PM Modi Birthday: ಪ್ರಧಾನಿ ಮೋದಿಗೆ ಕಲಾವಿದನ ಸ್ಪೆಷಲ್ ಗಿಫ್ಟ್
ಒಡಿಶಾ: ಪ್ರಧಾನಿ ಮೋದಿ ಅವರ 73ನೇ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳು & ಬಿಜೆಪಿ ಕಾರ್ಯಕರ್ತರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಹಾಗೇ ಪ್ರಧಾನಿಗೆ ಕಲಾವಿದರು ವಿವಿಧ ರೀತಿಯ ಸರ್ಪ್ರೈಸ್ ನೀಡಿದ್ದಾರೆ. ಹೀಗೆಯೇ ಇಲ್ಲೊಬ್ಬರ ಕಲಾವಿದ ಹೊಗೆಯಲ್ಲೇ ಪ್ರಧಾನಿ ಮೋದಿ ಅವರ ಚಿತ್ರ ಅರಳಿಸುವ ಮೂಲಕ ಅದ್ಭುತ ಉಡುಗೊರೆ ಕೊಟ್ಟಿದ್ದಾರೆ. ಒಡಿಶಾ ಮೂಲದ ಕಲಾವಿದ ಕೊಟ್ಟ ಸ್ಪೆಷಲ್ ಗಿಫ್ಟ್ ಈಗ ಎಲ್ಲೆಲ್ಲೂ ವೈರಲ್ ಆಗುತ್ತಿದೆ.
ಸ್ಮೋಕ್ ಅಂದ್ರೆ ಹೊಗೆಯ ಮೂಲಕ ಕಲೆ ಕೆತ್ತುವ ಕಲಾವಿದನ ಕೈಯಲ್ಲಿ ಪಿಎಂ ಮೋದಿ ಅವರ ಭಾವಚಿತ್ರ ಅರಳಿದೆ. ಒಡಿಶಾ ಮೂಲದ ದೀಪಕ್ ಬಿಸ್ವಾಲ್ ಈ ರೀತಿ ವಿಶೇಷವಾದ ಉಡುಗೊರೆ ನೀಡಿದವರು. ಹಾಗೇ ಪ್ರಧಾನಿ ಮೋದಿಯವರ ಫೋಟೋ ಹಿಂದೆ ಒಡಿಶಾದ ಭವ್ಯ ಪರಂಪರೆ ಬಿಂಬಿಸುವ ಕೋನಾರ್ಕ್‌ನ ಸೂರ್ಯ ದೇವಾಲಯದ ಚಕ್ರವನ್ನೂ ದೀಪಕ್ ಚಿತ್ರಿಸಿದ್ದಾರೆ. ಆದರೆ ಇದಕ್ಕೆ ಕಲಾವಿದ ಬಳಸಿದ್ದು ಕೇವಲ ಮೇಣದ ಬತ್ತಿ ಹೊಗೆ, ಸೂಜಿ ಮತ್ತು ಕ್ಯಾನ್ವಾಸ್ ಮಾತ್ರ ಎಂಬುದೇ ವಿಶೇಷ.

