Train Cancellation: ಭಾರೀ ಮಳೆಗೆ ಆರು ರೈಲುಗಳ ಸಂಚಾರ ರದ್ದು, ವೇಳಾಪಟ್ಟಿ

ಬೆಂಗಳೂರು, ಸೆಪ್ಟಂಬರ್ 02: ಭಾರೀ ಮಳೆಯ ಅವಾಂತರ ಮುಂದುವರಿದಿದೆ. ಇದರಿಂದಾಗಿ ರೈಲು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕಳೆದ ಭಾನುವಾರ ಆರು ರೈಲುಗಳ ಸಂಚಾರ ಸ್ಥಗಿತಗೊಳಿಸಿದ್ದ ದಕ್ಷಿಣ ಮಧ್ಯ ರೈಲ್ವೆಯು ಇದೀಗ ವಿವಿಧ ಮಾರ್ಗದ ರೈಲುಗಳ ಮಾರ್ಗ ಬದಲಾವಣೆ ಮಾಡಿ ವೇಳಾಪಟ್ಟಿ ಪ್ರಕಟಿಸಿದೆ. ಮುಂದಿನ ಒಂದೆರಡು ದಿನಗಳವರೆಗೆ ಈ ರೈಲು ಸ್ಥಗಿತ ಮುಂದುವರಿಯಲಿದೆ.

ಭಾರೀ ಮಳೆಯ ಕಾರಣದಿಂದಾಗಿ ಅನೇಕ ಕಡೆಗಳಲ್ಲಿ ರೈಲು ಹಳಿಗಳ ಮೇಲೆ ನೀರು ನಿಂತಿದೆ. ಇದರಿಂದ ಸಂಚಾರ ಸಮಸ್ಯೆ ಎದುರಾಗಿದೆ. ಆದ್ದರಿಂದ ದಕ್ಷಿಣ ಮಧ್ಯ ರೈಲ್ವೆ ಆರು ರೈಲು ರದ್ದುಗೊಳಿತದಲ್ಲದೇ ಇತರ ಕೆಲವು ರೈಲುಗಳ ಮಾರ್ಗ ಬದಲಾಯಿಸಿದೆ.

South Central Railway Cancelled six Trains Due Rain and Flood in Track Check Full list

ರದ್ದುಗೊಂಡ ರೈಲುಗಳು ಪಟ್ಟಿ

*ವಿಜಯವಾಡ-ಸಿಕಂದರಾಬಾದ್ ರೈಲು (ಸಂಖ್ಯೆ 12713)

* ಸಿಕಂದರಾಬಾದ್-ವಿಜಯವಾಡ ರೈಲು (ಸಂಖ್ಯೆ 12714)

* ಗುಂಟೂರು-ಸಿಕಂದರಾಬಾದ್ ರೈಲು (ಸಂಖ್ಯೆ 17201)

* ಸಿಕಂದರಾಬಾದ್-ಸಿರ್ಪುರ್ ಕಾಘಜ್‌ನಗರ ರೈಲು (ಸಂಖ್ಯೆ 17233)

* ಸಿಕಂದರಾಬಾದ್ ಮತ್ತು ಗುಂಟೂರು ರೈಲು (ಸಂಖ್ಯೆ 12706)

* ಗುಂಟೂರು ಮತ್ತು ಸಿಕಂದರಾಬಾದ್ (ಸಂಖ್ಯೆ 12706) ರೈಲುಗಳು ರದ್ದಾಗಿವೆ.

