Special Train: ದಸರಾ, ದೀಪಾವಳಿಯಲ್ಲಿ ತೀರ್ಥಯಾತ್ರೆಗೆ ಹೋಗುವವರಿಗೆ ಗುಡ್‌ನ್ಯೂಸ್: ಮೈಸೂರಿನಿಂದ ರಾಮೇಶ್ವರಕ್ಕೆ ವಿಶೇಷ ರೈಲು

ಮುಂಬರುವ ಹಬ್ಬದ ಸೀಸನ್‌ನಲ್ಲಿ ಊರಿಗೆ ಅಥವಾ ತೀರ್ಥಯಾತ್ರೆಗೆ ಹೋಗಬೇಕೆಂದು ಯೋಚಿಸುತ್ತಿರುವ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನ ನಿಯಂತ್ರಿಸುವ ಉದ್ದೇಶದಿಂದ ಮೈಸೂರು ರಾಮೇಶ್ವರಂ ವಿಶೇಷ ರೈಲು ಸಂಚಾರವನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಈ ವಿಶೇಷ ರೈಲು ಬೆಂಗಳೂರಿನ ಮೆಜೆಸ್ಟಿಕ್, ಕೆಂಗೇರಿ ಹಾಗೂ ದಂಡು ರೈಲು ನಿಲ್ದಾಣಗಳ ಮೂಲಕ ಹಾದುಹೋಗಲಿದ್ದು, ರಾಜ್ಯದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

South Western Railway Announces Mysuru to Rameswaram Special Train to Clear Dasara Diwali Rush

ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯಾಣಿಕರಿಗೆ ಅನುಕೂಲ

ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿದೆ. ನವರಾತ್ರಿ, ದಸರಾ, ದೀಪಾವಳಿ ಹಾಗೂ ಛತ್ ಹಬ್ಬಗಳ ಆಚರಣೆಯ ಸಂಭ್ರಮದಲ್ಲಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ನಿಯಮಿತ ರೈಲುಗಳಲ್ಲಿ ಟಿಕೆಟ್ ಸಿಗುವುದು ಕಷ್ಟ.

ಜೊತೆಗೆ, ಪುಣ್ಯಕ್ಷೇತ್ರವಾದ ರಾಮೇಶ್ವರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಈ ಸಮಯದಲ್ಲಿ ಹೆಚ್ಚಿರುತ್ತದೆ. ಈ ಎಲ್ಲಾ ಅಂಶಗಳನ್ನ ಪರಿಗಣಿಸಿರುವ ನೈಋತ್ಯ ರೈಲ್ವೆಯು ಈ ವಿಶೇಷ ರೈಲು ಸೇವೆಯನ್ನ ಪರಿಚಯಿಸಿದೆ. ಇದರಿಂದ ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರಿನ ಜನರಿಗೆ ತಮಿಳುನಾಡಿನ ರಾಮೇಶ್ವರಕ್ಕೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗಲಿದೆ.

ಮೈಸೂರು ಟು ರಾಮೇಶ್ವರಂ ರೈಲು ವೇಳಾಪಟ್ಟಿ

ಈ ವಿಶೇಷ ರೈಲು (ರೈಲು ಸಂಖ್ಯೆ 06263) ಅಕ್ಟೋಬರ್ 5ರಿಂದ ನವೆಂಬರ್ 30ರವರೆಗೆ ಪ್ರತಿ ಸೋಮವಾರ ಸಂಜೆ 6:35ಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಿಂದ ತನ್ನ ಪ್ರಯಾಣ ಆರಂಭಿಸಲಿದೆ. ರಾತ್ರಿ 8:26ಕ್ಕೆ ಕೆಂಗೇರಿ, 9:15ಕ್ಕೆ ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್), ಹಾಗೂ 10:50ಕ್ಕೆ ಬೆಂಗಳೂರು ದಂಡು (ಕಂಟೋನ್ಮೆಂಟ್) ನಿಲ್ದಾಣವನ್ನ ತಲುಪಲಿದೆ. ಬಳಿಕ ಮರುದಿನ (ಮಂಗಳವಾರ) ಬೆಳಿಗ್ಗೆ 11 ಗಂಟೆಗೆ ರಾಮೇಶ್ವರಂ ತಲುಪಲಿದೆ.

