ ಬಳಕೆಯ ಕುರಿತು ಸಂಶೋಧನೆ ತ್ವರಿತಗೊಳಿಸಿ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ನವದೆಹಲಿ, ಜೂನ್‌ 9: ಗಾಂಜಾ ಕುರಿತು ಸಂಶೋಧನೆಯನ್ನು ತ್ವರಿತಗೊಳಿಸಬೇಕು ಮತ್ತು ನರರೋಗಗಳು, ಕ್ಯಾನ್ಸರ್ ಮತ್ತು ಅಪಸ್ಮಾರವನ್ನು ಗುಣಪಡಿಸುವಲ್ಲಿ ಅದರ ಔಷಧೀಯ ಸಾಮರ್ಥ್ಯಗಳನ್ನು ಅನ್ವೇಷಿಸಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ವಿಜ್ಞಾನಿಗಳಿಗೆ ಸೂಚನೆ ನೀಡಿದ್ದಾರೆ.

ಜಿತೇಂದ್ರ ಸಿಂಗ್ ಅವರು ಜಮ್ಮುವಿನಲ್ಲಿರುವ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಟಿಗ್ರೇಟಿವ್ ಮೆಡಿಸಿನ್ (CSIR-IIIM) ಕೈಗೊಂಡಿರುವ 'ಗಾಂಜಾ ಸಂಶೋಧನಾ ಯೋಜನೆ'ಯನ್ನು ಪರಿಶೀಲಿಸುವ ಸಭೆಯ ಅಧ್ಯಕ್ಷತೆ ವಹಿಸಿದ್ದರು.

medicinal uses of cannabis

ಗಾಂಜಾ ಕುರಿತು ಈ ಯೋಜನೆಯು ಭಾರತದಲ್ಲಿ ಇದೇ ಮೊದಲನೆಯದಾಗಿದ್ದು, ನರರೋಗಗಳು, ಕ್ಯಾನ್ಸರ್ ಮತ್ತು ಅಪಸ್ಮಾರಕ್ಕೆ ರಫ್ತು ಗುಣಮಟ್ಟದ ಔಷಧವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಯೋಜನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಬೃಹತ್ ಹೂಡಿಕೆ ಅವಕಾಶಗಳಿಗೆ ಉತ್ತೇಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಗಾಂಜಾ ಸಂಶೋಧನೆಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ದೇಶದ ಪ್ರಮುಖ ಸಂಸ್ಥೆಗಳಾದ ಸಿಎಸ್‌ಐಆರ್-ಐಐಐಎಂ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಡುವಿನ ಕೆಲಸ ಮುಖ್ಯ ಎಂದು ಸಿಂಗ್ ಒತ್ತಿ ಹೇಳಿದರು.

medicinal uses of cannabis

ಜಮ್ಮುವಿನಲ್ಲಿರುವ ಈ ಸಂಸ್ಥೆಗಳ ಸಾಮೀಪ್ಯವನ್ನು CSIR-IIIM ನ ಯೋಜನೆಗೆ ಮಾರ್ಕೆಟಿಂಗ್ ತಂತ್ರಗಳು, ಕ್ಲಿನಿಕಲ್ ಪ್ರಯೋಗಗಳು ಮತ್ತು ತಾಂತ್ರಿಕ ಬೆಂಬಲವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಸಹಯೋಗವನ್ನು ಸ್ಥಾಪಿಸಲು ಬಳಸಬಹುದು ಎಂದ ಅವರು ಪರಿಶೀಲನಾ ಸಭೆಯಲ್ಲಿ, ಯೋಜನೆಯಲ್ಲಿನ ಅಡೆತಡೆಗಳನ್ನು ಪರಿಹರಿಸಲು ಮತ್ತು ಸುಗಮ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಗಾರವನ್ನು ನಡೆಸಲು ಯೋಜನೆಯ ಎಲ್ಲಾ ಪಾಲುದಾರರನ್ನು ಸಿಂಗ್ ಕೇಳಿದರು.

2019 ರಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ಗಾಂಜಾದಲ್ಲಿ ಕಂಡುಬರುವ ಕ್ಯಾನಬಿಡಿಯಾಲ್ (ಸಿಬಿಡಿ) ಮತ್ತು ಟೆಟ್ರಾಹೈಡ್ರೊಕಾನ್ನಬಿನಾಲ್ (ಟಿಎಚ್‌ಸಿ) ನಂತಹ ಸಂಯುಕ್ತಗಳ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯನ್ನು ಅನುಮೋದಿಸಿತ್ತು. ಕ್ಯಾನಬಿಡಿಯಾಲನ್ನು ಜೆಲ್‌ಗಳು ಮತ್ತು ಎಣ್ಣೆಗಳಲ್ಲಿ ಬಳಸಲಾಗುತ್ತದೆ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ. ಟೆಟ್ರಾಹೈಡ್ರೊಕಾನ್ನಬಿನಾಲ್ ಸೈಕೋಆಕ್ಟಿವ್ ಪರಿಣಾಮಕ್ಕೆ ಕಾರಣವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಗಾಂಜಾವನ್ನು ಅದರ ವೈದ್ಯಕೀಯ ಬಳಕೆಯನ್ನು ಬೆಂಬಲಿಸುವ ಹೆಚ್ಚುತ್ತಿರುವ ಪುರಾವೆಗಳಿಂದಾಗಿ ಅಂತರಾಷ್ಟ್ರೀಯ ಕಾನೂನಿನಲ್ಲಿ ಮರು-ವರ್ಗೀಕರಣವನ್ನು ಪ್ರಸ್ತಾಪಿಸಿದ ನಂತರ ಸಂಶೋಧನೆಗೆ ಒಪ್ಪಿಗೆ ನೀಡಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+