ಕೋನಾರ್ಕ್ ಚಕ್ರ ಬಳಸಿದ್ದು ಯಾಕೆ?
ದೀಪಕ್ ಬಿಸ್ವಾಲ್ ರಚಿಸಿರುವ ಪ್ರಧಾನಿ ಮೋದಿ ಅವರ ಭಾವಚಿತ್ರದ ಬಗ್ಗೆ ಅಭಿಮಾನಿಗಳು ಖುಷಿ ಆಗಿದ್ದಾರೆ. ಹಾಗೇ ಈ ಬಗ್ಗೆ ಸ್ವತಃ ಕಲಾವಿದ ದೀಪಕ್ ಬಿಸ್ವಾಲ್ ಮಾತನಾಡಿದ್ದು, ಪಿಎಂ ಮೋದಿ ಅವರ 73ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಈ ಕಲಾಕೃತಿ ರಚಿಸಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೇ ಭಾವಚಿತ್ರದಲ್ಲಿ ಕೋನಾರ್ಕ್ ಚಕ್ರ ರಚಿಸಿದ ಬಗ್ಗೆಯೂ ದೀಪಕ್ ಮಾತನಾಡಿದ್ದು, G20 ಔತಣಕೂಟದಲ್ಲಿ ವಿಶ್ವ ನಾಯಕರು ಮತ್ತು ಪ್ರತಿನಿಧಿಗಳನ್ನು ಸ್ವಾಗತಿಸುವ ವೇಳೆ ಪ್ರಧಾನಿ ಮೋದಿ ಕೋನಾರ್ಕ್ ಚಕ್ರವನ್ನ ಹಿನ್ನೆಲೆಯಾಗಿ ಬಳಸಿಕೊಂಡಿದ್ದ ಘಟನೆ ಮೆಲುಕು ಹಾಕಿದ್ದಾರೆ. ಹಾಗೇ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
#WATCH | Odisha: A Cuttack-based smoke artist, Deepak Biswal makes a portrait of PM Narendra Modi for his 73rd birthday.
— ANI (@ANI) September 16, 2023
PM Modi is celebrating his birthday today, 17th September. pic.twitter.com/xo752bW5z7
ಮೆಟ್ರೋ ರೈಲಲ್ಲಿ ಪ್ರಧಾನಿ ಪ್ರಯಾಣ
ಮತ್ತೊಂದು ಕಡೆ ಇಂದು ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಪಿಎಂ ನರೇಂದ್ರ ಮೋದಿ ಪ್ರಯಾಣಿಕರು & ಮೆಟ್ರೋ ನೌಕರರ ಜೊತೆಗೆ ಸಂವಾದ ನಡೆಸಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನವಾದ ಇಂದು ಪಿಎಂ ನರೇಂದ್ರ ಮೋದಿ ಅವರು ಮೆಟ್ರೊ ಸವಾರಿ ಮಾಡುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರು ದೆಹಲಿ ಧೌಲಾ ಕುವಾನ್ ನಿಲ್ದಾಣದಿಂದ ಮೆಟ್ರೋ ಮೂಲಕ ಪ್ರಯಾಣ ಮಾಡಿ ಗಮನ ಸೆಳೆದಿದ್ದಾರೆ. ಈ ವೇಳೆ ಮೆಟ್ರೋ ರೈಲಿನಲ್ಲಿ ಇದ್ದ ಪ್ರಯಾಣಿಕರಿಗಂತು ಖುಷಿಯೋ ಖುಷಿ.
ಅಷ್ಟಕ್ಕೂ ರಾಷ್ಟ್ರ ರಾಜಧಾನಿ ದೆಹಲಿ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ದ್ವಾರಾಕ ಸೆಕ್ಟರ್-2 ರಿಂದ ಹೊಸ ಮೆಟ್ರೋ ನಿಲ್ದಾಣವಾದ ಯಶೋಭೂಮಿ ದ್ವಾರಕಾ ಸೆಕ್ಟರ್ 25ರ ತನಕ ವಿಸ್ತರಿತ ಮಾರ್ಗವನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಿದ್ದರು. ನಂತರ ಪ್ರಧಾನಿ ಮೋದಿ ಅವರು ಧೌಲಾ ಕುವಾನ್ ನಿಲ್ದಾಣದಿಂದ ಮೆಟ್ರೋ ಪ್ರಯಾಣ ಮಾಡಿ ಗಮನ ಸೆಳೆದರು. ದ್ವಾರಕಾದ ಇಂಟರ್‌ನ್ಯಾಷನಲ್ ಕನ್ವೆನ್ಷನ್ & ಎಕ್ಸ್‌ಪೋ ಸೆಂಟರ್ (ಐಐಸಿಸಿ) ಯಶೋಭೂಮಿ ಮೊದಲ ಹಂತವನ್ನ ಪಿಎಂ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಿದರು.

ಮಕ್ಕಳ ಜೊತೆಗೂ ಮೋದಿ ಮಾತು
ಇನ್ನು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವಾಗ ಜನ ಸಾಮಾನ್ಯರ ಕಷ್ಟ ಸುಖ ಆಲಿಸಿ ಪ್ರಧಾನಿ ಸಾಮಾನ್ಯರಂತೆ ಪ್ರಯಾಣ ಮಾಡಿದರು. ಈ ವೇಳೆ ಮಕ್ಕಳ ಜೊತೆಗೂ ಮಗುವಾಗಿ ಮಾತನಾಡಿದರು. ಹಾಗೇ ವೃದ್ಧರು ಕೂಡ ಪ್ರಧಾನಿ ಮೋದಿ ಅವರ ಜೊತೆ ಅನುಭವವನ್ನ ಹಂಚಿಕೊಂಡರು. ಇನ್ನು ಪ್ರಧಾನಿ ಆಗಮನವು ಸರ್ಪ್ರೈಸ್ ಆಗಿದ್ದರೂ ಮೆಟ್ರೋ ರೈಲಿನಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು. ಹಾಗೇ ರೈಲು ನಿಲ್ದಾಣದಲ್ಲೂ ಭದ್ರತೆ ಹೆಚ್ಚಿಸಲಾಗಿತ್ತು.












Click it and Unblock the Notifications