ಯೋಗಿ ಯೋಜನೆಗೆ ಓಕೆ ಎಂದ ಸುಪ್ರೀಂ ಕೋರ್ಟ್
ಲಕ್ಷಾಂತರ ಹುದ್ದೆಗಳು ಉತ್ತರಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಖಾಲಿಯಿದ್ದು, ಮುಖ್ಯಮಂತ್ರಿ ಆದಿತ್ಯನಾಥ್ ಹುದ್ದೆ ಭರ್ತಿಗೆ ಇಟ್ಟಿದ್ದ ಯೋಜನೆಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ
ನವದೆಹಲಿ, ಏಪ್ರಿಲ್ 24: ಉತ್ತರಪ್ರದೇಶದ ಮುಖ್ಯಮಂತ್ರಿ ಸಲ್ಲಿಸಿದ್ದ ಯೋಜನೆಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಅದೇನು ಯೋಜನೆ ಅಂತ ಕೇಳ್ತೀರಾ? ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯ ಎನಿಸಿರುವ ಉತ್ತರಪ್ರದೇಶಕ್ಕೆ ಲಕ್ಷಗಟ್ಟಲೆ ಪೊಲೀಸರ ನೇಮಕಾತಿ ಅಗತ್ಯವಿತ್ತು. ಆ ಹುದ್ದೆಗಳನ್ನು ಭರ್ತಿ ಮಾಡಲು ಮುಂದಿಟ್ಟಿದ್ದ ಯೋಜನೆಗೆ ಸುಪ್ರೀಂ ಕೋರ್ಟ್ 'ಓಕೆ' ಎಂದಿದೆ.
ಒಂದು-ಒಂದೂವರೆ ತಿಂಗಳ ಹಿಂದೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯೋಗಿ ಆದಿತ್ಯನಾಥ್, 33 ಸಾವಿರ ಕಾನ್ ಸ್ಟೇಬಲ್ ಗಳು ಹಾಗೂ ಇನ್ ಸ್ಪೆಕ್ಟರ್ ಗಳನ್ನು ಪ್ರತಿ ವರ್ಷ ನೇಮಕ ಮಾಡಲಾಗುವುದು. 2021ರ ಸೆಪ್ಟೆಂಬರ್ ಹೊತ್ತಿಗೆ ಅಗತ್ಯ ಇರುವ ಹುದ್ದೆಗಳನ್ನು ತುಂಬಲಾಗುವುದು ಎಂದಿದ್ದರು.[ಸರ್ಕಾರಿ ಕಚೇರಿಗಳ ಸುಧಾರಣೆಗೆ ಸಿಎಂ ಯೋಗಿ ಮತ್ತೊಂದು ಹೆಜ್ಜೆ]

ಇದೀಗ ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಇನ್ನೂ ತಡವಾದರೆ ಮುಖ್ಯ ಕಾರ್ಯದರ್ಶಿ ಅಥವಾ ರಾಜ್ಯ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಮೇಲೆ ತಪ್ಪಿನ ಹೊಣೆ ಬೀಳುತ್ತದೆ ಎಂದಿದೆ. ವಿವಿಧ ರಾಜ್ಯಗಳಲ್ಲಿರುವ 5.52 ಲಕ್ಷ ಪೊಲೀಸರ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.[ಮಹಾಪುರುಷರ ಜಯಂತಿಗೆ ಶಾಲೆಗಿಲ್ಲ ರಜಾ: ಯೋಗಿ ಆದಿತ್ಯನಾಥ್]

ಅದರಲ್ಲಿ ಉತ್ತರಪ್ರದೇಶದಲ್ಲೇ 1.5 ಲಕ್ಷ ಹುದ್ದೆಗಳಿವೆ. ಒಟ್ಟಾರೆ ಅನುಮೋದನೆ ಸಿಕ್ಕಿರುವ ಹುದ್ದೆಗಳು 3.5 ಲಕ್ಷ. ಅದರೊಳಗೆ ಕಾನ್ ಸ್ಟೆಬಲ್, ಅಧಿಕಾರಿಗಳ ಹುದ್ದೆ ಎಲ್ಲ ಸೇರಿವೆ. ಅಂದಹಾಗೆ 2013ರಲ್ಲಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಲಾಗಿತ್ತು.












Click it and Unblock the Notifications