Supreme Court: ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ತರಾಟೆ!
ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅದ್ರಲ್ಲೂ ಶಿವಸೇನೆ ಹಾಗೂ ಎನ್‌ಸಿಪಿ ಪಕ್ಷಗಳು ಛಿದ್ರವಾಗಿ ಹೋಗಿವೆ. ಈ ಸಂದರ್ಭದಲ್ಲೇ ದೇಶದ ಸರ್ವೋಚ್ಛ ನ್ಯಾಯಾಲಯವು ಕೂಡ ಮಹಾರಾಷ್ಟ್ರ ವಿಧಾನಸಭೆ ಬಗ್ಗೆ ಮಾತನಾಡಿದೆ. ಅಲ್ಲದೆ ನೆರೆಯ ರಾಜ್ಯದ ವಿಧಾನಸಭೆ ಸ್ಪೀಕರ್ ವಿರುದ್ಧ ಸುಪ್ರೀಂ ಗರಂ ಆಗಿದೆ. ಹಾಗಾದ್ರೆ ಇಂದು ಆಗಿದ್ದು ಏನು? ದೇಶದ ಸರ್ವೋಚ್ಛ ನ್ಯಾಯಾಲಯ ಅಂದ್ರೆ ಸುಪ್ರೀಂ ಕೋರ್ಟ್ ಹೇಳಿದ್ದೇನು?
ಎಲ್ಲರಿಗೂ ಗೊತ್ತಿರುವಂತೆ ಕೆಲ ವರ್ಷಗಳ ಹಿಂದೆ ಮಹಾರಾಷ್ಟ್ರ ವಿಧಾನಸಭೆಯು, ದೊಡ್ಡ ಹೈಡ್ರಾಮಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಶಿವಸೇನೆ ಛಿದ್ರವಾಗಿ, ಒಂದು ಬಣ ಬಿಜೆಪಿಯ ಜೊತೆ ಸೇರಿ ಸರ್ಕಾರ ರಚಿಸಿದೆ. ಹಾಗೆ ಇನ್ನೊಂದು ಬಣ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಹೀಗೆ ಮಹಾರಾಷ್ಟ್ರ ರಾಜಕೀಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ, ಸುಪ್ರೀಂ ಕೋರ್ಟ್ ಕೂಡ ಮಹಾರಾಷ್ಟ್ರದ ಬಗ್ಗೆ ಮಾತನಾಡಿದೆ. ಸಿಎಂ ಏಕನಾಥ್ ಶಿಂಧೆ ಅನರ್ಹತೆ ಬಗ್ಗೆ ಮಹತ್ವದ ಹೇಳಿಕೆ ನೀಡಿದೆ.

ಸ್ಪೀಕರ್ ಬಗ್ಗೆ ಸುಪ್ರೀಂ ಹೇಳಿದ್ದೇನು?
ಹೌದು, ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಹಾಗೂ ಹಲವಾರು ಶಾಸಕರ ಅನರ್ಹತೆಯ ಮನವಿ ನಿರ್ಧರಿಸಲು ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ಇಂದು ತರಾಟೆ ತೆಗೆದುಕೊಂಡಿದೆ. ಅಲ್ಲದೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಆದೇಶಗಳನ್ನು ಮೀರಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಸೂಚಿಸಿದೆ. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆ ಮತ್ತೊಮ್ಮೆ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಸುಪ್ರೀಂ ಹೇಳಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಸುಪ್ರೀಂ ಕೋರ್ಟ್ ಸಿಜೆಐ ಹೇಳಿದ್ದೇನು?
ಅಂದಹಾಗೆ ಇಂದು ಸುಪ್ರೀಂ ಕೋರ್ಟ್ ಈ ವಿಚಾರವಾಗಿ ವಿಚಾರಣೆ ನಡೆಸಿತ್ತು, ಸುಪ್ರೀಂ ಕೋರ್ಟ್ ಆದೇಶ ಸೋಲಿಸಲು ಸಾಧ್ಯವಿಲ್ಲ ಎಂದು ಯಾರಾದರೂ ಸ್ಪೀಕರ್‌ಗೆ ಸಲಹೆಯನ್ನು ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠ ಮಹತ್ವದ ಹೇಳಿಕೆ ನೀಡಿದೆ. ಅಲ್ಲದೆ ಇದೇ ವೇಳೆ, ಸಮಸ್ಯೆ ನಿರ್ಧರಿಸುವ ಸಮಯದ ಬಗ್ಗೆ ಕೋರ್ಟ್‌ಗೆ ತಿಳಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನ ಕೇಳಿದೆ.
