Rameshwaram Cafe: ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್‌ ಪ್ರೀ ವೆಡ್ಡಿಂಗ್‌ನಲ್ಲಿ ಏನೇನು ತಯಾರಿಸಲಿದೆ ರಾಮೇಶ್ವರಂ ಕೆಫೆ?

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮತ್ತು ಎರಡನೇ ಪ್ರೀ ವೆಡ್ಡಿಂಗ್ ಪಾರ್ಟಿಯನ್ನು ಆಯೋಜಿಸಲಾಗಿದೆ. ಬಾಲಿವುಡ್‌ನ ಎಲ್ಲಾ ದೊಡ್ಡ ತಾರೆಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಈ ಪ್ರೀ ವೆಡ್ಡಿಂಗ್‌ ಪಾರ್ಟಿಯಲ್ಲಿ ಖಾದ್ಯವನ್ನು ತಯಾರಿಸುವ ಹೊಣೆಗಾರಿ ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆ ಹೆಗಲಿಗೆ ಬಿದ್ದಿದೆ.

ರಾಮೇಶ್ವರಂ ಕೆಫೆಯು ಅನಂತ್-ರಾಧಿಕಾ ಅವರ ವಿವಾಹಪೂರ್ವ ಸಮಾರಂಭದಲ್ಲಿ ಭಾಗವಹಿಸಿದ ದಕ್ಷಿಣ ಭಾರತದ ಏಕೈಕ ರೆಸ್ಟೋರೆಂಟ್ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ. ರಾಮೇಶ್ವರಂ ಕೆಫೆಯ ತಂಡವು ತನ್ನ ವಿಶೇಷ ಆಹಾರದೊಂದಿಗೆ ಕ್ರೂಸ್ ಪಾರ್ಟಿಯ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಮದುವೆಗೆ ಮುಂಚಿನ ಪಾರ್ಟಿಗೆ ಸಂಬಂಧಿಸಿದ ಕೆಲವು ಮಾಹಿತಿ ಆಗಿದ್ದು, ರಾಮೇಶ್ವರಂ ಕೆಫೆ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

South Indian Delicacies at Anant Ambani-Radhika Merchant s Bangalore Pre-Wedding Bash

ಪ್ರಿ ವೆಡ್ಡಿಂಗ್‌ನಲ್ಲಿ ಏನೆಲ್ಲಾ ಖಾದ್ಯ?

ದಕ್ಷಿಣ ಭಾರತದ ಚೈನ್‌ ಸಿಸ್ಟಮ್‌ ಹೊಟೇಲ್‌ ಸಮಾರಂಭದಲ್ಲಿ ಪುಡಿ ಇಡ್ಲಿ, ಪುಡಿ ದೋಸಾ ಸೇರಿದಂತೆ ಹಲವು ದಕ್ಷಿಣ ಭಾರತದ ಖಾದ್ಯಗಳನ್ನು ಪ್ರೀ ವೆಡ್ಡಿಂಗ್‌ನಲ್ಲಿ ಭಾಗವಹಿಸಿದ ಅತಿಥಿಗಳಿಗೆ ಉಣ ಬಡಿಸಲಾಗಿದೆ ಎಂದು ರಾಮೇಶ್ವರಂ ಕೆಫೆಯ ರಾಘವೇಂದ್ರ ರಾವ್‌ ಹೆಡ್‌ಲೈನ್‌ ಟುಡೆಗೆ ಹೇಳಿದ್ದಾರೆ. ಅತಿಥಿಗಳು ಪುಡಿ ಇಡ್ಲಿ, ಪುಡಿ ದೊಸೆಯನ್ನು ಅತಿಥಿಗಳು ಆನಂದಿಸಿದ್ದಾರೆ.