ಮಾರ್ಗ ಬದಲಾದ ರೈಲುಗಳ ಪಟ್ಟಿ

* ವಿಶಾಖಪಟ್ಟಣಂ- ನಾಂದೇಡ್ ಎಕ್ಸ್‌ಪ್ರೆಸ್‌ ರೈಲು (20811) ಮಾರ್ಗ ಬದಲಾಯಿಸಲಾಗಿದೆ. ಇದು ವಿಜಯವಾಡ - ಗುಂಟೂರು - ನಲ್ಗೊಂಡ - ಪಗಿಡಿಪಲ್ಲಿ ಮೂಲಕ ಸಂಚರಿಸುತ್ತದೆ.
* ವಿಶಾಖಪಟ್ಟಣಂ- ತಿರುಪತಿ ರೈಲು (12739) ಗುಂಟೂರು - ನಲ್ಗೊಂಡ - ಪಗಿಡಿಪಲ್ಲಿ ಮೂಲಕ ಓಡಾಡಲಿದೆ. ವಿಜಯವಾಡ- ಸಿಕಂದರಾಬಾದ್ ಮಧ್ಯದಲ್ಲಿ ನಿಲುಗಡೆ ಇರುವುದಿಲ್ಲ.
* ತಾಂಬರಂ - ಹೈದರಾಬಾದ್ ರೈಲು (12759) ಗುಂಟೂರು- ನಲ್ಗೊಂಡ - ಪಗಿಡಿಪಲ್ಲಿ ಮಾರ್ಗವಾಗಿ ಸಾಗಲಿದೆ. ಈ ರೈಲು ಸಹ ವಿಜಯವಾಡ - ಸಿಕಂದರಾಬಾದ್ ನಡುವಿನ ಎಲ್ಲಾ ನಿಲುಗಡೆ ಇರುವುದಿಲ್ಲ.
* ಡಣಾಪುರ- ಬೆಂಗಳೂರು ಕಾಜಿಪೇಟ್ ರೈಲು ಸಿಕಂದರಾಬಾದ್- ಸುಳೇಹಳ್ಳಿ- ಗುಂತಕಲ್- ಧರ್ಮಾವರಂ ಮೂಲಕ ಸಂಚಾರ ಸೇವೆ ನೀಡಲಿದೆ.
* ನಿಜಾಮುದ್ದೀನ್- ಕನ್ಯಾಕುಮಾರಿ ರೈಲು (12642) ಬಲ್ಹರ್ಷಾ, ಸಿಕಂದರಾಬಾದ್, ಸುಲೇಹಳ್ಳಿ, ಗುಂತಕಲ್ ಕಡಪ ಮಾರ್ಗವಾಗಿ ರೇಣುಗುಂಟಾ, ಚೆನ್ನೈ ಮೂಲಕ ಸಾಗಲಿದೆ.
* ಸಿಎಸ್‌ಟಿ ಮುಂಬೈ - ಭುವನೇಶ್ವರ ರೈಲು (11019) ಸಿಕಂದರಾಬಾದ್, ಪಗಿಡಿಪಲ್ಲಿ, ಗುಂಟೂರು, ವಿಜಯವಾಡ ಮೂಲಕ ತಿರುಗಿಸಲಾಗಿದೆ. ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ರದ್ದಾಗಿದೆ.
* ಭುವನೇಶ್ವರ - ಸಿಎಸ್‌ಟಿ ಮುಂಬೈ ರೈಲು ವಿಜಯವಾಡ, ಗುಂಟೂರು , ಪಗಿಡಿಪಲ್ಲಿ ಮಾರ್ಗವಾಗಿ ಸಾಗಲಿದೆ.
* ವಿಶಾಖಪಟ್ಟಣಂ - ಎಲ್‌ಟಿಟಿ ಮುಂಬೈ ರೈಲು ವಿಜಯವಾಡ, ಗುಂಟೂರು, ಪಗಿಡಿಪಲ್ಲಿ, ಸಿಕಂದರಾಬಾದ್ ಮೂಲಕ ಸಾಗಲಿದೆ.
* ವಿಶಾಖಪಟ್ಟಣಂ - ಹೈದರಾಬಾದ್ (12727) ರೈಲು ವಿಜಯವಾಡ, ಗುಂಟೂರು, ನಲ್ಗೊಂಡ, ಪಗಿಡಿಪಲ್ಲಿ ಮಾರ್ಗವಾಗಿ ತೆರಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+