ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಆರಂಭ

|
Google Oneindia Kannada News

ಚೆನ್ನೈ, ನವೆಂಬರ್ 7; ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಮೈಸೂರು ನಡುವೆ ಪ್ರಾಯೋಗಿಕ ಓಡಾಟ ಆರಂಭಿಸಿದೆ. ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಅವರು ನವೆಂಬರ್ 11ರಂದು ಚಾಲನೆ ನೀಡಲಿದ್ದಾರೆ. ಇದು ದಕ್ಷಿಣ ಭಾರತದ ಮೊದಲ ಮತ್ತು ದೇಶದ ಐದನೇ ವಂದೇ ಭಾರತ್ ರೈಲು ಇದಾಗಿದ್ದು, ಪ್ರಯಾಣಿಕರ ಸೇವೆಯನ್ನು ಮೋದಿ ಅವರು ಚಾಲನೆ ನೀಡಿದ ಬಳಿಕ ಆರಂಭಿಸಲಿದೆ.

ಚೆನ್ನೈನ ಎಂಜಿ ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ರೈಲು ನಿರ್ಗಮಿಸಿದ್ದು, ಮಧ್ಯಾಹ್ನ 12.30ರ ಸುಮಾರಿಗೆ ಮೈಸೂರು ತಲುಪಲಿದೆ. ಈ ಹೈಸ್ಪೀಡ್ ರೈಲು ಚೆನ್ನೈ ಮೈಸೂರು ಮಧ್ಯೆ 6ಗಂಟೆ 40 ನಿಮಿಷದಲ್ಲಿ 504 ಕಿಮೀ ಸಂಚರಿಸಲಿದೆ. ಮಧ್ಯದಲ್ಲಿ ಬೆಂಗಗಳೂರಿನ ಕಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಾತ್ರ ಒಂದು ಸ್ಟಾಪ್ ಇರಲಿದೆ.

 ಬೆಂಗಳೂರು-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು? ಬೆಂಗಳೂರು-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು?

ಪ್ರಧಾನಿ ಮೋದಿ ಅವರು ನವೆಂಬರ್ 11 ರಂದು ಬೆಂಗಳೂರು ಭೇಟಿ ನೀಡುತ್ತಿದ್ದು ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಮೊದಲ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿಗೆ ಚಾಲನೆ ನೀಡಲಿದ್ದಾರೆ. ಈ ವೇಳೆ 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ.

ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್

ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್

ಟ್ರಯಲ್‌ ವಿಡಿಯೋವನ್ನು ಹೆಚ್ಚುವರಿ ರೈಲ್ವೆ ಮ್ಯಾನೇಜರ್ ಭಾನುವಾರ ವಿಡಿಯೋ ಟ್ವೀಟ್ ಮಾಡಿದ್ದಾರೆ. ಕೊನೆಗೂ ಒಳ್ಳೆಯ ಸುದ್ದಿ ಬಂತು. ಟ್ರಯಲ್ ರನ್‌ಗಾಗಿ ವಂದೇ ಭಾರತ್ ಚೆನ್ನೈಗೆ ಬಂದಿದೆ'' ಎಂದು ಬರೆದಿದ್ದಾರೆ.

"ನವೆಂಬರ್ 11 ರಂದು ರಾಜ್ಯದ ರಾಜಧಾನಿಯಲ್ಲಿ ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಚಲಿಸುವ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ಹೆಚ್ಚುವರಿ ನಿರ್ವಹಣೆಗಾಗಿ 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ" ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್

ವಂದೇ ಭಾರತ್ ಎಕ್ಸ್‌ಪ್ರೆಸ್

ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದ ಮೊದಲ ಸೆಮಿ ಹೈಸ್ಪೀಡ್‌ ರೈಲು. ಇದು ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ಇದು ಉತ್ತಮ ವೇಗವರ್ಧನೆ ಮತ್ತು ನಿಧಾನಗತಿಯಿಂದ ಹೆಚ್ಚಿನ ವೇಗವನ್ನು ಸಾಧಿಸಬಹುದು. ಅಲ್ಲದೆ ಇದು ಪ್ರಯಾಣದ ಸಮಯವನ್ನು 25% ರಿಂದ 45% ರಷ್ಟು ಕಡಿಮೆ ಮಾಡುತ್ತದೆ. ಈ ರೈಲು ಒಂದೇ ಬಾರಿಗೆ 0-100 ಕಿಮೀ ವೇಗವನ್ನು 52 ಸೆಕೆಂಡುಗಳಲ್ಲಿ ತಲುಪುತ್ತದೆ. ಎಲ್ಲಾ ವಂದೇ ಭಾರತ್ ಕೋಚ್‌ಗಳು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿವೆ. ಜಿಪಿಎಸ್‌ ಆಧಾರಿತ ಆಡಿಯೋ, ದೃಶ್ಯ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್-ಬೋರ್ಡ್ ಹಾಟ್‌ಸ್ಪಾಟ್ ವೈಫೈ ಮತ್ತು ಅತ್ಯಂತ ಆರಾಮದಾಯಕ ಆಸನ ಹಾಗೂ ಎಕ್ಸಿಕ್ಯೂಟಿವ್‌ ಕ್ಲಾಸ್‌ನಲ್ಲಿ ತಿರುಗುವ ಕುರ್ಚಿಗಳನ್ನು ಸಹ ಹೊಂದಿದೆ.

