ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಥವರನ್ನು ಇನ್ನೈದು ವರ್ಷ ಸಹಿಸಿಕೊಳ್ಬೇಕಾ? ಅಂತಿದ್ದಾರೆ ಯೋಗಿ!

ಲಕ್ನೋದ ವಿಧಾನ ಸಭೆಯ ಹಸಿಬಿಸಿ ಸುದ್ದಿಯೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜೀವ್ ಜ್ಯೋತಿ ಯಾತ್ರೆಯನ್ನು ಉದ್ಘಾಟಿಸಿದ ಸುದ್ದಿಯವರೆಗೂ ಚಿತ್ರ ಸಮೆತ ಮಾಹಿತಿ ಇಲ್ಲಿದೆ.

|
Google Oneindia Kannada News

ಲಕ್ನೋ, ಮೇ 16: ಇನ್ನು ಐದು ವರ್ಷ ಇಂಥವರ ಎದುರು ಹೇಗಪ್ಪ ಸರ್ಕಾರ ನಡೆಸೋದು..? ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಚಿಸಲೇಬೇಕಾದ ಪರಿಸ್ಥಿತಿ ನಿನ್ನೆ (ಮೇ 16) ಲಕ್ನೋದ ವಿಧಾನ ಸಭೆಯಲ್ಲಿ ಏರ್ಪಟ್ಟಿತ್ತು!

ಉತ್ತರ ಪ್ರದೇಶ ಅಸೆಂಬ್ಲಿ ಸಭೆಯಲ್ಲಿ ಎಸ್ ಪಿ ಶಾಸಕರು ವರ್ತಿಸಿದ ರೀತಿ, ಯಾಕಾದರೂ ಓಟು ನೀಡಿದೆವೋ ಎಂದು ಜನಸಾಮಾನ್ಯರು ಪರಿತಪಿಸುವಂತಿತ್ತು! ಉತ್ತರ ಪ್ರದೇಶದಲ್ಲಿ ಹೊಸ ಸರ್ಕಾರ ಬಂದ ಮೇಲೆ ಇದು ಮೊದಲ ಅಧಿವೇಶನ.[ಸಿಎಂ ಹುದ್ದೆಗೆ ಆಯ್ಕೆಯಾಗಿದ್ದು ಹೇಗೆ? ಯೋಗಿ ಆದಿತ್ಯನಾಥ್ ಬಿಚ್ಚಿಟ್ಟ ಸತ್ಯ]

ಅಧಿವೇಶನ ಆರಂಭವಾಗಿ ರಾಜ್ಯಪಾಲ ರಾಮ್ ನಾಯ್ಕ್ ಭಾಷಣ ಆರಂಭಿಸುತ್ತಿದ್ದಂತೆಯೇ ಪ್ರತಿಪಕ್ಷ ಸಮಾಜವಾದಿ ಪಕ್ಷದ ಶಾಸಕರು ಪೇಪರ್ ರಾಕೆಟ್ ಮಾಡಿ ಗವರ್ನರ್ ಎಡೆಗೆ ಎಸೆದು ಪುಂಡಾಟ ಆರಂಭಿಸಿದರು.

ಸರ್ಕಾರದ ಹಲವು ಯೋಜನೆಗಳನ್ನು, ನಿಯಮಗಳನ್ನು ವಿರೋಧಿಸಿದ ಎಸ್ಪಿ ನಾಯಕರು, ಪ್ಲೆಕಾರ್ಡ್ ತೋರಿಸಿ, ಸಿಳ್ಳೆ ಹೊಡೆದು, ಗಲಾಟೆ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಅಸಮಾಧಾನ ವ್ಯಕ್ತಪಡಿಸುವ ಅವಸರದಲ್ಲಿ, ವಿಧಾನ ಸಭೆಯಲ್ಲಿ ಭಾಗವಹಿಸುವಾಗ ಇರಬೇಕಾದ ಕನಿಷ್ಠ ಸೌಜನ್ಯವನ್ನೂ ಮರೆತರು!