ಇನ್ನು, ಹಿಂದಿರುಗುವ ಮಾರ್ಗದಲ್ಲಿ (ಅಕ್ಟೋಬರ್ 6ರಿಂದ ಆರಂಭ) ಈ ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 3:30ಕ್ಕೆ ರಾಮೇಶ್ವರದಿಂದ ಹೊರಡಲಿದೆ. ಬುಧವಾರ ಮುಂಜಾನೆ 4:23ಕ್ಕೆ ಬೆಂಗಳೂರು ದಂಡು, 5:05ಕ್ಕೆ ಕೆಎಸ್ಆರ್ ಬೆಂಗಳೂರು, 5:39ಕ್ಕೆ ಕೆಂಗೇರಿ ನಿಲ್ದಾಣಕ್ಕೆ ಬರಲಿದೆ. ಅಂತಿಮವಾಗಿ ಬೆಳಿಗ್ಗೆ 7:45ಕ್ಕೆ ಮೈಸೂರು ತಲುಪಲಿದೆ. ಎರಡೂ ಮಾರ್ಗಗಳಲ್ಲಿ ಮಂಡ್ಯ ಮತ್ತು ರಾಮನಗರದಲ್ಲಿ ಈ ರೈಲಿಗೆ ನಿಲುಗಡೆ ಒದಗಿಸಲಾಗಿದೆ. ಒಟ್ಟಾರೆಯಾಗಿ ಪ್ರತಿ ದಿಕ್ಕಿನಲ್ಲಿ 9 ಟ್ರಿಪ್‌ಗಳನ್ನ ಈ ರೈಲು ಪೂರೈಸಲಿದೆ.

ನೈಋತ್ಯ ರೈಲ್ವೆ ವಿಶೇಷ ರೈಲಿನ ಬೋಗಿಗಳ ವಿವರ

ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕಾಗಿ ಈ ರೈಲಿನಲ್ಲಿ ಒಟ್ಟು 21 ಬೋಗಿಗಳನ್ನ ಅಳವಡಿಸಲಾಗಿದೆ. ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ಕೋಚ್‌ಗಳನ್ನು ವಿಂಗಡಿಸಲಾಗಿದೆ. ಇದರಲ್ಲಿ 2 ಎಸಿ - 2 ಟೈರ್, 5 ಎಸಿ - 3 ಟೈರ್, 8 ಸ್ಲೀಪರ್‌ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ (ಜನರಲ್) ಬೋಗಿಗಳಿರಲಿವೆ. ಇದರ ಜೊತೆಗೆ 1 ಬ್ರೇಕ್, ಲಗೇಜ್ ಮತ್ತು ಜನರೇಟರ್ ಕಾರ್ ಹಾಗೂ ವಿಶೇಷಚೇತನರಿಗಾಗಿಯೇ ಮೀಸಲಾದ 1 ದ್ವಿತೀಯ ದರ್ಜೆ ಲಗೇಜ್ ಮತ್ತು ದಿವ್ಯಾಂಗ ಜನ ಬೋಗಿಗಳನ್ನು ಇದು ಒಳಗೊಂಡಿರುತ್ತದೆ.

ಹಬ್ಬದ ರಜೆಯ ಕಾರಣದಿಂದಾಗಿ ಈ ರೈಲಿನಲ್ಲಿಯೂ ಟಿಕೆಟ್‌ಗಳು ಬಹುಬೇಗನೆ ಬುಕ್ ಆಗುವ ಸಾಧ್ಯತೆ ಇದೆ. ಹೀಗಾಗಿ, ರಾಮೇಶ್ವರಂಗೆ ತೆರಳಲು ಇಚ್ಛಿಸುವ ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಸಮೀಪದ ರೈಲ್ವೆ ಟಿಕೆಟ್ ಕೌಂಟರ್‌ಗಳ ಮೂಲಕ ಮುಂಚಿತವಾಗಿಯೇ ತಮ್ಮ ಟಿಕೆಟ್‌ಗಳನ್ನ ಕಾಯ್ದಿರಿಸಿಕೊಳ್ಳುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+