ಗಂಟೆಗೆ ಸರಾಸರಿ 74 ಕಿಮೀ ವೇಗ

ಗಂಟೆಗೆ ಸರಾಸರಿ 74 ಕಿಮೀ ವೇಗ

ರೈಲಿನಲ್ಲಿರುವ ಶೌಚಾಲಯಗಳು ಜೈವಿಕ ನಿರ್ವಾತ ಮಾದರಿಯವು. ದಿವ್ಯಾಂಗ್ ಸ್ನೇಹಿ ವಾಶ್ ರೂಮ್‌ಗಳು ಮತ್ತು ಬ್ರೈಲ್ ಅಕ್ಷರಗಳಲ್ಲಿ ಸೀಟ್ ಸಂಖ್ಯೆಗಳೊಂದಿಗೆ ಸೀಟ್ ಹ್ಯಾಂಡಲ್ ಅನ್ನು ಸಹ ರೈಲಿನಲ್ಲಿ ಒದಗಿಸಲಾಗಿದೆ. ಪ್ರತಿ ಕೋಚ್‌ನಲ್ಲಿ ಬಿಸಿ ಊಟ, ಬಿಸಿ ಮತ್ತು ತಂಪು ಪಾನೀಯಗಳನ್ನು ಪೂರೈಸಲು ಪ್ಯಾಂಟ್ರಿ ವ್ಯವಸ್ಥೆ ಸಹ ಇರುತ್ತದೆ. ರೈಲು ಸಂಖ್ಯೆ 20607 ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ಜಂಕ್ಷನ್ ಬೆಂಗಳೂರು ಸಿಟಿ ಜಂಕ್ಷನ್‌ನಲ್ಲಿ ಕೇವಲ 1 ನಿಲುಗಡೆಯನ್ನು ಹೊಂದಿರುತ್ತದೆ. ರೈಲು ಚೆನ್ನೈ ಮತ್ತು ಮೈಸೂರು ನಡುವೆ ಒಟ್ಟು 504 ಕಿಮೀ ದೂರವನ್ನು ಕ್ರಮಿಸುತ್ತದೆ ಮತ್ತು ಪ್ರಯಾಣವನ್ನು ಪೂರ್ಣಗೊಳಿಸಲು 6 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಗಂಟೆಗೆ ಸರಾಸರಿ 74 ಕಿಮೀ ವೇಗದಲ್ಲಿ ಇದು ಓಡುತ್ತದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಮಾರ್ಗ

ವಂದೇ ಭಾರತ್ ಎಕ್ಸ್‌ಪ್ರೆಸ್ ಮಾರ್ಗ

ರೈಲು 16 ಬೋಗಿಗಳನ್ನು ಹೊಂದಿರುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಚೆನ್ನೈ-ಬೆಂಗಳೂರು-ಮೈಸೂರು ಈ ಮಾರ್ಗದಲ್ಲಿ ಚಲಿಸುತ್ತಾ ಚೆನ್ನೈ ಸೆಂಟ್ರಲ್, ಬೆಂಗಳೂರು ಸಿಟಿ ಮತ್ತು ಮೈಸೂರು ಜಂಕ್ಷನ್ ಇದರ ನಡುವೆ ಪೆರಂಬೂರ್, ವೆಪ್ಪಂಪಟ್ಟು, ಕಟ್ಪಾಡಿ ಜಂಕ್ಷನ್, ಗುಡುಪಲ್ಲಿ ಮತ್ತು ಮಾಲೂರು ದಾಟಿ ಬರಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಚೆನ್ನೈ-ಬೆಂಗಳೂರು-ಮೈಸೂರು ಚೆನ್ನೈ ಸೆಂಟ್ರಲ್ ಮತ್ತು ಮೈಸೂರು ನಡುವೆ ಕೇವಲ 1 ನಿಲುಗಡೆಯನ್ನು ಹೊಂದಿರುತ್ತದೆ.

English summary
South India's first Vande Bharat Express train has started trial run between Chennai-Mysure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X