ಲಕ್ನೋದ ವಿಧಾನ ಸಭೆಯ ಹಸಿಬಿಸಿ ಸುದ್ದಿಯೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀವ್ ಜ್ಯೋತಿ ಯಾತ್ರೆಯನ್ನು ಉದ್ಘಾಟಿಸಿದ ಸುದ್ದಿಯವರೆಗೂ ಚಿತ್ರ ಸಮೆತ ಮಾಹಿತಿ ಇಲ್ಲಿದೆ.[ಯೋಗಿ ಯೋಜನೆಗೆ ಓಕೆ ಎಂದ ಸುಪ್ರೀಂ ಕೋರ್ಟ್]

ಇದೇನು ಸಂತೆ ಮಾರ್ಕೆಟ್ಟಾ?

ಇದೇನು ಸಂತೆ ಮಾರ್ಕೆಟ್ಟಾ?

ಉತ್ತರ ಪ್ರದೇಶದ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಘೋಷಣೆ ಕೂಗಿದ ಎಸ್ಪಿ ಶಾಸಕರು ಸದನದಲ್ಲಿ ವರ್ತಿಸಿದ ರೀತಿ, ಪ್ರಜಾಪ್ರಭುತ್ವ ವ್ಯವಸ್ಥೆಗೇ ಕಪ್ಪುಚುಕ್ಕೆ ಎನ್ನಿಸಿತು. ಇಂಥವರನ್ನು ತಹಬಂದಿಗೆ ತರೋದು ಹೇಗಪ್ಪಾ ಎಂದು ಸ್ವತಃ ಮುಖ್ಯಮಂತ್ರಿ ಯೋಚಿಸುತ್ತ, ಮೌನವಾಗಿರುವಂತಿದೆ ಈ ಚಿತ್ರ!

ರಾಜೀವ್ ಜ್ಯೋತಿ ಯಾತ್ರಾ

ರಾಜೀವ್ ಜ್ಯೋತಿ ಯಾತ್ರಾ

ಭಯೋತ್ಪಾದನೆ ಮತ್ತು ದೇಶ ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಎದುರಿಸಲು ಒಟ್ಟಾಗಿ ಹೋರಾಡುವ ಸಂಕಲ್ಪದೊಂದಿಗೆ ಕಾಂಗ್ರೆಸ್ ಸರ್ಕಾರ ಆರಂಭಿಸಿರುವ 26ನೇ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಉದ್ಘಾಟಿಸಿದರು. ಈ ಯಾತ್ರೆ ತಮಿಳುನಾಡಿನ ಪೆರಂಬದೂರ್ ನತ್ತ ಹೊರಟಿದೆ.[ಉತ್ತರಪದೇಶದಲ್ಲಿ 5 ರುಪಾಯಿ ಫುಲ್ ಮೀಲ್ಸ್, 3 ರುಪಾಯಿಗೆ ತಿಂಡಿ]

ಕುಲಭೂಷಣ್ ಗಾಗಿ ಭಾರತದ ವಾದ

ಕುಲಭೂಷಣ್ ಗಾಗಿ ಭಾರತದ ವಾದ

ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ನೀಡಿದ್ದ ಪಾಕಿಸ್ಥಾನದ ನಡೆಯನ್ನು ಖಂಡಿಸಿ ನೆದರ್ ಲ್ಯಾಂಡ್ಸ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿದ್ದ ಭಾರತ, ನಿನ್ನೆ ಈ ಕುರಿತು ವಾದ ನಡೆಸಿತು. ಎಡಗಡೆ ಭಾರತೀಯ ವಕೀಲರು, ಬಲಗಡೆ ಪಾಕಿಸ್ಥಾನಿ ವಕೀಲರು ಕುಳಿತು ಪ್ರಕರಣದ ವಾದಕ್ಕೂ ಮುನ್ನ ಸಿದ್ಧತೆ ನಡೆಸಿದ ದೃಶ್ಯ ಇದು.

