ಶುಕ್ರವಾರ ಬಿಹಾರ ರೈಲು ಸಹವಾಸ ಮಾಡ ಬೇಡಿ
ಪಾಟ್ನಾ, ಫೆ.27-ಬಿಹಾರ ರಾಜಕೀಯ ಮತ್ತೆ ಸುದ್ದಿಗೆ ಬಂದಿದೆ. 'ನಾಳೆ ಶುಕ್ರವಾರ ಬಿಹಾರ ರೈಲು ಸಹವಾಸ ಮಾಡ ಬೇಡಿ' ಎಂದು ಬಿಜೆಪಿ ಪಕ್ಷವು ಕರೆ ನೀಡಿದೆ.
ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ, ಬಿಜೆಪಿ ಪಕ್ಷವು ನಾಳೆ (ಫೆ. 28) 'ರೈಲ್ ರೋಖೊ' ಆಂದೋಲನ ಹಮ್ಮಿಕೊಂಡಿದೆ. ಹಾಗಾಗಿ, ನಾಳೆ ರೈಲು ಪ್ರಯಾಣ ಮಾಡಬೇಡಿ ಎಂದು ರಾಜ್ಯದ ಜನತೆಗೆ ಮನವಿ ಮಾಡಿದೆ.
ನಾಳೆಯ rail roko ಆಂದೋಲನದಿಂದ ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂದು ವಿಷಾದ ವ್ಯಕ್ತಪಡಿಸಿರುವ ಬಿಜೆಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಾಳೆ ರೈಲು ಸಂಚಾರ ಮಾಡಬೇಡಿ ಎಂದು ಕೋರಿದ್ದಾರೆ. ಈಗಾಗಲೇ ಟ್ರೈನ್ ಟಿಕೆಟ್ ಬುಕ್ ಮಾಡಿಸಿರುವ ಪ್ರಯಾಣಿಕರು ಸಂಚಾರವನ್ನು ರದ್ದು ಪಡಿಸಬಹುದು ಎಂದೂ ಅವರು ಸೂಚಿಸಿದ್ದಾರೆ.

ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕೆಂಬ ಆಗ್ರಹ ಬಹಳ ಹಿಂದಿನಿಂದಲೂ ಕೇಳಿಬಂದಿದೆ. ಆದರೆ ಕೇಂದ್ರ ಸರಕಾರಕ್ಕೆ ಇದಕ್ಕೆ ಸ್ಪಂದಿಸಿಲ್ಲ ಎಂದು ಅವರು ಕಿಡಿಕಾರಿದರು.
ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಮೈತ್ರಿಯಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದರೆ ಬಿಹಾರ ರಾಜ್ಯಕ್ಕೆ ಅಗತ್ಯವಾಗಿ ಕಲ್ಪಿಸಬೇಕೆಂದಿರುವ ವಿಶೇಷ ಸ್ಥಾನಮಾನ ಕೊಡಮಾಡುವುದಾಗಿ ಸುಶೀಲ್ ಕುಮಾರ್ ಮೋದಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಜತೆಗೆ, ಎನ್ ಡಿಎ ಸರಕಾರವು ಮೋತಿಹಾರಿಯಲ್ಲಿ ಬಿಹಾರ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದೂ ಮೋದಿ ತಿಳಿಸಿದ್ದಾರೆ.












Click it and Unblock the Notifications