ಸುಪ್ರೀಂ ಕೋರ್ಟ್ ಖಡಕ್ ಹೇಳಿಕೆ
ಜೊತೆಗೆ ಮುಂದಿನ ವಿಧಾನಸಭೆ ಚುನಾವಣೆ ಮೊದಲು ಅನರ್ಹತೆ ಅರ್ಜಿಗಳ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಇಡೀ ಪ್ರಕ್ರಿಯೆ ನಿರುಪಯುಕ್ತ ಎಂದು ಸುಪ್ರೀಂ ಕೋರ್ಟ್ ಸಿಜೆಐ ಹೇಳಿದ್ದಾರೆ. ಅಲ್ಲದೆ ಸಭಾಧ್ಯಕ್ಷರ ಕಾಲಮಿತಿಯಿಂದ ತೃಪ್ತರಾಗದಿದ್ದರೆ 2 ತಿಂಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸುವುದಾಗಿ ಪೀಠವು ಇಂದು ಹೇಳಿದೆ. ಭಾರತ ಸಂವಿಧಾನಕ್ಕೆ ವಿರುದ್ಧವಾದ ನಿರ್ಧಾರ ಇದ್ದಾಗ ಈ ನ್ಯಾಯಾಲಯ ರಿಟ್ ಅನ್ನ ಚಲಾಯಿಸಬೇಕಾಗುತ್ತೆ ಎಂಬ ಮಾತನ್ನೂ ದೇಶದ ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಅಂದಹಾಗೆ ಇದೇ ಸೆಪ್ಟೆಂಬರ್ 18ರಂದು, ಶಿಂಧೆ ಮತ್ತು ಇತರ ಶಾಸಕರ ವಿರುದ್ಧದ ಅನರ್ಹತೆ ಅರ್ಜಿ ತೀರ್ಪಿನ ಸಮಯ ವಿವರಿಸುವಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿತ್ತು. ಇದೀಗ ಮಹಾರಾಷ್ಟ್ರ ಸ್ಪೀಕರ್ ವಿರುದ್ಧ ಸುಪ್ರೀಂ ಗರಂ ಆಗಿದೆ. ಅಲ್ಲದೆ ಮಹಾರಾಷ್ಟ್ರ ಸ್ಪೀಕರ್ ಅವರನ್ನ ತರಾಟೆಗೂ ತೆಗೆದುಕೊಂಡಿದೆ. ಈ ನಡುವೆ ಮುಂದೆ ಮಹಾರಾಷ್ಟ್ರ ರಾಜಕೀಯದಲ್ಲಿ ಇನ್ನೂ ಏನೇನು ಬದಲಾವಣೆ ಆಗುತ್ತೋ ಕಾದು ನೋಡಬೇಕಿದೆ. ಲೋಕಸಭೆ ಚುನಾವಣೆಗೂ ಮುನ್ನ ಮತ್ತೊಮ್ಮೆ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಈಗ ಕಾವೇರಿದೆ.
ಇದೀಗ ಮಹಾರಾಷ್ಟ್ರದಲ್ಲಿ ಶಿವಸೇನೆಯ ಒಂದು ಬಣ ಹಾಗೂ ಎನ್‌ಸಿಪಿಯ ಇನ್ನೊಂದು ಬಣ ಮತ್ತು ಬಿಜೆಪಿ ಪಕ್ಷವು ಸೇರಿ ಸರ್ಕಾರವನ್ನ ರಚಿಸಿದೆ. ಹಾಗೆ ಲೋಕಸಭೆ ಚುನಾವಣೆಗೆ ಒಗ್ಗಟ್ಟಿನ ಹೋರಾಟ ನಡೆಸಲು ಈ ಮೂರು ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಆದರೆ ಈ ಸಮಯದಲ್ಲಿ ಸುಪ್ರೀಂ ಆದೇಶ ನೆರೆ ರಾಜ್ಯದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.












Click it and Unblock the Notifications