ರಾಯಲ್‌ ವೆಡ್ಡಿಂಗ್‌ನಲ್ಲಿ ಭಾಗವಹಿಸಿದ ಸಂತೋಷವನ್ನು ರಾಮೇಶ್ವರ ಕೆಫೇ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಅಲ್ಲದೆ ಪ್ರೀ ವೆಡ್ಡಿಂಗ್‌ಗೆ ಬಂದಿದ್ದ ಅತಿಥಿಗಳು ತಮ್ಮ ಖಾದ್ಯವನ್ನು ಆನಂದಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

South Indian Delicacies at Anant Ambani-Radhika Merchant s Bangalore Pre-Wedding Bash

ರಾಮೇಶ್ವರಂ ಕೆಫೆ ಸ್ಪೆಷಾಲಿಟಿ

ರಾಮೇಶ್ವರಂ ಕೆಫೆ ಸಸ್ಯಾಹಾರಿಗಳ ಪ್ರಮುಖ ಆಕರ್ಷಣೆ. ಈ ಕೆಫೆಯಲ್ಲಿ ನೀವು ಉತ್ತಮ ಗುಣಮಟ್ಟದ ಆಹಾರವನ್ನು ಪಡೆಯಬಹುದ. ಇಲ್ಲಿನ ಆಹಾರ ಶುಚಿ ಮತ್ತು ರುಚಿಯಾಗಿರುತ್ತದೆ. ಇಲ್ಲಿಯ ರುಚಿಕರವಾದ ದಕ್ಷಿಣ ಭಾರತೀಯ ಆಹಾರ ಮತ್ತು ಈ ಕೆಫೆಯ ಶುಚಿತ್ವವು ಅದರ ದೊಡ್ಡ ವೈಶಿಷ್ಟ್ಯಗಳಾಗಿವೆ, ಇದು ಗ್ರಾಹಕರನ್ನು ಆಕರ್ಷಿಸುತ್ತದೆ.

ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವದ ಕೇಟರಿಂಗ್ ಜವಾಬ್ದಾರಿಯೊಂದಿಗೆ ರಾಮೇಶ್ವರಂ ಕೆಫೆ ಮತ್ತೊಮ್ಮೆ ನೀಡಲಾಗಿತ್ತು. ಈಗ ಅನಂತ್-ರಾಧಿಕಾ ಅವರ ಎರಡನೇ ಪ್ರೀ ವೆಡ್ಡಿಂಗ್ ಕ್ರೂಸ್ ಪಾರ್ಟಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

South Indian Delicacies at Anant Ambani-Radhika Merchant s Bangalore Pre-Wedding Bash

ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಯಾರು ಯಾರಿದ್ದರು?

ಬಾಲಿವುಡ್ ನಟರಾದ ರಣವೀರ್ ಸಿಂಗ್, ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಶಾರುಖ್ ಖಾನ್, ರಣವೀರ್ ಸಿಂಗ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಪ್ರೀ ವೆಡ್ಡಿಂಗ್ ಪಾರ್ಟಿಯ ಚಿತ್ರಗಳು ಮತ್ತು ವೀಡಿಯೊಗಳು ಸದ್ಯ ಸಾಮಾಜಿಕ ತಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಕೇಟಿ ಪೆರ್ರಿ ಮತ್ತು ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಮತ್ತು ಗಾಯಕ ಗುರು ರಾಂಧವಾ ಪ್ರದರ್ಶನ ನೀಡಿದರು ಎಂದು ವರದಿಯಾಗಿದೆ.

ಜುಲೈ 12 ರಂದು ಮುಂಬೈನ ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್ ಮತ್ತು ರಾಧಿಕಾ ವಿವಾಹವಾಗಲಿದ್ದಾರೆ. ಜುಲೈ 12 ರಂದು ವಿವಾಹ ನಡೆಯಲಿದೆ, ಜುಲೈ 13 ರಂದು ಆಶೀರ್ವಾದ ಸಮಾರಂಭ ನಡೆಯಲಿದೆ, ನಂತರ ಜುಲೈ 14 ರಂದು ಮದುವೆಯ ಆರತಕ್ಷತೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+