ಗೋಡೆಗೆ ಚುಂಬಿಸಿ ಪ್ರಾರ್ಥನೆ

ಗೋಡೆಗೆ ಚುಂಬಿಸಿ ಪ್ರಾರ್ಥನೆ

ಇಸ್ರೇಲ್ ನ ಅಮೆರಿಕ ರಾಯಭಾರಿ ಡೇವಿಡ್ ಫ್ರೈಡ್ ಮನ್, ಜೆರುಸಲೇಂ ನ ಓಲ್ಡ್ ಸಿಟಿಯಲ್ಲಿರುವ ಪವಿತ್ರ ಕ್ಷೇತ್ರ ವೆಸ್ಟರ್ನ್ ವಾಲ್ ಗೆ ಭೇಟಿ ನೀಡಿದ್ದ ಸಮಯದಲ್ಲಿ ಗೋಡೆಯನ್ನು ಚುಂಬಿಸುವ ಮೂಲಕ ಯಹೂದಿಗಳ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.[ಅಖಿಲೇಶ್ ಯಾದವ್ ಬ್ಯಾಗ್ ನೇ ವಿತರಿಸಿ ಎಂದ ಯೋಗಿ]

ಸ್ತಬ್ಧವಾಯ್ತು ಚೆನ್ನೈ

ಸ್ತಬ್ಧವಾಯ್ತು ಚೆನ್ನೈ

ನಿನ್ನೆ (ಮೇ 16) ವಿವಿಧ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ತಮಿಳುನಾಡಿನಾದ್ಯಂತ ನಡೆದ ಬಸ್ ಮುಷ್ಕರದಿಂದಾಗಿ ಚೆನ್ನೈನ ಬಸ್ ನಿಲ್ದಾಣವೊಂದು ಕಂಡುಬಂದಿದ್ದು ಹೀಗೆ. ಸದಾ ಜನರ ಜಿಗಿಜಿಗಿಯಲ್ಲೇ ತುಂಬಿ ತುಳುಕುತ್ತಿದ್ದ ಈ ಬಸ್ ನಿಲ್ದಾಣ ಮುಷ್ಕರದ ಬಿಸಿಯಿಂದಾಗ ಸ್ತಬ್ಧವಾಗಿತ್ತು.

ಬಿಳಿ ಹುಲಿಗೂ ಬಿಸಿಲ ಬೇಗೆ

ಬಿಳಿ ಹುಲಿಗೂ ಬಿಸಿಲ ಬೇಗೆ

ಒಡಿಶಾದ ಭುವನೇಶ್ವರದಲ್ಲಿರುವ ಅಭಯಾರಣ್ಯವೊಂದರಲ್ಲಿ ಬಿಸಿಲ ಬೇಗೆ ತಾಳಲಾರದೆ ಐಸ್ ತುಂಡಿನ ಮೇಲೆ ಹೊರಳಾಡುತ್ತ ಕೂಲ್ ಕೂಲ್ ಆಗುತ್ತಿರುವ ಬಿಳಿಹುಲಿಗಳು.

ಕೆಮಿಕಲ್ ಕಾರ್ಖಾನೆಗೆ ಬೆಂಕಿ

ಕೆಮಿಕಲ್ ಕಾರ್ಖಾನೆಗೆ ಬೆಂಕಿ

ಉತ್ತರ ಪ್ರದೇಶದ ಗಾಜಿಯಾಬಾದ್ ನ ಕೆಮಿಕಲ್ ಕಾರ್ಖಾನೆಯೊಂದಕ್ಕೆ ಬೆಂಕಿ ಬಿದ್ದು, ಅದನ್ನು ಆರಿಸಲು ಪ್ರಯತ್ನಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ.

English summary
SP MLAs display placards and raise slogans during the Governor's address to the first sitting of the 17th Uttar Pradesh Assembly in Lucknow on Monday (May 15th)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X