40 ದಿನಗಳ ನಂತರ ಇಡೀ ದೇಶ ವ್ಯಾಪಿಸಿದ ನೈಋತ್ಯ ಮುಂಗಾರು
ನವದೆಹಲಿ, ಜುಲೈ 13: ನಲವತ್ತು ದಿನಗಳ ನಂತರ ನೈಋತ್ಯ ಮುಂಗಾರು ಇಡೀ ದೇಶವನ್ನು ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಘೋಷಿಸಿದೆ.
ನಿಗದಿತ ದಿನಕ್ಕಿಂತ ಐದು ದಿನಗಳ ಕಾಲ ವಿಳಂಬವಾಗಿ ನೈಋತ್ಯ ಮುಂಗಾರು ಇಡೀ ದೇಶಕ್ಕೆ ವ್ಯಾಪಿಸಿದೆ. ಇದರ ಪರಿಣಾಮ ಉತ್ತರ ಭಾರತ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿರುಸಿನ ಮಳೆಯಾಗುತ್ತಿರುವುದಾಗಿ ಇಲಾಖೆ ತಿಳಿಸಿದೆ.
ಜೂನ್ 3ರಿಂದ ಕೇರಳ ಪ್ರವೇಶಿಸಿದ್ದ ಮುಂಗಾರು ಆರಂಭಿಕ ಹಂತದಲ್ಲೇ ಕ್ಷೀಣಿಸಿತ್ತು. ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆಯಾಗಿರಲಿಲ್ಲ. ಜೂನ್ 19ರ ನಂತರ ಮುಂಗಾರು ಸ್ತಬ್ಧವಾಗಿತ್ತು. ಜುಲೈ 7ರ ನಂತರ ಮತ್ತೆ ಮುಂಗಾರು ಚುರುಕು ಪಡೆಯುವುದಾಗಿ ಹವಾಮಾನ ಇಲಾಖೆ ಅಂದಾಜಿಸಿತ್ತು. ಮುಂದೆ ಓದಿ...

ನಿರೀಕ್ಷೆಗಿಂತ ಐದು ದಿನ ವಿಳಂಬವಾದ ಮುಂಗಾರು
ಜುಲೈ 8ರಿಂದ ದೇಶದಲ್ಲಿ ಮುಂಗಾರು ಚುರುಕಾಗುವುದಾಗಿ ಹವಾಮಾನ ಇಲಾಖೆ ತಿಳಿಸಿತ್ತು. ಇದೀಗ ಐದು ದಿನಗಳ ವಿಳಂಬದ ನಂತರ ಮುಂಗಾರು ಚುರುಕಾಗಿದೆ. ನಾಲ್ಕು ದಿನಗಳಿಂದ ಬಂಗಾಳ ಕೊಲ್ಲಿಯಲ್ಲಿ ತೇವಾಂಶ ಗಾಳಿ ಬೀಸುತ್ತಿರುವುದರಿಂದ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಮಳೆಯಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

40 ದಿನಗಳ ನಂತರ ಪ್ರಾರಂಭಿಕ ಹಂತ ಮುಗಿಸಿದ ಮುಂಗಾರು
ದೆಹಲಿಯಲ್ಲಿ ಇಂದು ಮುಂಗಾರು ಮಳೆ ಆರಂಭವಾಗಿದ್ದು, ಇನ್ನು ಮುಂದೆ ಹರಿಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮಳೆ ಆರಂಭವಾಗಲಿದೆ ಎಂದು ತಿಳಿಸಿದೆ. ಮುಂಗಾರು ತನ್ನ ಪ್ರಾರಂಭಿಕ ಹಂತವನ್ನು ಪೂರೈಸಲು 40 ದಿನಗಳನ್ನು ತೆಗೆದುಕೊಂಡಿದೆ. ಒಂದೂವರೆ ತಿಂಗಳ ನಂತರ ಮುಂಗಾರು ಮಳೆ ಮತ್ತೆ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ಮುಂಗಾರು ಪ್ರಭಾವ
ಜುಲೈ 12ರಿಂದ ಜುಲೈ 16ರವರೆಗೂ ಕರ್ನಾಟಕದಲ್ಲಿ ಅತಿ ಹೆಚ್ಚಿನ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಧಿಕ ಮಟ್ಟದಲ್ಲಿ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. "ಜುಲೈ 12ರಿಂದ ಜುಲೈ 16ರವರೆಗೂ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದೆ. ಜುಲೈ 10-16ರವರೆಗೂ ಕೆಲವು ಪ್ರದೇಶದಲ್ಲಿ ಭಾರೀ ಮಳೆ ದಾಖಲಾಗಲಿದೆ" ಎಂದು ಪಾಟೀಲ್ ತಿಳಿಸಿದ್ದಾರೆ.
ಕೇರಳದ ನಂತರ ಜೂನ್ 6ರಂದು ರಾಜ್ಯ ಪ್ರವೇಶಿಸಿದ್ದ ಮುಂಗಾರು, ಕೆಲವೇ ದಿನಗಳಲ್ಲಿ ಕ್ಷೀಣಿಸಿತ್ತು. ಜೂನ್ 19ರ ನಂತರವಂತೂ ಮಳೆ ಸಂಪೂರ್ಣ ಸ್ತಬ್ಧವಾಗಿತ್ತು. ಜುಲೈ 7ರ ನಂತರವಷ್ಟೇ ಮುಂಗಾರು ಚುರುಕುಪಡೆಯಲಿದೆ. ಜುಲೈ 2ನೇ ವಾರದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
Recommended Video

ಜುಲೈ ತಿಂಗಳಿನಲ್ಲಿ ಉತ್ತಮ ಮಳೆ: ಐಎಂಡಿ
ಜುಲೈ ತಿಂಗಳ ಎರಡನೇ ವಾರದಲ್ಲಿ ನೈಋತ್ಯ ಮುಂಗಾರು ಚುರುಕು ಪಡೆಯಲಿದೆ. ಆಗ ದೇಶಾದ್ಯಂತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ಈ ಹಿಂದೆ ತಿಳಿಸಿದ್ದರು. "ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ ಸಹಜವಾಗಿರಲಿದೆ. ಜುಲೈನಲ್ಲಿ 94 ರಿಂದ 106% (ದೀರ್ಘಾವಧಿ ಸರಾಸರಿ) ಮಳೆಯಾಗುವ ಸಾಧ್ಯತೆಯಿದೆ" ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಅದರಂತೆ ಈಗ ಮುಂಗಾರು ಇಡೀ ದೇಶವನ್ನು ವ್ಯಾಪಿಸಿದೆ.












Click it and Unblock the Notifications